ಬೆಳಗೆರೆ ಕೃಷ್ಣಶಾಸ್ತ್ರಿಗಳು ನಾಡನ್ನು ಸುತ್ತಿ ಸುಳಿದು ಜ್ಞಾನ ವಿಜ್ಞಾನಿ ಮೇಧಾವಿ ಅನುಭಾವಿ ಕವಿ ವ್ಯಕ್ತಿಗಳ ಒಡನಾಟ ಸವಿಯನುಂಡವರು. ಮೇಲ್ನೋಟಕ್ಕೆ ವಿಚಿತ್ರ, ವಿಕ್ಷಿಪ್ತ ಕಾಣುವಂಥವರನ್ನು ಒಳನೋಟದಿಂದ ಅರಿತವರು. ಅಪೂರ್ವ ವ್ಯಕ್ತಿಗಳ ಪ್ರತ್ಯಕ್ಷ ಅನುಭವವನ್ನು ಆತ್ಮೀಯವಾಗಿ ನೆನೆಸಿಕೊಂಡ ಶಾಸ್ತ್ರೀಯವರ ಬರೆಹಗಳು ಮನೋಜ್ಞವಾಗಿವೆ.
ವರಕವಿ ಬೇಂದ್ರೆಯವರನ್ನು ಹಲವು ಸಲ ವಿವಿಧ ಪ್ರಸಂಗಗಳಲ್ಲಿ ಬೆಳಗೆರೆಯವರು ಕಂಡಿದ್ದಾರೆ. ಜೊತೆಗೂಡಿ ಅಲೆದಾಡಿದ್ದಾರೆ. ಅಪೂರ್ವ ಅರಿವು ಅಪಾರ ಆನಂದ ಗಳಿಸಿದ್ದಾರೆ. ಅವುಗಳ ಸಾರವತ್ತಾದ ನೆನಪುಗಳ ಈ ಬರೆಹಗಳಲ್ಲಿ ಬೇಂದ್ರೆ ಜೀವನ: ಕಾವ್ಯದ ಸಂದೇಶವು ಸ್ವಾರಸ್ಯಕರವಾಗಿ ಹೊರಹೊಮ್ಮಿದೆ.
ಸರಳ ಹಾಗೂ ಸಾದಾ ವ್ಯಕ್ತಿತ್ವಕ್ಕೆ ಮತ್ತೊಂದು ಹೆಸರಾಗಿದ್ದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಸದಾ ತನ್ನ ಸುತ್ತಲಿನ ಪರಿಸರದ ಬಗ್ಗೆ ಅತೀವ ಕಾಳಜಿ ವಹಿಸುತ್ತಿದ್ದರು. ಅವರು ಬರೆದದ್ದು ಇರಬೇಕಾದ ಆದರ್ಶದ ಬದುಕನ್ನಲ್ಲ, ಬದುಕೇ ಆದರ್ಶವಾಗುವ ಬಗೆಯನ್ನು. ಅವರ ಬರಣಿಗೆಯಲ್ಲಿ ಸಂಕೇತಗಳು, ಪ್ರತಿಮೆಗಳಾಗಿ, ಪ್ರತಿಮೆಗಳು ಸಂಕೇತಗಳಾಗಿ, ಕೆಲವೊಮ್ಮೆ ಎರಡನ್ನೂ ಮೀರಿದ ಶಕ್ತಿಯಾಗುವುದನ್ನು ಜೀವಾಕ್ಷರವಾಗುವುದನ್ನು ಕಾಣುತ್ತೇವೆ. ಗಾಂಧೀ, ವಿನೋಬಾ, ರಮಣ ಮಹರ್ಷಿ, ಪರಮಹಂಸ, ಜೆ.ಕೆ.ಮುಂತಾದವರಿಂದ ಪ್ರಭಾವಿತರಾಗಿದ್ದ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಳ್ಳಿಯೊಂದರಲ್ಲಿ ತಮ್ಮಷ್ಟಕ್ಕೆ ತಾವೇ ಸಮಾಜಸೇವೆ ಮಾಡಿಕೊಂಡಿದ್ದರು. ಯೇಗ್ದಾಗೆಲ್ಲಾ ಐತೆ(ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತ ನೆನಪು), ತುಂಬಿ (ಕವನ ಸಂಕಲನ), ...
READ MORE