ಬೇಂದ್ರೆಯವರ ಧಾರವಾಡ

Author : ಬಿ.ಬಿ. ರಾಜಪುರೋಹಿತ

₹ 90.00




Year of Publication: 2015
Published by: ದ.ರಾ. ಬೇಂದ್ರೆ ಸಂಶೋಧನ ಸಂಸ್ಥೆ, ಹುಬ್ಬಳ್ಳಿ

Synopsys

ಕವಿ ಬೇಂದ್ರೆ ಮತ್ತು ಧಾರವಾಡದ ನಡವಿನ ಸಂಬಂಧ ಅವಿನಾಭಾವದಿಂದ ಕೂಡಿದ್ದು. ಧಾರವಾಡವನ್ನು ಬೇಂದ್ರೆಯವರು ತಮ್ಮನ್ನು ಪೊರೆದ ಐವರು ತಾಯಿಯರಲ್ಲಿ ಸೇರಿಸಿದ್ದಾರೆ. ಬೇಂದ್ರೆಯವರಿಗೆ ಧಾರವಾಡ ತಾಯಿಯ ಸಮಾನವಾದದ್ದು. ಬೇಂದ್ರೆಯವರು ಎಲ್ಲಿಯೇ ನಿಂತಿರಲಿ ಅವರು ನಿಂತಷ್ಟು ನೆಲ ಧಾರವಾಡವಾಗಿರುತ್ತಿತ್ತು ಎಂಬ ಮಾತಿದೆ. ಬೇಂದ್ರೆಯವರು ಹುಟ್ಟಿ ಧಾರವಾಡದ ಮಂಗಳವಾರಪೇಟೆಯ ಪೋತ್ನಿಸ್ ಅವರ ಮನೆಯಲ್ಲಿ. ಈಗ ಪೇಟೆಯಾಗಿರುವ ಹಿಂದೆ ಇದ್ದ ಕೆರೆಯಲ್ಲಿ ಬಿದ್ದ ಬಾಲಕ ದತ್ತಾತ್ರೇಯನನ್ನು ತಾಯಿ ರಕ್ಷಿಸಿದಳು. ಧಾರವಾಡದ ಓಣಿಗಳಲ್ಲಿ ಆಡುತ್ತ ಬೆಳೆದ ಬೇಂದ್ರೆಯವರು ’ಅಂಬಿಕಾತನಯದತ್ತ’ನಾದದ್ದು ವಿಶೇಷ. ವರಕವಿ ಬೇಂದ್ರೆಯವರ ಕವಿತೆಗಳಲ್ಲಿ ಧಾರವಾಡ ಶ್ರಾವಣ ಪ್ರಾಮುಖ್ಯತೆ ಪಡೆದುಕೊಂಡಿದೆ. ವೃತ್ತಿಕಾರಣಕ್ಕಾಗಿ ಸೊಲ್ಲಾಪುರಕ್ಕೆ ಹೋದರೂ ಬೇಂದ್ರೆಯವರು ’ಸಾಧನಕೇರಿ’ಯನ್ನು ಮರೆತಿರಲಿಲ್ಲ. ಬೇಂದ್ರೆ ಮತ್ತು ಧಾರವಾಡದ ನಡುವಿನ ನಂಟನ್ನು ಕುರಿತು ಬಿ.ಬಿ. ರಾಜಪುರೋಹಿತ ಅವರು ಈ ಗ್ರಂಥವನ್ನು ರಚಿಸಿದ್ದಾರೆ.

About the Author

ಬಿ.ಬಿ. ರಾಜಪುರೋಹಿತ
(20 May 1935 - 24 June 2020)

ಭಾಷಾ ವಿಜ್ಞಾನಿ ಬಿ.ಬಿ. ರಾಜಪುರೋಹಿತ  ಅವರು  ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳದವರು. 1935ರ ಮೇ 20ರಂದು ಜನಿಸಿದರು.  ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪಿಎಚ್.ಡಿ. ಪಡೆದಿರುವ ಅವರು ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು. ಕನ್ನಡ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ; ವಚನ ವ್ಯಾಕರಣ (ವ್ಯಾಕರಣ), ಬೇಂದ್ರೆ ಕಾವ್ಯ ಭಾಷೆ; ಕನ್ನಡವೆಲ್ಲ ಒಂದೇ, ಭಾಷೆ ಮತ್ತು ಅರ್ಥಗಳ ಗುಟ್ಟು; ಧ್ವನಿ ವಿಜ್ಞಾನ; ವ್ಯಾ-ಸಾ-ನು-ಭಾವ; ಧ್ವನಿಯ ಶ್ರಾವಣ ಮತ್ತು ಚಾಕ್ಷುಷ ರೂಪ; ವಚನ ಸಾಹಿತ್ಯದ ಭಾಷಾ ಶೈಲಿ (ಭಾಷಾ ವಿಜ್ಞಾನ). ಏಳು ಬೀಳಿನ ಕಡಲು; ಗಂಗಾವತರಣ; ಬೇಂದ್ರೆ ಕಾವ್ಯ ನಿಘಂಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. A ...

READ MORE

Related Books