‘ಭೂಮಿ ಬೆಳಕಿನ ಬರಗೂರು ಕಾವ್ಯ’ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಸಮಗ್ರಕಾವ್ಯದ ಕುರಿತ ವಿಮರ್ಶಾ ಕೃತಿ. ಈ ಕೃತಿಗೆ ಹಿರಿಯ ಲೇಖಕಿ ಡಾ. ಎಚ್.ಎಲ್. ಪುಪ್ಪ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಗಂಗಾವತಿಯ ಡಾ.ಮುಮ್ತಾಜ್ ಬೇಗಂ ಇತ್ತಿಚೆಗೆ ಬರೆಯುತ್ತಿರುವ ಕವಯತ್ರಿಯರಲ್ಲಿ ವಿಶಿಷ್ಟವಾದವರು. ಬದುಕು ಮತ್ತು ಬರಹವನ್ನು ಗಂಭೀರವಾಗಿ ಪರಿಗಣಿಸಿದವರು. ಪ್ರಸ್ತುತ ಬರಗೂರು ಅವರ ‘ಬೆವರು ನನ್ನ ದೇವರು’ ಎಂಬ ಹೆಸರಿನಲ್ಲಿ ಒಟ್ಟುಗೂಡಿಸಿದ ಸಮಗ್ರ ಕಾವ್ಯದ ಬಗ್ಗೆ ಅಮೂಲಾಗ್ರವಾಗಿ ಅಧ್ಯಯನ ಮಾಡಿದ್ದಾರೆ.
‘ಭೂಮಿ ಬೆಳಕಿನ ಬರಗೂರು ಕಾವ್ಯ’ ಎಂಬ ಈ ಕೃತಿಯ ಹೆಸರೇ ಭಿನ್ನವಾದದ್ದು. ಭೂಮಿಗೆ ಸ್ವಂತ ಬೆಳಕೆಂಬುದು ಇದೆಯೇ? ಅದರ ಗರ್ಭದಿಂದ ಹೊಮ್ಮಿದ ಬೆಳಕು ಅಲ್ಲಿನ ಜೀವ ಸಂಕುಲದ ಯಾತನೆ ಮತ್ತು ಸಂಕಟಗಳನ್ನು ಪ್ರತಿಫಲಿಸುವಂತದ್ದಲ್ಲವೇ. ಹೀಗೆಂದ ಮಾತ್ರಕ್ಕೆ ಈ ಸಂಕಟದ ಲೋಕದಲ್ಲಿ ನಲಿವೆಂಬುದು ಇಲ್ಲವೇ. ನಿಜ, ಇವೆಲ್ಲವೂ ಕಾಡುವ ಪ್ರಶ್ನೆಗಳೇ. ನೈಜ ಲೋಕದಲ್ಲಿನ ಅಸಮಾನತೆಯ ಕಿಚ್ಚನ್ನು ಈ ಕವಿತೆಗಳು ಪ್ರತಿಫಲಿಸುತ್ತಿವೆ.
ಸಮಗ್ರ ಸಂಕಲನದಲ್ಲಿನ ಕವಿತೆಗಳನ್ನು ಸಮಾಜದಲ್ಲಿ ಸಹಜವಾಗಿರುವ ಸಂರಚನೆಗಳಲ್ಲಿನ ವಿವಿಧ ಪದರಗಳ ಮೂಲಕ ಇಲ್ಲಿ ವಿಶ್ಲೇಷಿಸಲಾಗಿದೆ. ಬರಗೂರು ಅವರ ಸಮಗ್ರ ಕಾವ್ಯದಲ್ಲಿನ ಸಮಾನತೆಯ ಪರಿಕಲ್ಪನೆ, ಸ್ತ್ರೀಪರ ಧೋರಣೆಗಳನ್ನು ಅಧ್ಯಯನ ಪೂರ್ಣವಾಗಿ ಗುರುತಿಸಿರುವ ರೀತಿ ಅನನ್ಯವಾದದ್ದು. ಇಂತಹ ಅಧ್ಯಯನದ ಮೂಲಕ ಬರಗೂರರ ಕಾವ್ಯದ ಹಲವು ಮಗ್ಗಲುಗಳನ್ನು ಶೋಧಿಸಿದ ಮುಮ್ತಾಜ್ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಡಾ. ಮಮ್ತಾಜ್ ಬೇಗಂ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿಯವರು. ತಂದೆ ಹುಸೇನಸಾಬ, ತಾಯಿ ಕಾಸಿಂಬಿ ಮುಧೋಳ. ಗಂಗಾವತಿಯಲ್ಲೇ ಪದವಿವರೆಗೂ ಶಿಕ್ಷಣ ಪೂರ್ಣಗೊಳಿಸಿ, ಗುಲಬಗಾ ವಿ.ವಿ.ಯಿಂದ ಎಂ.ಎ ಹಾಗೂ 'ಪಿಂಜಾರರು: ಒಂದು ಜಾನಪದೀಯ ಅಧ್ಯಯನ' ವಿಷಯವಾಗಿ ಮಹಾಪ್ರಬಂಧ ಸಲ್ಲಿಸಿ ಪಿಎಚ್ ಡಿ ಪಡೆದರು. ಸದ್ಯ, ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರರಾವ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದಲ್ಲಿಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಕಾವ್ಯ, ಸಂಶೋಧನೆ, ಜಾನಪದ, ವಚನ, ದಲಿತ ಸಾಹಿತ್ಯ, ಸ್ತ್ರೀವಾದಿ ಚಿಂತನೆಗಳ ಬರವಣಿಗೆ ಇವರ ಆಸಕ್ತಿಯ ಕ್ಷೇತ್ರಗಳು. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕನ್ನಡ ವಿಶ್ವವಿದ್ಯಾಲಯ ದೂರಶಿಕ್ಷಣ ಪಠ್ಯಪುಸ್ತಕ ಸಮಿತಿಯ ಸದಸ್ಯರಾದ್ಗಿದಾರೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ...
READ MORE