‘ಅಸಹಿಷ್ಣುತೆಯ ಹಿಂದಿರುವ ಸೆಕ್ಯುಲರ್ ಸಂಕಥನ’ ಲೇಖಕ ಅಜಕ್ಕಳ ಗಿರೀಶ ಭಟ್ ಬರೆದಿರುವ ವಿಚಾರವಿಮರ್ಶೆಗಳ ಸಂಕಲನ. ಇಲ್ಲಿ ಸೆಕ್ಯುಲರ್ ವೈಚಾರಿಕ ಸಾಹಿತ್ಯದ ಮಿತಿಗಳು, ಅಪಕಲ್ಪನೆಗಳು ಮತ್ತು ವೈರುಧ್ಯಗಳ ವಿಮರ್ಶೆಗಳಿವೆ. ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಚರ್ಚೆಗಳಾಗುತ್ತಿವೆ. ಈ ಚರ್ಚೆಯ ಮೂಲವನ್ನು ಶೋಧಿಸುವುದಕ್ಕಿಂತಲೂ ಅಸಹಿಷ್ಣುತೆಯ ಮೂಲವನ್ನು ಶೋಧಿಸುವುದು ಮುಖ್ಯವಾದುದು. ಭಾರತದಲ್ಲಿ ಪ್ರಚುರ ಪಡಿಸಲಾಗಿರುವ ಸೆಕ್ಯುಲರ್ ವಾದದ ನಮೂನೆಯೇ ಹೇಗೆ ಅಸಹಿಷ್ಣುತೆಗೆ ಕಾರಣವಾಗುತ್ತದೆ ಎಂಬ ನಿಲುವನ್ನು ಲೇಖಕರು ಈ ಕಿರುಹೊತ್ತಿಗೆಯಲ್ಲಿ ವಿವರಿಸಿದ್ದಾರೆ.
ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...
READ MORE