ಕರ್ನಾಟಕದ ಬರ್ನಾರ್ಡ್ ಷಾ ಎಂದೇ ಖ್ಯಾತಿಯ ಕೈಲಾಸಂ ಜೀವನ, ಪ್ರತಿಭೆ ಹಾಗೂ ಸಾಧನೆಗಳ ಕುರಿತು ಕಾದಂಬರಿಕಾರ ಅ.ನ.ಕೃಷ್ಣರಾಯರು ಬರೆದ ಕೃತಿ-ಕೈಲಾಸಂ. ಲೇಖಕರು ಹೇಳುವಂತೆ ‘ಕೈಲಾಸಂ ವ್ಯಕ್ತಿಯಲ್ಲ; ಶಕ್ತಿ. ವಿಚಾರದಲ್ಲಿ ಅವರು ಸಂಪ್ರದಾಯ ಶರಣರು. ಆಚಾರದಲ್ಲಿ ಕ್ರಾಂತಿಕಾರರು. ನಗೆಗಾರಿಕೆ ಅವರಿಗೆ ಆರಾಮಧಾಮವಲ್ಲ, ಶಕ್ತ್ಯಾಯುಧ, ಕೈಲಾಸಂ ಕೃತಿಯಿಂದ ತಮ್ಮ ವ್ಯಕ್ತಿತ್ವನ್ನು ಮೆರೆಸುವವರಲ್ಲ; ವ್ಯಕ್ತಿತ್ವದಿಂದ ಕೃತಿಯನ್ನು ಮೆರೆಸುವವರು.’ ಎಂದು ಪ್ರಶಂಸಿಸಿದ್ದಾರೆ.
‘ಕೈಲಾಸಂ ನನಗೆ ತುಂಬಾ ಪ್ರಿಯವಾದ ವ್ಯಕ್ತಿ. ಅವರ ಬಗ್ಗೆ ನನಗೆ ವಿಶ್ವಾಸ ಗೌರವ ಇರುವುದರಿಂದಲೇ ನಾನಿಂಥ ಗ್ರಂಥವನ್ನು ಬರೆಯುವ ಗೋಜಿಗೆ ಹೋದದ್ದು’ ಎಂದೂ ಲೇಖಕರು ಈ ಕೃತಿ ರಚನೆಯ ಸ್ಫೂರ್ತಿಯನ್ನು ತಿಳಿಸಿ, ‘ಆದರೂ, ಕೈಲಾಸಂ ಕುರಿತು ಈ ಕೃತಿಯಲ್ಲಿ ಸಮಗ್ರವನ್ನು ಹೇಳಿದಂತಾಗಿಲ್ಲ’ ಎನ್ನುವ ಮೂಲಕ ಕೈಲಾಸಂ ಅವರ ಘನ ವ್ಯಕ್ತಿತ್ವದ ವಿರಾಟ ಸ್ವರೂಪ ನೀಡಿದ್ದಾರೆ.
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE