ಹಿರಿಯ ಲೇಖಕ ಡಾ. ಗುರುಪಾದ ಮರಿಗುದ್ದಿ ಅವರ ಕೃತಿ-ಹತ್ತು ತಂತಿಯ ವೀಣೆ. ಸಾಹಿತ್ಯ ವಿಮರ್ಶೆಯನ್ನು ಒಳಗೊಂಡಿದೆ. 10 ವೈವಿಧ್ಯಮಯವಾದ ವಿಮರ್ಶನ ಲೇಖನಗಳಿವೆ. ಸಾಹಿತ್ಯ ಅಧ್ಯಯನದ ಗಂಭೀರತೆ ಮೈಗೂಡಿಸಿಕೊಂಡಿದ್ದು, ಪ್ರತಿ ಲೇಖನಗಳಿಗೂ ಅಡಿಟಿಪ್ಪಣಿಗಳಿವೆ. ಈ ಕ್ರಮವು ಅವರ ಅಧ್ಯಯನದ ಆಳವನ್ನು ಸೂಚಿಸುತ್ತದೆ. ಸರಳವಾದ ನಿರೂಪಣೆ ಇದೆ. ವಿಮರ್ಶೆ ಎಂಬುದು ಸಾಹಿತ್ಯ ಕೃತಿಯನ್ನು ಹೊಸ ನೆಲೆಗೆ ಕೊಂಡೊಯ್ಯುವ ಪ್ರಮುಖವಾದ ಪ್ರಕಾರ. ಎಲ್ಲಿಯೂ ಕೂಡ ವಿಮರ್ಶೆಯ ಸಮತೋಲನಕ್ಕೆ ಚ್ಯುತಿ ಬರದ ಹಾಗೆ, ಅಧ್ಯಯನಶೀಲ ಪ್ರಜ್ಞೆಯನ್ನು ಬರಹಗಳಲ್ಲಿ ಕಾಣಬಹುದು.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MORE