ಗಿರೀಶ್ ಕಾರ್ನಾಡರ ನಾಟಕಗಳನ್ನು ಕುರಿತಂತೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆದರೆ ಅನ್ನದಾನೇಶ್ ಅವರ ಅಧ್ಯಯನದ ಸ್ವರೂಪ ಭಿನ್ನವಾದದ್ದು. ಕಾರ್ನಾಡರ ಎಲ್ಲ ನಾಟಕಗಳನ್ನು ವಿಸ್ತ್ರತವಾಗಿ ಅಧ್ಯಯನ ಮಾಡಿರುವುದರ ಜೊತೆಗೆ ಆ ನಾಟಕಗಳ ಮೂಲ, ಪ್ರಭಾವ, ಪ್ರೇರಣೆ ಇತ್ಯಾದಿಗಳನ್ನು ಗುರುತಿಸಿರುವುದು ಮತ್ತು ಮೂಲ ಆಕರಕ್ಕೂ ಕಾರ್ನಾಡರು ನಾಟಕಕ್ಕಾಗಿ ಮಾಡಿಕೊಂಡಿರುವ ವ್ಯತ್ಯಾಸಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿರುವುದು ಈ ಕೃತಿಯ ವಿಶೇಷವಾಗಿದೆ. ಇದೊಂದು ಸಂಶೋಧನಾ ಸ್ವರೂಪದ ಅಧ್ಯಯನವಾಗಿದರೂ ಕಥಾನಕದಂತೆ ಓದಿಸಿಕೊಂಡು ಹೋಗುತ್ತದೆ. ಅಡಿಟಿಪಣಿಗಳ ವಿಪರೀತ ಭಾರವಿಲ್ಲದೆ, ಓದುಗರು ಸರಾಗವಾಗಿ ಕೃತಿಯನ್ನು ಓದಿಕೊಂಡು ಹೋಗಬಹುದು. ಕಾರ್ನಾಡರ ನಾಟಕಗಳನ್ನು ಓದಿಲ್ಲದಿರುವವರಿಗೂ ಈ ಅಧ್ಯಯನ ಅವರ ಸಮಗ್ರ ನಾಟಕ ಲೋಕಕ್ಕೊಂದು ಪ್ರವೇಶ ಒದಗಿಸುತ್ತದೆ.