‘ಎಚ್ಚೆಸ್ವಿ ಕಾವ್ಯನೋಟ’ ಕೃತಿಯನ್ನು ಹಿರಿಯ ಸಾಹಿತಿಗಳಾದ ಸುಬ್ರಾಯ ಚೊಕ್ಕಡಿ ಹಾಗೂ ಮಾಲಿನಿ ಗುರುಪ್ರಸನ್ನ ಸಂಪಾದಿಸಿದ್ದಾರೆ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಕಾವ್ಯ ಮತ್ತು ಅವರು ಕಾವ್ಯದ ಕುರಿತು ಹೊಂದಿರುವ ಅನನ್ಯ ಶ್ರದ್ಧೆಯ ಬಗ್ಗೆ ಮತ್ತು ಲಯವನ್ನು ಅವರು ಬಳಸುವ ಕ್ರಮದ ಕುರಿತೂ ಸಾಕಷ್ಟು ಚರ್ಚೆಗಳಿವೆ. ಅವರು ಕಾವ್ಯದಲ್ಲಿ ಗಹನತೆಯನ್ನು ತುಂಬಿಯೇ ಜನರನ್ನು ತಲುಪಿದ ಕವಿ. ಅವರ ಕವಿತೆಗಳ ಕುರಿತು ಸರಳತೆ ಕುರಿತು ಮಾತನಾಡುವುದು ಸುಲಭ. ಏಕೆಂದರೆ ಅವರ ಕವಿತೆಗಳು ಸ್ವರೂಪ ಸರಳ, ಅವರ ಕವಿತೆಗಳನ್ನು ಚೆಲುವು, ರಮ್ಯತೆ, ಆದರ್ಶವಾದದ ಸೀಮಿತ ನೆಲೆಗೆ ಕವಿತೆಗಳನ್ನು ಸೀಮಿತಗೊಳಿಸುವ ಮಾತುಗಳು ಕೇಳಿ ಬರುತ್ತದೆ. ಅವರ ಕಾವ್ಯ ನನ್ನ ಮಟ್ಟಿಗೆ ಸಾಂದ್ರವಾಗಿ ಎಲ್ಲಾ ಕಾಲಕ್ಕೂ ಒಂದೇ ನೆಲೆಯಲ್ಲಿದೆ. ಅದು ಕೌಟುಂಬಿಕ ನೆಲೆಯನ್ನೇ ವ್ಯಕ್ತಿಯ ಗ್ರಹಿಕೆಯ ವಿಧಾನವಾಗಿಸಿದ ಭದ್ರತೆಯ ನೆಲೆಯ ಕಾವ್ಯ. ಅವರು ಚಿತ್ರಿಸಿದ್ದು ಇಂದ್ರಿಯಗಮ್ಯವಾದ ವ್ಯಕ್ತಿ ಜಗತ್ತನ್ನಲ್ಲ; ಬದಲಾಗಿ ಬದುಕುವ ಅದಮ್ಯ ವಿಶ್ವಾಸವನ್ನು, ಇದು ಬದುಕನ್ನೇ ಪುರಾಣೀಕರಿಸಿದ ಕಾವ್ಯ,ಸೃಷ್ಟಿಯಲ್ಲೂ ಬಾಂಧವ್ಯವನ್ನೇ ಕಾಣುವ ಕಾವ್ಯ ಅದು. ಅವರ ಕಾವ್ಯಕ್ಕೆ ಇಂತಹ ಉದಾತ್ತತೆ ಇದ್ದರೂ ಅದು ತಾತ್ತ್ವಿಕ ಚೌಕಟ್ಟಿನ ಬಿಗಿಯಲ್ಲಿ ಸಿಲುಕಿದ ಕಾವ್ಯವಲ್ಲ. ಬದಲಾಗಿ ಸಣ್ಣ ಸಣ್ಣ ಸಂಗತಿಗಳ ಮೂಲಕವೇ ತಾತ್ತ್ವಿಕತೆಯನ್ನು ಕಂಡುಕೊಳ್ಳುವ ಅವರ ಕಾವ್ಯವನ್ನು ಭವ್ಯಸೌಧಕ್ಕೆ ಹೋಲಿಸಿದರೆ ಅಲ್ಲಿ ಸೌಧದಷ್ಟೇ ಪ್ರತಿ ಇಟ್ಟಿಗೆ ಕೂಡಾ ಮುಖ್ಯ ಕಹಿಯನ್ನು ಮರೆತು ಸಿಹಿಯನ್ನು ಬಿಂಬಿಸುವ ಜೀವನ ಧರ್ಮಕ್ಕೆ ಅವರ ಆದ್ಯತೆ. ಈ ನೆಲೆ ಅವರ ಕಾವ್ಯದ ಎಲ್ಲಾ ಘಟ್ಟದಲ್ಲಿಯೂ ಉಳಿದುಕೊಂಡು ಬಂದಿದೆ. ಆ ಕಾವ್ಯದ ಒಳನೋಟವನ್ನು ಈ ಕೃತಿ ಕಟ್ಟಿಕೊಡುತ್ತದೆ.
ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ...
READ MORE