ಬಸವರಾಜ ಕಟ್ಟೀಮನಿ ಕಾದಂಬರಿಗಳ ಸಮೀಕ್ಷೆ- 3

Author : ಬಸವರಾಜ ಸಾದರ

Pages 136

₹ 130.00




Year of Publication: 2020
Published by: ಬಸವರಾಜ ಕಟ್ಟೀಮನಿ ಪ್ರತಿಷ್ಠಾನ
Address: ಕುಮಾರ ಗಂಧರ್ವ ರಂಗಮಂದಿರ, ಬೆಳಗಾವಿ- 590016
Phone: 08312474648

Synopsys

ಬಸವರಾಜ ಕಟ್ಟೀಮನಿ ಅವರ ಜನ್ಮಶತಮಾನೋತ್ಸವ ಸಲುವಾಗಿ ನಾಲ್ಕು ಸಂಪುಟಗಳಲ್ಲಿ ಅವರ ಸಾಹಿತ್ಯ ಸಮೀಕ್ಷೆ ಕೃತಿಗಳನ್ನು ಪ್ರಕಟಿಸಲಾಗಿದ್ದು, ಇದು ಮೂರನೇ ಕೃತಿಯಾಗಿದೆ. ಈ ಕೃತಿಯನ್ನು ಲೇಖಕ ಬಸವರಾಜ ಸಾದರ ಅವರು ಸಂಪಾದಿಸಿದ್ದಾರೆ. ಈ ಸಂಪುಟಗಳಲ್ಲಿ ಕಟ್ಟೀಮನಿಯವರ 40 ಕಾದಂಬರಿಗಳನ್ನು 40 ಲೇಖಕರು ಹಲವಾರು ನೆಲೆಗಳಿಂದ ವಿಮರ್ಶಿಸಿದ್ದಾರೆ. ಈ ಎಲ್ಲ ಕಾದಂಬರಿಗಳನ್ನು ಇಲ್ಲಿ ನಾಲ್ಕು ಸಂಪುಟಗಳಲ್ಲಿ ವಿಭಾಗಿಸುವಾಗ ಕಾಲನುಕ್ರಮವನ್ನು ಅನುಸರಿಸಿಲ್ಲ. ಎಲ್ಲಾ ಬಗೆಯ ಕಾದಂಬರಿಗಳು ಪ್ರತಿ ಸಂಪುಟದಲ್ಲಿ ಸೇರುವಂತೆ ನೋಡಿಕೊಳ್ಳಲಾಗಿದೆ. ಹಾಗಾಗಿ, ಪ್ರತಿ ಸಂಪುಟದಲ್ಲೂ ವೈವಿಧ್ಯತೆ ಇರುವುದನ್ನು ಗಮನಿಸಬಹುದು. ಕಟ್ಟೀಮನಿ ಅವರ ಸಮಗ್ರ ಸಂಪುಟಗಳು ಹೊರಬಂದ ಬಳಿಕ ಅವರ 40 ಕಾದಂಬರಿಗಳನ್ನು ಕುರಿತು 40 ಲೇಖಕರಿಂದ ಪ್ರತ್ಯೇಕ ಲೇಖನಗಳನ್ನು ಬರೆಯಿಸಿ ಪ್ರಕಟಿಸುತ್ತಿರುವುದು ಇದು ಮೊದಲ ಬಾರಿ. ಕಟ್ಟೀಮನಿಯವರ ಕಾದಂಬರಿಗಳ ಓದುಗರಿಗೆ ಇದು ಉಪಯುಕ್ತವಾಗುತ್ತದೆ. ಈ ಕಾರಣಕ್ಕಾಗಿ ಇದೊಂದು ಒಳ್ಳೆಯ ಪ್ರಯತ್ನವೆನ್ನಬಹುದು.

About the Author

ಬಸವರಾಜ ಸಾದರ
(20 July 1955)

ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು,  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ  ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ...

READ MORE

Related Books