‘ಅರಿವಲಗು’ ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ವಿಮರ್ಶಾ ಲೇಖನಗಳ ಸಂಕಲನ. ‘ವಿಮರ್ಶೆ ಅರಿವ ಅಲಗು. ಇರಿವ ಅಲಗಲ್ಲ’ ಎನ್ನುವ ಬಿದರಹಳ್ಳಿ ಅವರು ‘ಇರಿತಕ್ಕೆ ಇರಿತವೆ ಉತ್ತರವಲ್ಲ, ಇರಿತದ ಇಂಗಿತವನ್ನು ಅರಿತುಕೊಳ್ಳುವ ಛಾತಿ ಇರಬೇಕು. ಒಡಲಲ್ಲಿ ಮುರಿದಲಗು ಹೊಸ ಚಿಂತನೆ ಒಡಮೂಡಿಸಬಲ್ಲದೆಂಬ ನಂಬಿಕೆ ಇರಬೇಕು. ಆಗ ಮಾತ್ರ ಆರೋಗ್ಯಪೂರ್ಣ ಸಾಂಸ್ಕೃತಿಕ, ಸಾಹಿತ್ಯಕ ಅನುಸಂಧಾನ ಸಾಧ್ಯ’ ಎನ್ನುತ್ತಾರೆ.
ಅರಿವೆಂಬ ಅಲಗು, ಶೂನ್ಯ ಸಂಪಾದನೆಯ ವಸ್ತು- ವಿಷಯ- ಸಮಸ್ಯೆಗಳು, ಪೃಥ್ವಿಯೇ ಪಿಂಡಿಗೆ ಆಕಾಶವೆ ಲಿಂಗ, ಶೂನ್ಯದ ಪರಿಕಲ್ಪನೆ, ಗಿರಣಿ ಸಾರ ವಿಸ್ತಾರ, ಧರ್ಮ ಮತ್ತು ಅನುಭಾವ ಎಂಬ 6 ವಿಮರ್ಶಾ ಲೇಖನಗಳು ಹಾಗೂ ಟಿಪ್ಪಣಿಗಳು ಕೃತಿಯಲ್ಲಿವೆ. .
ಕವಿ, ಕತೆಗಾರ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಸಂಪಾದಕ, ಅನುವಾದಕ ಹೀಗೆ ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಬಿದರಹಳ್ಳಿ ನರಸಿಂಹಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ. ಇಂಗ್ಲಿಷ್ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರಿ ಪ್ರಿನ್ಸಿಪಲ್ ಆಗಿ ನಿವೃತ್ತರಾಗಿ ಹೊನ್ನಾಳಿಯಲ್ಲೇ ನೆಲೆಸಿದ್ದ ಬಿದರಹಲ್ಳಿಯವರು ಹೆಚ್ಚೂ ಕಡಿಮೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕೃಷಿಮಾಡಿದ್ದಾರೆ. ಅವರ ಪ್ರಕಟಿತ ಕೃತಿಗಳು: ಕಾವ್ಯ: ಕಾಡಿನೊಳಗಿದೆ ಜೀವ(1979), ಸೂರ್ಯದಂಡೆ(1996), ಅಕ್ಕಿಕಾಳು ನಕ್ಕಿತಮ್ಮ(2001), ಭಾವಕ್ಷೀರ(2006), ಅಕ್ಕನೆಂಬ ಅನುಭಾವಗಂಗೆ(2017) ಕಥಾಸಂಕಲನ: ಶಿಶು ಕಂಡ ಕನಸು(1993, 2005), ಹಂಸೆ ಹಾರಿತ್ತು(2000, 2010), ನೀರಾಳ ಸೊಲ್ಲು(2017), ಸಸಿಯ ...
READ MORE