ಡಾ.ಗೊರೂರರ ಸಾಹಿತ್ಯ

Author : ಹಂಪನಹಳ್ಳಿ ತಿಮ್ಮೇಗೌಡ

Pages 444

₹ 400.00




Year of Publication: 2017
Published by: ಮೇಘ ಪಬ್ಲಿಕೇಷನ್
Address: ನಂ-419, ಡೋರ್ ನಂಬರ್-119, 4ನೇ ಕ್ರಾಸ್, ರಾಜಗೋಪಾಲ್ ನಗರ, ಬೆಂಗಳೂರು-560058

Synopsys

‘ಡಾ.ಗೊರೂರರ ಸಾಹಿತ್ಯ’ ಮರು ಓದು ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರ ಕೃತಿ. ಸಾಂಸ್ಕೃತಿಕ ಸಂಘರ್ಷದ ಸಂದರ್ಭದಲ್ಲಿ ಡಾ. ಹಂಪನಹಳ್ಳಿ ತಿಮ್ಮೇಗೌಡರು ಕಣ್ಣಿಗೆ ಕಾಣುವಂತೆ ಬೆಳೆಯುತ್ತಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಡುಕಾಟಕ್ಕೆ ಮೌಲಿಕತೆ ಇದೆ. 

ಅವರು ಜಾನಪದ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ಜ್ಞಾಪಿಸಿಕೊಳ್ಳುವ ನಡತೆಯನ್ನು ನೋಡಿದರೆ ಸಂಸ್ಕೃತಿಯನ್ನು ಕಟ್ಟುವ ಮನಸ್ಸಿನ ಒಬ್ಬ ಸಭ್ಯ, ಸಜ್ಜನ ಹಾಗೂ ಜೀವಪರ ನಿಲುವಿನ ವ್ಯಕ್ತಿ ಅದರೊಳಗೆ ಅಡಗಿ ಕುಳಿತಿರುವುದು ಗೊತ್ತಾಗುತ್ತದೆ. ಅದರ ಪ್ರತಿಫಲವೇ 'ಡಾ. ಗೊರೂರರ ಸಾಹಿತ್ಯ: ಮರು ಓದು' ಎಂಬ ಕೃತಿಯಾಗಿದೆ. ಖಂಡಿತ ಹಂಪನಹಳ್ಳಿಯವರು ಸಂಸ್ಕೃತಿ ವಿಚ್ಛಿದ್ರಕಾರಕ ಶಕ್ತಿಗಳ ಜೊತೆಗೆ ಸೇರಲಾರರು. ಅವರದೇನಿದ್ದರೂ ಸಂಸ್ಕೃತಿಯನ್ನು ಆಯ್ದ ಇಟ್ಟಿಗೆಗಳಿಂದ ಕಟ್ಟಬೇಕೆಂಬ ಹಂಬಲ, ಜಾನಪದ ಕರ್ನಾಟಕವನ್ನು ಆಮೂಲಕ ದೇಸೀ ಭಾರತವನ್ನು ಕಟ್ಟುವ ಮೂಲ ಚಿಂತನೆ ಇವರದಾಗಿದೆ ಎನ್ನುತ್ತಾರೆ ಪ್ರೊ ಹಿ. ಶಿ. ರಾಮಚಂದ್ರೇಗೌಡ. ಈ ಕೃತಿಯಲ್ಲಿ ಡಾ.ಗೊರೂರರ ಸಾಹಿತ್ಯದ ಕುರಿತಾದ ಮಾಹಿತಿಗಳಿವೆ.

About the Author

ಹಂಪನಹಳ್ಳಿ ತಿಮ್ಮೇಗೌಡ

ಲೇಖಕ ಡಾ. ಹಂಪನಹಳ್ಳಿ ತಿಮ್ಮೇಗೌಡ ಜಾನಪದ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಹಂಪನಹಳ್ಳಿಯವರು ಅಧ್ಯಾಪನ, ಜಾನಪದ ಅಧ್ಯಯನ, ಸಂಘಟನೆ ಮತ್ತು ಸಂವರ್ಧನೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಅವರ ಬರಹಗಳಿಗೆ ಗಟ್ಟಿನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಬರವಣಿಗೆಯ ಭದ್ರತೆಗೆ ಮೊದಲು ಗುರುತಿಸಿಕೊಂಡಿರುವುದು ಸತ್ವಶಾಲಿಯಾದ ಜನಪದ ಭೂಮಿ ಹಾಸನದೊಳಗೆ ಇರುತ್ತ ಅದನ್ನೊಂದು ಸಾಂಸ್ಕೃತಿಕ ಅನನ್ಯತೆಯಾಗಿ ನೋಡುವ ಮೂಲಕ ಅದರೊಳಗೆ ಅಡಗಿರುವ ಎಲ್ಲಾ ಜೀವನ ಶ್ರದ್ದೆಗಳನ್ನು ಹೊರತೆಗೆಯಲು ಯತ್ನಿಸಿದ್ದಾರೆ. ಅವರಿಗೆ ಮಾನವ ಶಾಸ್ತ್ರಜ್ಞನ ಹುಡುಕಾಟದ ಆಸಕ್ತಿಯೂ ಇದೆ. ಜಾನಪದ ವಿದ್ವಾಂಸನ ಕ್ರಿಯಾಶೀಲ ಮನೋಧರ್ಮವೂ ಇದೆ. ಹೀಗಾಗಿ ಅವರ ಜೀವನ ಹುಟುಕಾಟಕ್ಕೆ ಮೌಲಿಕತೆ ಇದೆ. ...

READ MORE

Related Books