ಹೂತದ ಹುಣಸಿ- ವರಕವಿ ದ.ರಾ.ಬೇಂದ್ರೆಯವರ ಕಾವ್ಯದ ಒಂದು ಪರಿಪಕ್ವ ವಿಮರ್ಶಾ ಕೃತಿ. ಬೇಂದ್ರೆ ಕನ್ನಡವನ್ನು ಪರಿಪರಿಯಾಗಿ ಮಿದ್ದಿ ನಾದಿ ತಮ್ಮ ಕಾವ್ಯಕ್ಕಾಗಿ ಹದಗೊಳಿಸಿದರು. ಎಷ್ಟು ಪರಿಪರಿಯಾಗಿ ಯಥಾರ್ಥವಾಗಿ ಹದಗೊಳಿಸಿದರೆಂಬುದನ್ನು ಅರಿತುಕೊಳ್ಳಬೇಕಾದರೆ ಡಾ.ಜಿ.ಕೃಷ್ಣಪ್ಪನವರನ್ನು ಓದಬೇಕು. ಬೇಂದ್ರೆ ಕಾವ್ಯದ ಮಹಾಸಾಗರದಂತೆ, ಅದರ ಆಳಕ್ಕೆ ಇಳಿದಷ್ಟೂ ಮುಂದೆ ಇನ್ನೂ ತಿಳಿದುಕೊಳ್ಳುವುದು ಬಹಳಷ್ಟಿರುತ್ತದೆ. ಅಂತಹ ಬೇಂದ್ರೆಯವರ ಕಾವ್ಯವನ್ನು ಅಷ್ಟೇ ಸೂಕ್ಷ್ಮವಾಗಿ ವಿವರಿಸಿದವರು ಹಿರಿಯ ವಿಮರ್ಶಕ ಡಾ.ಜಿ.ಕೃಷ್ಣಪ್ಪನವರು. ಹೂತದ ಹುಣಸಿ ಕೃತಿಯೂ ಬೇಂದ್ರೆ ಕಾವ್ಯದ ಕುರಿತಾದ ಜಿ.ಕೃಷ್ಣಪ್ಪನವರ ವಿಮರ್ಶಾ ಲೇಖನಗಳ ಸಂಗ್ರಹ.
’ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿರುವ ಡಾ. ಜಿ.ಕೃಷ್ಣಪ್ಪ ಅವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರು. ಕೃಷ್ಣಪ್ಪ ಅವರು 1948ರಲ್ಲಿ ಬೆಂಗಳೂರಲ್ಲಿ ಜನಿಸಿದರು. ತಂದೆ ಹೆಚ್.ಗಂಗಯ್ಯ, ತಾಯಿ ಸಾವಿತ್ರಮ್ಮ. ಜಿ.ಕೃಷ್ಣಪ್ಪ ಅವರು ಬೇರೆ ಕಾವ್ಯದ ಓದಿಗೆ ಹೊಸ ಆಯಾಮ ಪರಿಚಯಿಸಿದವರು. ಬೆಂಗಳೂರಿನ ಎಸ್.ಟಿ. ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೋಮಾ, ವಾಹನ ನಿರೀಕ್ಷಕರಾಗಿ ವೃತ್ತಿಯಾರಂಭಿಸಿದ ಇವರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ನಿವೃತ್ತಿ. ಉದ್ಯೋಗದ ನಡುವೆ ಬಿ.ಎ, ಎಲ್‌ಎಲ್‌ಬಿ, ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರಾಗಿದ್ದಾರೆ. 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ : ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಮಾಡಿದ್ದಾರೆ.ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ ಬರವಣಿಗೆಗೆ ...
READ MORE