‘ಬಯಲ ಸಿರಿ’ ಲೇಖಕ ಸಿ.ಎಸ್. ಆನಂದ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಲೇಖಕ ಕಲ್ಲೇಶ್ ಕುಂಬಾರ್ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ವಿವರಿಸುತ್ತಾ ‘ಸಾಹಿತ್ಯ ಹಾಗೂ ಸಮಾಜವು ಜಂಗಮರೂಪಿಯ ಲಕ್ಷಣಗಳನ್ನು ಒಳಗೊಂಡಿರುವುದರಿಂದ ಯಾವುದೇ ಕೃತಿಯನ್ನು ಕೇವಲ ಅದರ ಸಂದರ್ಭದಲ್ಲಷ್ಟೇ ಅರ್ಥೈಸಿಕೊಳ್ಳುವುದು ಸೀಮಿತವಾದ ಚೌಕಟ್ಟಾಗುತ್ತದೆ. ಏಕೆಂದರೆ, ನಮ್ಮ ಸುತ್ತಣ ವಸ್ತು ಪ್ರಪಂಚಕ್ಕೆ ಚಲನೆಯಿರುವಂತೆ ಅದರ ನೋಟಕ್ರಮಕ್ಕೂ ಮತ್ತು ಅದನ್ನು ವಿಶ್ಲೇಷಿಸುವ ಮನೋಧರ್ಮಕ್ಕೂ ಚಲನಶೀಲ ಗುಣವಿರುತ್ತದೆ. ಹೀಗಾಗಿ, ಬರಹಗಾರ ಹಾಗೂ ಸಮಾಜದ ನಡುವಿನ ಪರಿವರ್ತನಾಶೀಲ ಸಂಬಂಧವಲ್ಲದೇ, ಆ ಸಮಾಜದಲ್ಲೇ ನಡೆಯುತ್ತಿರುವ ಬದಲಾವಣೆಗಳನ್ನು ಅದೇ ನೆಲೆಯಿಂದಲೇ ಅರಿಯುವ ಪ್ರಯತ್ನವಾದಾಗ ವಿಮರ್ಶೆಗೆ ಹೊಸ ಆಯಾಮ ದೊರೆಯುತ್ತದೆ. ಈ ಮಾತಿನ ಹಿನ್ನೆಲೆಯಲ್ಲಿ ಸಾಹಿತ್ಯ ಹಾಗೂ ಸಮಾಜ ಇವುಗಳ ನಡುವಿನ ಸಂಬಂಧಗಳ ವಿಶ್ಲೇಷಣೆಯನ್ನು ಮುಖ್ಯವಾಗಿರಿಸಿಕೊಂಡು ನೋಡಿದಾಗ ಯುವ ವಿಮರ್ಶಕ ಸಿ.ಎಸ್.ಆನಂದ ಅವರು "ಬಯಲ ಸಿರಿ" ಕೃತಿಯಲ್ಲಿ ಅಳವಡಿಸಿಕೊಂಡಿರುವ ವಿವಿಧ ಲೇಖಕರ ಕೃತಿಗಳ ಕುರಿತಾದ ಬರಹಗಳನ್ನು ಸಾದ್ಯಂತವಾಗಿ ಗಮನಿಸಿದಾಗ ಸಾಹಿತ್ಯ ಸೃಷ್ಟಿಯ ಹಿಂದಿನ ಸಾಮಾಜಿಕ ಪ್ರೇರಣೆಗಳ ಕುರಿತ ಚಿಂತನೆಗಳನ್ನು ಈ ಬರಹಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ ಎಂಬುದು ದಿಟವೆನಿಸುತ್ತದೆ. ಹೀಗಾಗಿಯೇ, ಈ ವಿಮರ್ಶಾ ಕೃತಿಯಲ್ಲಿನ ಚಿಂತನಾತ್ಮಕ ಬರಹಗಳು ವಿಮರ್ಶಕ ಸಿ.ಎಸ್.ಆನಂದ ಅವರನ್ನು ಕೇವಲ ವ್ಯಕ್ತಿಯಾಗಿ ನೋಡುವ ಬದಲಿಗೆ ವಿಶಿಷ್ಟ ಆಶಯವುಳ್ಳ ಸಮಾಜದ ಒಂದು ಭಾಗವಾಗಿ ನೋಡುವಂತೆ ಮಾಡುತ್ತವೆ. ಅಷ್ಟರ ಮಟ್ಟಿಗೆ ಇಲ್ಲಿ ವಿಶ್ಲೇಷಿಸಲಾಗಿರುವ ಕೃತಿಯೊಳಗಿನ ವಿಚಾರಗಳನ್ನು ಮೀರಿ ಸಮಾಜದಿಂದ ಪ್ರೇರಿತವಾದ ಹೊಸ ಸಾಧ್ಯತೆಗಳನ್ನು ಕಾಣಿಸಲು ಪ್ರಯತ್ನಿಸಿದ್ದಾರೆ. ಈ ನಿಟ್ಟಿನಲ್ಲಿ ವಿಮರ್ಶಕ ಸಿ.ಎಸ್.ಆನಂದ ಅವರು ಅಭಿನಂದನಾರ್ಹರು ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಯುವ ಸಾಹಿತಿ ಸಿ.ಎಸ್. ಆನಂದ: ಮೂಲತಃ ಕಲಬುರಗಿಯವರು. ವೃತ್ತಿಯಿಂದ ಇಂಗ್ಲಿಷ್ ಉಪನ್ಯಾಸಕರು. ಇವರ ಕಥೆ, ಕವನ, ಪ್ರಬಂಧ, ವಿಮರ್ಶಾತ್ಮಕ ಲೇಖನಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವಾಸ್ತವದ ಮತ್ತು ಸಂಕೇತವಾದದ ಪದರುಗಳ ಪರಿಮಿತಿಯನ್ನು ತಮ್ಮ ಕಥೆ-ಕಾವ್ಯದಲ್ಲಿ ಬಹಳ ಸುಲಭವಾಗಿ ಮೀರಲೆತ್ನಿಸುತ್ತ ಮುನ್ನಡೆಸಿದ್ದಾರೆ. ಕಲಬುರಗಿ ಆಕಾಶವಾಣಿ ಕೇಂದ್ರದಿಂದ ಸುಮಾರು ಮೂವತ್ತೂ ಹೆಚ್ಚು ಭಾಷಣಗಳು, ಕಲಬುರಗಿ ದೂರದರ್ಶನ ಕೇಂದ್ರ ಮತ್ತು ಬೆಂಗಳೂರು ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ಸಂದರ್ಶನಗಳು ಪ್ರಸಾರಗೊಂಡಿವೆ. ಕೃತಿಗಳು: ಹಡೆದವ್ವ, ಜೀವನದಿ ( ಕಥಾಸಂಕಲನಗಳು), ಒಡಲಹಾಡು, ಮಧುರ ಹನಿಗಳು (ಕವನ ಸಂಕಲನಗಳು) ತಲ್ಲಣಿಸದಿರು ಮನವೆ (ವಚನಗಳ ಸಂಕಲನ), ಬಸವನಾಡಿನ ಬೆಳಕು (ಜಾನಪದ ತ್ರಿಪದಿಗಳ ಸಂಕಲನ), ಸಂಪ್ರೀತಿ (ಮುಕ್ತಕಗಳ ...
READ MORE