ಲೇಖಕಿ ರೇಖಾ ವಿ. ಬನ್ನಾಡಿ ಅವರ ’ಕಡಲು ಕಾಯಕ’ ಕೃತಿಯು ಶಿವರಾಮ ಕಾರಂತರ ವಿಚಾರಗಳನ್ನು ವಿಶ್ಲೇಷಣೆ ಒಳಗೊಂಡಿದೆ. ದುಡಿಮೆಯ ಕುರಿತು ಕಾರಂತರ ಬದುಕಿನಲ್ಲಿ ವ್ಯಕ್ತವಾದ ಚಿಂತನೆಗಳನ್ನು, ಪರಿಸರ ಬಗೆ ಅವರಿಗಿದ್ದ ಆಸಕ್ತಿಯನ್ನು ಹಾಗೂ ದುಡಿಯುವ ಸ್ತ್ರೀಯರ ಅನವರತ ಪರಿಶ್ರಮದ ಕುರಿತು ಇಲ್ಲಿ ವಿವರಿಸಿದ್ದಾರೆ.
ದುಡಿಮೆಯ ಕುರಿತಾದ ಅಧ್ಯಯನದ ಉದ್ದೇಶ, ವ್ಯಾಪ್ತಿ ಹಾಗೂ ಮಹತ್ವಗಳ ವಿವರಣೆಗಳಿಂದ ಆರಂಭವಾಗುವ ಈ ಕೃತಿಯು ಮಾನವನ ದುಡಿಮೆ, ದುಡಿಮೆಯ ವರ್ಗೀಕರಣ ಹಾಗೂ ದುಡಿಮೆಯ ಆಧುನಿಕ ಸಂದರ್ಭಗಳ ಕುರಿತು ಸುದೀರ್ಘವಾಗಿ ಚರ್ಚಿಸುತ್ತದೆ. ಸ್ತ್ರೀವಾದವು ಮಹಿಳೆಯ ಮನೆಯೊಳಗಿನ ದುಡಿಮೆಯನ್ನು ಆರ್ಥಿಕತೆಯ ದೃಷ್ಠಿಯಿಂದ ಪರಿಗಣನೆಗೆ ತೆಗೆದುಕೊಳ್ಳದಿರುವ ಯಜಮಾನನ ದಬ್ಬಾಳಿಕೆಯನ್ನು, ಶೋಷಿಸುವ ಸಂಸ್ಕೃತಿಯನ್ನು ಇಲ್ಲಿ ಲೇಖಕಿ ಪ್ರತ್ಯೇಕವಾಗಿ ಉಲ್ಲೇಖಿಸುತ್ತಾರೆ. ಪುರುಷ ಪ್ರಧಾನ ಸಮಾಜ ತೋರಿದ ಸ್ತ್ರೀಯರ ದುಡಿಮೆಯ ತಾತ್ಸಾರದ ಬಗ್ಗೆ ಕಾರಂತರು ಸೂಚ್ಯವಾಗಿ ಹೇಳುವ ಬಗೆಯನ್ನು ಇಲ್ಲಿ ವಿವರಿಸಲಾಗಿದೆ
ಲೇಖಕಿ ರೇಖಾ ವಿ.ಬನ್ನಾಡಿ ಅವರು ಮೂಲತಃ ಕುಂದಾಪುರ ತಾಲೂಕಿನ ಗುಲ್ವಾಡಿಯವರು. ಬಸ್ರೂರು ಶ್ರೀ ಶಾರಾದಾ ಕಾಲೇಜಿನಲ್ಲಿ ಪದವಿ ಪಡೆದ ಅವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಹಾಗೂ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಲೀಲಾ ಕಾರಂತ, ವಿಜ್ಞಾನ ಸಾಹಿತ್ಯ(ಸಂ), ಕಾರಂತ ದುಡಿಮೆ ಪ್ರಪಂಚ ಕೃತಿಗಳನ್ನು ಪ್ರಕಟಿಸಿದ್ದಾರೆ. ’ಕಾರಂತ ದುಡಿಮೆ ಪ್ರಪಂಚ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಮಲ್ಲಿಕಾ ದತ್ತಿ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಪ್ರಸ್ತುತ ರೇಖಾ ವಿ. ಬನ್ನಾಡಿ ಅವರು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ...
READ MORE