ಧರ್ಮ ಸಮನ್ವಯ ಸಾಹಿತ್ಯ ವಿಮರ್ಶೆ

Author : ಅಬ್ದುಲ್ ಬಷೀರ್‌

Pages 272

₹ 190.00




Published by: ಕನ್ನಡ ಸಾಹಿತ್ಯ ಪರಿಷತ್ತು,
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ ಬೆಂಗಳೂರು-560018

Synopsys

ವಚನ ಸಾಹಿತ್ಯ, ಹರಿದಾಸ ಸಾಹಿತ್ಯ, ಸೂಫಿ ಸಾಹಿತ್ಯ, ತತ್ವಪದ ಸಾಹಿತ್ಯ ಹಾಗೂ ತಳ ಸಮುದಾಯದ ಸಾಹಿತ್ಯಕ್ಕೆ ಸಂಬಂಧಿಸಿದ 25 ವೈವಿಧ್ಯಮಯ ಲೇಖನಗಳು ಈ ಕೃತಿಯಲ್ಲಿವೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ವಿಚಾರಗೋಷ್ಠಿಗಳಲ್ಲಿ ಲೇಖಕರು ಮಂಡಿಸಿದ ಪ್ರಬಂಧಗಳು ಮತ್ತು ಸಾಹಿತ್ಯಕ ಪತ್ರಿಕೆ, ಅಭಿನಂದನ ಗ್ರಂಥ ಹಾಗೂ ಸಂಸ್ಮರಣ ಸಂಪುಟಗಳಲ್ಲಿ ಪ್ರಕಟವಾದ ವಿಮರ್ಶಾ ಲೇಖನಗಳನ್ನು ಒಟ್ಟು ಸೇರಿಸಿ ಕನ್ನಡ ಸಾಹಿತ್ಯ ಪರಿಷತ್ತು ಕೃತಿ ರೂಪದಲ್ಲಿ ಹೊರ ತಂದಿದೆ. ಮುಂಗೋಳಿ ಕೊಂಡಗುಳಿ ಕೇಶಿರಾಜ, ದಸರಯ್ಯ, ಚಂದಿಮರಸ, ಕೊಟ್ಟಣದ ಸೋಮಮ್ಮ ಅವರಂತಹ ವಚನ ಸಾಹಿತಿಗಳ ಅಪರೂಪದ ಮಾಹಿತಿ ಇದರಲ್ಲಿವೆ. ಪ್ರತಿ ಲೇಖನಗಳು ಚಿಂತನೆಗೆ ಒರೆಹಚ್ಚುತ್ತವೆ.  

 

About the Author

ಅಬ್ದುಲ್ ಬಷೀರ್‌
(06 May 1947)

ವ್ಯಾಕರಣ, ಭಾಷೆ, ಕಾವ್ಯಮೀಮಾಂಸೆ, ವಿಮರ್ಶಾಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಬ್ದುಲ್ ಬಷೀರ್‌ರವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ. ತಂದೆ ಅಬ್ದುಲ್ ಗಫೂರ್‌ಸಾಬ್, ತಾಯಿ ಬಿಯಾಂಬಿ. ಪ್ರಾಥಮಿಕ ವಿದ್ಯಾಭ್ಯಾಸ ಗಬ್ಬಾಡಿ ಶಾಲೆಯಲ್ಲಿ ಮುಗಿಸಿದ ಅವರು ಹಾರೋಹಳ್ಳಿ ರೂರಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಆಚಾರ‍್ಯ ಪಾಠಶಾಲೆಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. (ಆನರ್ಸ್), ಮತ್ತು  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. (ಕನ್ನಡ) ಪದವಿ ಪಡೆದಿದ್ದಾರೆ. 1972 ರಲ್ಲಿ ಉದ್ಯೋಗಕ್ಕೆ ಸೇರಿದ ಅವರು ಕಲಿತ ಕಾಲೇಜಿನಲ್ಲೇ ಅಧ್ಯಾಪಕ ವೃತ್ತಿ ಆರಂಭಿಸಿದರು. ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗದ ...

READ MORE

Related Books