‘ದೇಶೀ ದರ್ಶನಗಳು’ ಲೇಖಕ ನ. ರವಿಕುಮಾರ್ ಅವರು ದೇಶೀಯ ದೃಷ್ಟಿಕೋನಗಳ ಬಗೆಗೆ ರಚಿಸಿರುವ ವಿಮರ್ಶಾತ್ಮಕ ಲೇಖನಗಳ ಸಂಕಲನ. ದೇಶಿ ಎಂಬುದು ಜನಸಾಮಾನ್ಯರು ಬಳಸುವ ಆಡುಭಾಷೆ, ಅಂತೆಯೇ ಅದೊಂದು ಛಂದೋರೂಪ. ದೇಶಿಯತೆ ಎನ್ನುವುದು ಒಂದು ಆಲೋಚನಾಕ್ರಮವೂ ಹೌದು. ವಿಶ್ಲೇಷಣಾ ಕ್ರಮವೂ ಹೌದು. ಮಾರ್ಗ ಎಂಬುದು ಬ್ರಹ್ಮಪ್ರಣೀತವಾದದ್ದು, ಒಂದು ದೃಷ್ಟಿಯಿಂದ ಹಿರಿಯರ ಪಿತೃಪಿತಾಮಹರ ದಾರಿ, ಸ್ಮೃತಿಯಲ್ಲಿ ಮಾತ್ರವಿರುವ ದಾರಿ, ಮಾರ್ಗ ತನಗೆ ಬೇಕಾದ ದೇಸಿಯನ್ನು ಪುನರ್ ಸೃಷ್ಟಿಗೆ ಬಳಸಿಕೊಳ್ಳುತ್ತದೆ. ದೇಶಿಗಿಂತ ಭಿನ್ನವಾಗಿರುವುದರಿಂದಲೇ ಅದರ ಮೇಲೆ ಅಧಿಕಾರ ಪ್ರತಿಷ್ಠಾಪನೆಯ ಒತ್ತಡವಿರುತ್ತದೆ ಎನ್ನುತ್ತಾರೆ ಚಿಂತಕ ಡಿ.ಆರ್. ನಾಗರಾಜ್.ಹಾಗೆಯೇ ಈ ಕೃತಿಯಲ್ಲಿ ದೇಶೀ ದೃಷ್ಟಿಕೋನಗಳ ಬಗೆಗಿನ ಆಳವಾದ ನೋಟಗಳನ್ನು ಕಾಣಬಹುದಾಗಿದೆ.
ನ. ರವಿಕುಮಾರ್ ಅವರು ಮೂಲತಃ ತುಮಕೂರಿನವರು. ಕುಣಿಗಲ್ ತಾಲೋಕಿನ ಪುಟ್ಟಯ್ಯನಪಾಳ್ಯ, ಹಾಲಶೆಟ್ಟಿಹಳ್ಳಿ, ಕೆಂಪಸಾಗರ, ಬೆಂಗಳೂರು ಮತ್ತು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು, ಎಸ್.ಕೆ. ಎಫ್. ಬೇರೀಂಗ್ಸ್ ಕಾರ್ಖಾನೆಯಲ್ಲಿ 25 ವರ್ಷಗಳ ದುಡಿದಿದ್ದಾರೆ. ಆನಂತರ ‘ಅಭಿನವ’ ಪ್ರಕಾಶನವನ್ನು ಆರಂಭಿಸಿ ಆ ಮೂಲಕ ವಿವಿಧ ಲೇಖಕರ 500ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹಾಗೂ ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಉಪನಿಷತ್ತು(2018), ಮಕ್ಕಳಿಗಾಗಿ ಕೆ.ಎಸ್ . ನರಸಿಂಹಸ್ವಾಮಿ, ಆಯ್ದ ವಿಮರ್ಶೆಗಳು, ದೇವರ ಗೊಡವೆ ಕೂಡಾ ನನಗೆ ಬೇಡ, ಮನುಕುಲದ ಮಾತುಗಾರ, ಮಾತು ತಲೆ ಎತ್ತಿದ ಬಗೆ ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಪ್ರಕಾಶಕರ ...
READ MORE