‘ಭಗವದ್ಗೀತೆ: ಅಪರಾಧ ಮತ್ತು ಶಿಕ್ಷೆ' ಡಿ ಹೆಗಡೆ ಆಲ್ಮನೆ ರಚಿಸಿರುವ ಲೇಖನ ಸಂಗ್ರಹವಾಗಿದೆ. ದುಷ್ಟ ಸಂಹಾರ ಮತ್ತು ಶಿಷ್ಟರಕ್ಷಣೆಯ ನೆಪದಲ್ಲಿ ಅನೇಕ ಧರ್ಮಗ್ರಂಥಗಳಿವೆ. ಅವುಗಳ ಲೇಖನಗಳ ಕುರಿತಾಗಿ ಈ ಕೃತಿಯಲ್ಲಿ ತಿಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿವಾಸಿಯಾಗಿರುವ ಆರ್.ಡಿ. ಹೆಗಡೆ ಅವರು ಜನಿಸಿದ್ದು 1964ರ ಡಿಸೆಂಬರ್ 3ರಂದು. ಶಿರಸಿ, ಉತ್ತರ ಕನ್ನಡ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ. ಅವರು ಭಾರತದಲ್ಲಿ ಶಿಕ್ಷಣ ಸಾಧ್ಯತೆ ಮತ್ತು ಸವಾಲು ಎಂಬ ಪುಸ್ತಕ್ಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕೃತಿಗಳು: ಭಾಸನಾಟಕಗಳ ಕಥೆ (ಸಂಸ್ಕೃತದಲ್ಲಿ), ವಾಲ್ಮಿಕಿರಾಮಾಯಣದ ಸುಭಾಷಿತಗಳು (ಸಂಗ್ರಹ), ಭಗವದ್ಗೀತೆ, ಅಪರಾಧ ಮತ್ತು ಶಿಕ್ಷೆ (ಮೂರು ಬಾರಿ ಮುದ್ರಿತ), ಉಪನಿಷತ್ತುಗಳ ಅರ್ಥಲೋಕ(ಮೂರು ಬಾರಿ ಮುದ್ರಿತ), ಪುಟ್ಟ ಗುಲಾಬಿ ಹೂವೇ, (ಕಥಾಸಂಕಲನ), ದಾರಿ(ಕಿರು ಕಾದಂಬರಿ), ಭಾರತದಲ್ಲಿ ಉನ್ನತ ಶಿಕ್ಷಣ:ಸವಾಲು ಮತ್ತು ಸಾಧ್ಯತೆ(ಅನುವಾದ), ಮಾನವತ್ವದ ಸಾರ(ಅನುವಾದ), ಕೃತಿಚಿತ್ತ, ಸಂಕಥನ, ಜೆನ್‌ಮಹಾಯಾನ, ಕವಿ ವಿ ಜಿ ಭಟ್ಟರ ...
READ MOREಹೊಸತು-2002-ಮಾರ್ಚ್
ದುಷ್ಟ ಸಂಹಾರ-ಶಿಷ್ಟ ರಕ್ಷಣೆಯ ನೆಪದಲ್ಲಿ ಅಮಾನವೀಯ ಹತ್ಯೆಗಳನ್ನು ಪ್ರಚೋದಿಸುವ, ಅವತಾರ ಪುರುಷನ ಮುಖವಾಣಿಗಳ ಮೂಲಕ ಅಪರಾಧಗಳನ್ನು ಸಮರ್ಥಿಸುವ ಧರ್ಮಗ್ರಂಥಗಳಿಗೆ ನಮ್ಮಲ್ಲಿ ಕೊರತೆಯಿಲ್ಲ, ಕೊರತೆಯಿರುವುದು ಅವುಗಳ ಕುರುಡು ಅಂಶಗಳನ್ನು ಪ್ರಶ್ನಿಸುವ ಮನಸ್ಸುಗಳದ್ದು ಮಾತ್ರ. ಸಂಸ್ಕೃತದಲ್ಲಿ ಹೇಳಿದ ಮಾತ್ರಕ್ಕೆ ಹಿಂಸೆ ಹತ್ಯೆಗಳ ಕ್ರೌರ್ಯ ಕಡಿಮೆಯಾಗಲಾರದು. ಭಾರತೀಯ ಸಂಸ್ಕೃತಿಯಲ್ಲಿ ಹಿಂಸೆಯನ್ನು ಯಾವ ನೆಲೆಯಲ್ಲಿ ಸಮರ್ಥಿಸಲಾಗಿದೆಯೆಂದು ಲೇಖನಗಳಲ್ಲಿ ಚರ್ಚಿಸಲಾಗಿದೆ.