‘ದೇಹ ಮೈಮನಗಳ ಸಂಬಂಧ’ ಎಚ್.ಎಲ್. ಪುಷ್ಪ ಅವರ ವಿಮರ್ಶಾ ಲೇಖನಗಳ ಸಂಕಲನ. ವೃತ್ತಿ ನಾಟಕಗಳು ಹಾಗೂ ನವೋದಯ ಕಾಲದಲ್ಲಿಯ ಹವ್ಯಾಸಿ ನಾಟಕಗಳ ಪ್ರವೃತ್ತಿಗಳನ್ನು ಒಳಗೊಂಡು ನಂತರದ ಕಾಲದಲ್ಲಿ ಬಂದ ಕನ್ನಡದ ಮೂವರು ಅತ್ಯಂತ ಪ್ರಮುಖ ನಾಟಕಕಾರರಾದ ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮತ್ತು ಪಿ. ಲಂಕೇಶ್ ಅವರ ಎಲ್ಲ ನಾಟಕ ಕೃತಿಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅಲ್ಲಿಯ ಪಾತ್ರಗಳಲ್ಲಿ ವ್ಯಕ್ತವಾಗುವ ದೇಹ ಮತ್ತು ಮನಸ್ಸುಗಳ ಸಂಬಂಧದ ಚಿತ್ರಣವನ್ನು ಸಾಕಷ್ಟು ಮನಪೂರ್ವಕವಾಗಿ ಹಾಗೂ ವಿವರವಾಗಿ ಪುಷ್ಪ ಅವರು ನೀಡಿದ್ದಾರೆ.
ಈ ಕೃತಿಕಾರರ ಎಲ್ಲ ನಾಟಕಗಳನ್ನು ಮುಖ್ಯವಾಗಿ ಪೌರಾಣಿಕ, ಜಾನಪದ ಹಾಗೂ ಸಾಮಾಜಿಕ ವಸ್ತುವಿನ ಹಿನ್ನೆಲೆಯಲ್ಲಿ ವಿಂಗಡಿಸಿಕೊಂಡು ಆಯಾ ನಾಟಕಗಳ ಪಾತ್ರಗಳ ಮೂಲಕ ಲೇಖನದ ಆಸಕ್ತಿ, ಧೋರಣೆಗಳನ್ನು ಚಿತ್ರಿಸುವಲ್ಲಿ ಪುಷ್ಪ ಅವರು ಸಾಕಷ್ಟು ಯಶಸ್ವಿಯಾಗಿದ್ದಾರೆ.
ಕವಯತ್ರಿ, ಸ್ತ್ರೀವಾದಿ ಎಚ್.ಎಲ್. ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳೀ ಉಜ್ಜನಿಯಲ್ಲಿ 1962 ಸೆಪ್ಟಂಬರ್ 18ರಂದು ಜನಿಸಿದರು. ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ ಪ್ರಬಂಧ ಮಂಡಿಸಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು. ಪುಷ್ಪ ಅವರ ಪ್ರಮುಖ ಕೃತಿಗಳೆಂದರೆ ಅಮೃತಮತಿಯ ಸ್ವಗತ, ಗಾಜುಗೊಳ, ಮದರಂಗಿ, ವೃತ್ತಾಂತ, ಲೋಹದ ಕಣ್ಣು (ಕವನ ಸಂಕಲನ), ಭೂಮಿಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ (ನಾಟಕ), ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ ...
READ MORE