‘ಧಾತು:ಅನುಸಂಧಾನ’ ನಾ. ಮೊಗಸಾಲೆ ಅವರ ಧಾತು ಕಾದಂಬರಿಯ ಕುರಿತಾದ ಹಲವು ಲೇಖಕರ ವಿಮರ್ಶೆ, ಅನುಸಂಧಾನ ಲೇಖನಗಳಿವೆ. ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ಸಂಪಾದಿಸಿದ್ದಾರೆ. ಇಲ್ಲಿ ಎಂ.ಎಸ್. ಆಶಾದೇವಿಯವರ ಕೃತಿಯೊಳಗೊಂದು ಪ್ರವೇಶ, ಡಾ. ಬಿ. ಜನಾರ್ಧನ ಭಟ್ ಅವರ ಪ್ರಬುದ್ಧ ಸಂಬಂಧಗಳ ಅನ್ವೇಷಣೆ, ಲಕ್ಷ್ಮೀಶ ತೋಳ್ಪಾಡಿ ಅವರ ಮೊಗಸಾಲೆಗೊಂದು ಪತ್ರ, ಡಾ. ಸಿ. ಆರ್. ಚಂದ್ರಶೇಖರ್, ದೀಪಾ ಪಡ್ಕೆ ಅವರ ಸಹಯಾನದ ಅರಿವಿನ ಧಾತು, ಸಿದ್ದು ಯಾಪಲಪರವಿ ಅವರ ಧಾತುವಿಗೊಂದು ಆಕಾರ, ಸಿ.ಕಾ ಅವರ ಧಾತು ಅರಳಿದ ಪರಿ ಲೇಖನ ಸೇರಿದಂತೆ ಹಲವು ಪ್ರಮುಖ ಲೇಖಕ-ಲೇಖಕಿಯರ ಅತ್ಯುತ್ತಮ ಲೇಖನಗಳಿವೆ.
ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ...
READ MORE