ಕವಿ ಬಿ.ಎ. ಸನದಿ ಅವರ ವಿಮರ್ಶಾ ಕೃತಿ-ಜನಕಾವ್ಯದೃಷ್ಟಿ. ಹಿರಿಯ ಕವಿಗಳ ಕಾವ್ಯಗಳನ್ನುವಿಮರ್ಶೆಗೆ ಒಳಪಡಿಸಿರುವ ಕವಿಗಳು, ಜನರ ಮಧ್ಯೆ ಬೆಳೆದ ಕಾವ್ಯವು ಜನಮನದಲ್ಲಿ ನಿಲ್ಲುತ್ತದೆ. ಹಳೆಯದನ್ನು ಬಿಡದೇ ಹೊಸದನ್ನು ತಿರಸ್ಕರಿಸಿದ ಮನೋಭಾವದೊಂದಿಗೆ ಕವಿತೆ ಬರೆಯಬೇಕು ಎಂಬ ಆಶಯದ ಕವಿತೆಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿಯ ಕಾವ್ಯಗಳನ್ನು ತೀಕ್ಷ್ಣ ವಿಮರ್ಶೆಗೆ ಗುರಿ ಮಾಡಿದ್ದು, ಈ ಕೃತಿಯು ಉತ್ತಮ ವಿಮರ್ಶಾ ಗ್ರಂಥ ಎಂಬ ಖ್ಯಾತಿಯೂ ಇದೆ.
ನಾಟಕಕಾರ, ಕಥೆಗಾರ, ಅನುವಾದಕ ಬಿ.ಎ. ಸನದಿ ಅವರು 1933 ಆಗಸ್ಟ್ 18ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ ಜನಿಸಿದರು. ತಂದೆ ಅಹಮ್ಮದ್, ತಾಯಿ ಆಯೆಷಾ. ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದ ಇವರು ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿಯಾಗಿ, ಪಂಚಾಯತ್ ರಾಜ್ ಪತ್ರಿಕೆಯ ಸಹಾಯಕ ಸಂಪಾದಕರಾಗಿ, ಮುಂಬೈ ಆಕಾಶವಾಣಿಯ ಕುಟುಂಬ ಕಲ್ಯಾಣ ಅಧಿಖಾರಿಯಾಗಿ ಕೆಲಸ ಮಾಡಿ ನಿವೃತ್ತರಾದರು. ಸನದಿಯವರ ತಾಜ್ ಮಹಲ್ ಮತ್ತು ಧೃವ ಬಿಂದು ಕವನ ...
READ MORE(ಹೊಸತು, ಜುಲೈ 2012, ಪುಸ್ತಕದ ಪರಿಚಯ)
ಕವಿ ಬಿ. ಎ. ಸನದಿ ಇಲ್ಲಿ ಇತರರ ಕವನಗಳನ್ನು ವಿವೇಚನಾತ್ಮಕ ಮತ್ತು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ಕಾವ್ಯ ಜನರನ್ನು ತಲುಪಬೇಕು, ಅದು ಸಮುದಾಯದ ಒಳಿತಿಗಿರಬೇಕು, ಅದರಿಂದ ಏನಾದರೂ ಸಾಧಿತವಾಗಬೇಕು ಎಂದು ನಂಬಿದವರು ಸನದಿ. ಇದಕ್ಕೆ ಖಲಿಲ್ ಗಿಬ್ರಾನ್ನ ರೂಪಕ ಕತೆಯೊಂದರ ಸಾರಾಂಶವನ್ನು ಪುಸ್ತಕದಲ್ಲಿ ಉಲ್ಲೇಖಿಸಿದೆ : 'ಒಂದು ಮಹಾಕಾವ್ಯ ರಚಿತವಾಗಿ ಗ್ರಂಥಾಲಯ ಸೇರಿ ಅಥವಾ ಪಂಡಿತರು, ರಾಜ ಮಹಾರಾಜರ ಅರಮನೆಗಳಲ್ಲಿ ಭದ್ರವಾಗಿ ಬೆಚ್ಚಗೆ ಅಲಂಕಾರದ ವಸ್ತುವಿನಂತೆ ಸುದೀರ್ಘಕಾಲ ಉಳಿಯಬಹುದು. ಅರ್ಥಪೂರ್ಣವಾದ ಪುಟ್ಟ ಕವನವೊಂದು ಜನರ ಮನಸೂರೆಗೊಂಡು ಎದೆಯಾಳದಿಂದ ಹಾಡಲ್ಪಟ್ಟು, ಹಾಡುವ-ಕೇಳುವ ಎಲ್ಲರಿಗೂ ಸಂತೋಷನೀಡಿ ಮನದಾಳದಲ್ಲಿ ಸ್ಥಿರವಾಗಿ ಉಳಿಯಬಹುದು. ಮೊದಲನೆಯದು ಕಷ್ಟಪಟ್ಟು ಬಾಳಿಸಿದ್ದು; ಎರಡನೆಯದು ತಾನಾಗಿ ಬಾಳಿದ್ದು' ಸಾಹಿತ್ಯದಲ್ಲಿನ ಶುಷ್ಕ ಮತ್ತು ಆದ್ರ್ರತೆಯ ಪರಿಚಯ. ಇದೇ ಕವಿಯೊಬ್ಬನಿಗಿರಬೇಕಾದ ಜನಕಾವ್ಯದೃಷ್ಟಿ. ಇದು ಎರಡನೆಯ ಮುದ್ರಣ ಆದ್ದರಿಂದ ಇಲ್ಲಿನ ಓದು ನಮ್ಮನ್ನು ಇಪ್ಪತ್ತೈದು ವರ್ಷಗಳಷ್ಟು ಹಿಂದಕ್ಕೆ ಒಯ್ಯುತ್ತದೆ. 'ನಾಳಿನ ಕಾವ್ಯದ ಧೈಯಧೋರಣೆ ಎಂಬ ಇಲ್ಲಿನ ಲೇಖನವೊಂದರಲ್ಲಿ ಅವರು ನೀಡಿದ ಮಾರ್ಗದರ್ಶನದಂತೆ ಕಾವ್ಯ ಸೃಷ್ಟಿಯಾಗಿದೆಯೇ ಎಂಬ ಆತ್ಮಾವಲೋಕನ ನಮಗಿಂದು ಮುಖ್ಯವಾಗುತ್ತದೆ. ಜನರ ನೋವಿಗೆ ಸ್ಪಂದಿಸದ, ಅನ್ಯಾಯಕ್ಕೆ ಪ್ರತಿಭಟಿಸದ ಕಾವ್ಯ ವ್ಯರ್ಥ.