ಬೇಂದ್ರೆಯವರು ಬರೆದದ್ದು ವರಕವಿಯಾಗಿ, ಬಾಳಿದ್ದು ಚತುರ ಮಾತುಗಾರನಾಗಿ, ಕೇಳುವವರ ಕಿವಿಗಳಿಗೆ ಇನಿವಾತು, ಜಾಣ್ಣುಡಿ, ಚೆನ್ನುಡಿಗಳನ್ನು ತುಂಬಿದವರು. ಅವನ್ನು ಕೇಳಿಸಿಕೊಂಡವರು ಆ ಕ್ಷಣಗಳನ್ನು ನೆನಪಿಸಿಕೊಂಡು ಆಮೇಲೆ ಬರೆದ ಹಲವಾರು ಸಂದರ್ಭ, ಸನ್ನಿವೇಶಗಳ ಸಂಕಲನ ಇದು. ಬೇಂದ್ರೆಯವರ ವ್ಯಕ್ತಿತ್ವವನ್ನು ಮನಗಾಣಲು ಸಹಾಯಕವಾಗುವ ನೂರಾರು ಮಾತು ಮುತ್ತುಗಳು ಇಲ್ಲಿವೆ. ವಾಮನ ಬೇಂದ್ರೆ, ಎನ್ನೆ, ಕಣವಿ, ಬಸವರಾಜ ಕಟ್ಟಿಮನಿ, ಬಿದರಕುಂದಿ, ರಂಜಾನ ದರ್ಗಾ, ಎನ್.ಪಿ.ಭಟ್ಟ, ಚಂದ್ರಶೇಖರ ತಾಳ್ಯ ಮುಂತಾದ ನಲವತ್ತು ಜನ ಬರೆದ ನೆನಪುಗಳು ಇಲ್ಲಿವೆ.