ಎಚ್. ಎಸ್. ಬೇನಾಳರ ಕಾವ್ಯಕಂಬನಿ ಕವನ ಸಂಕಲನ ಸಂತೋಷಕುಮಾರ ಎಸ್ ಕರಹರಿ ಅವರು ವಿಮರ್ಶೆ ಮಾಡಿರುವ ಕೃತಿ. ದಲಿತ-ಬಂಡಾಯದ ಪ್ರಜ್ಞೆ ಅವರ ಅಂಬೇಡ್ಕರರ ಚಿಂತನೆಗಳು ಗದ್ಯ ಬರಹಗಳಲ್ಲಿ ಬಂದರೆ,ಕಾವ್ಯದಲೂ ಈ ಅಂಶಗಳ ಜೊತೆಗೆ ಎಲ್ಲ ಸಾಮಾಜಿಕ, ಪ್ರೀತಿ -ಪ್ರೇಮ ಸಂಗತಿಗಳು ಅರಳಿ ನಿಂತಿವೆ.
ತಮ್ಮ ಓದಿಗೆ ದಕ್ಕಿದ ಹಾಗೆ ಕವನವನ್ನು ಬರಹರೂಪಕ್ಕೆ ಇಳಿಸಿದ್ದಾರೆ.ಇದೊಂದು ಸಹಜ ಕಾವ್ಯದ ಓದಾಗಿ ಪರಿಣಮಿಸಿದೆ. ಧರ್ಮದ ಕುರಿತಾದ ನೇರ ಕವಿತೆಗಳನ್ನು ಬಿಟ್ಟು ಉಳಿದ 32 ಕವನಗಳನ್ನು ವಿಮರ್ಶೆಗೊಳಪಡಿಸಿದ್ದಾರೆ.
ಸಂತೋಷಕುಮಾರ ಎಸ್ ಕರಹರಿ ಅವರು ಆಳಂದ ತಾಲೂಕಿನ ಕರಹರಿ ಗ್ರಾಮದವರು ಆದರೆ ನೆಲೆಸಿದ್ದು ಕಲಬುರಗಿ. ಇವರು ಶಿವಶರಣಪಾ ಮತ್ತು ನಿಂಗಮ್ಮರ ಮಗನಾಗಿ 1982ರ ಜೂನ್ 1 ರಂದು ಜನಿಸಿದರು. ಬಿ. ಎ ಪದವೀಧರರು. ಒಲವಧಾರೆ (ಕವನ ಸಂಕಲನ) ಹಾಗೂ ಬುದ್ಧಲೋಕ (ಕವನ ಸಂಕಲನ) ಇವರ ಕೃತಿಗಳು. ...
READ MORE