ಕಾಗದದ ದೋಣಿ

Author : ನರಸಿಂಹಮೂರ್ತಿ ಹಳೇಹಟ್ಟಿ

Pages 96

₹ 90.00




Year of Publication: 2019
Published by: ಸುಮೇದ ಪ್ರಕಾಶನ
Address: ಶರಣಸಿರಸಗಿ, ಕಲಬುರ್ಗಿ
Phone: 9886100277

Synopsys

ಕಾಗದದ ದೋಣಿ ನರಸಿಂಹ ಮೂರ್ತಿ ಅವರ ವಿಮರ್ಶಾ ಲೇಖನಗಳ ಸಂಕಲನ. ನರಸಿಂಹ ಮೂರ್ತಿ ಅವರ ಮಾತುಗಳಲ್ಲಿಯೇ ತಿಳಿಯುವುದಾದರೆ, 'ಓದು ಒಂದು ಬೌದ್ದಿಕ ವಿಲಾಸ; ಅದೂ ಎಂದೂ ನನಗೆ ಕಷ್ಟ ಎನಿಸಿಲ್ಲ, ಹೊರೆಯಾಗಿಲ್ಲ. ಬದಲಾಗಿ ಖುಷಿ ಉಂಟುಮಾಡಿದೆ, ನೆಮ್ಮದಿಯನ್ನು ನೀಡಿದೆ. ಎಲ್ಲಕ್ಕಿಂತ ಮಿಗಿಲಾಗಿ ನನ್ನ ಬೌದ್ಧಿಕ ವಿಕಾಸಕ್ಕೆ ದಾರಿತೋರುತ್ತಲೇ ಚಿಂತನೆಗೆ, ಆಲೋಚನೆಗೆ ಗುರಿಮಾಡಿದೆ. ಓದಿನೊಂದಿಗೆ ಸಾಗುವ ಬದುಕಿನ ಪಯಣ ಯಾರಿಗಾದರೂ ಆತ್ಮಸಂತೋಷವನ್ನು ನೀಡುತ್ತದೆ ಎಂಬುದು ನನ್ನ ಭಾವನೆ. ಹೀಗೆ ಓದಿನ ಪಯಣದಲ್ಲಿ ನಾನು ಅರಿತ ಕೆಲವು ವಿಷಯಗಳ ಬಗ್ಗೆ ಇಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ' ಎಂದಿದ್ದಾರೆ. ಈ ಕೃತಿಯಲ್ಲಿ ಜನಭಾಷೆ ಮತ್ತು ಪ್ರಭುತ್ವಭಾಷೆಗಳ ಬಗ್ಗೆ ಈಗ ಭಾರತದಾದ್ಯಂತ ಚರ್ಚೆ, ವಾಗ್ವಾದಗಳು ತೀವ್ರವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಆ ಭಾಷಣದ ಬಗ್ಗೆ ಲೇಖಕರು ಬರೆದಿರುವ 'ಸಂಸತ್ ಭವನದಲ್ಲಿ ಮಾಡಿದ ಕನ್ನಡ ಭಾಷಣಕ್ಕೆ ಅರ್ಧ ಶತಮಾನ' ಎಂಬ ಲೇಖನ ತುಂಬಾ ಸಕಾಲಿಕವೂ ಅರ್ಥಪೂರ್ಣವೂ ಆಗಿದೆ. ಆದರ್ಶ, ಬದ್ದತೆಗಳಿಂದ ಕರ್ನಾಟಕದ ರಾಜಕೀಯ ಹಾಗೂ ಬೌದ್ಧಿಕ ವಲಯವನ್ನು ತೀವ್ರವಾಗಿ ಪ್ರಭಾವಿಸಿರುವ ಶಾಂತವೇರಿ ಗೋಪಾಲಗೌಡರನ್ನು ಕುರಿತು ಪುಸ್ತಕಾವಲೋಕನದ ನೆಪದಲ್ಲಿ ಬರೆದಿದ್ದಾರೆ. ಇನ್ನೂ ಇತ್ತೀಚಿನ ಕಾವ್ಯವನ್ನು ಕುರಿತ ಇಲ್ಲಿನ ಕೆಲವು ಲೇಖನಗಳು ಸಮಕಾಲೀನ ಕನ್ನಡ ಕಾವ್ಯದ ಬಗೆಗೆ ಭಿನ್ನವಾದ ಆಯಾಮವನ್ನು ಒದಗಿಸುತ್ತವೆ.

About the Author

ನರಸಿಂಹಮೂರ್ತಿ ಹಳೇಹಟ್ಟಿ

ನರಸಿಂಹಮೂರ್ತಿ ಹಳೇಹಟ್ಟಿ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಳೇಹಟ್ಟಿ ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು' ವಿಷಯವಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ., ಪದವಿ ನೀಡಿದೆ. ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿರುವ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಸಂಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇವರ ಚೊಚ್ಚಲ ವಿಮರ್ಶಾ ಕೃತಿ ’ಕಾಗದದ ದೋಣಿ’. ...

READ MORE

Related Books