ಚಿಂತಕ ಡಾ. ಕೆ. ಕೃಷ್ಣಮೂರ್ತಿ ಅವರ ಕೃತಿ-ಭಾರತೀಯ ಕಾವ್ಯ ಮೀಮಾಂಸೆ ತತ್ವ ಮತ್ತು ಪ್ರಯೋಗ. ಕಾವ್ಯಾನುಭವವು ಲೋಕಾನುಭವಕ್ಕಿಂತಲೂ ವಿಲಕ್ಷಣ ಸೌಂದರ್ಯಶಾಸ್ತ್ರವಾಗಿದೆ. ಕೃತಿಗಳ ಬೆಲೆ ಕಟ್ಟುವಾಗ ಬರುವ ಕಾವ್ಯ ಮೀಮಾಂಸೆಯಲ್ಲಿ ಅರ್ಥಾತ್ ಗುಣ ದೋಷಗಳ ವಿಮರ್ಶೆಯಲ್ಲಿ, ನೈತಿಕ ಬೆಲೆಗಳೂ ತಾಂತ್ರಿಕ ಅಂಶಗಳ ಜೊತೆಗೆ ಹೇಗೆ ಸೇರ್ಪಡೆಯಾಗುತ್ತವೆ ಎಂಬುದನ್ನು ಇಲ್ಲಿ ನಿರ್ದೇಶಿಸಲಾಗಿದೆ.
ಭಾರತೀಯ ಕಾವ್ಯ ಮೀಮಾಂಸೆಯ ವೈಚಾರಿಕ ಅಧ್ಯಯನ ಹಾಗೂ ಪುನರ್ ಅನುಸಂಧಾನಕ್ಕೆ ಇಲ್ಲಿಯ ಚಿಂತನೆಗಳು ಪ್ರೇರಣೆ ನೀಡುತ್ತವೆ. ಈ ಕೃತಿಯಲ್ಲಿ ಅಲಂಕಾರ, ಗುಣದೋಷ ಹಾಗೂ ರಸ-ಧ್ವನಿ ಶೀರ್ಷಿಕೆಯಡಿ ಸವಿವರವಾದ ಅಧ್ಯಾಯಗಳಿವೆ.
ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...
READ MORE