ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ವಿಮರ್ಶಾ ಲೇಖನಗಳ ಸಂಗ್ರಹ ’ಅನುಸ್ವಾದನ’. 13 ಬರೆಹಗಳನ್ನು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ.
ಮೊದಲ ಭಾಗದಲ್ಲಿ ಏಳು ಲೇಖನಗಳಿವೆ. ಗ. ಹು. ಹೊನ್ನಾಪುರಮಠ ಅವರ ' ನೀತಿಮಂಜರಿ, ವರದರಾಜ ಹುಯಿಲಗೋಳ ಅವರ 'ದಯಾಸಾಗರ’, ಶಿವರಾಮ ಕಾರಂತರ ' ಅಳಿದ ಮೇಲೆ', ಶಿವರಾಮ ಕಾರಂತರ 'ಬಾಳ್ವೆಯೇ ಬೆಳಕು’ ಶಾಂತಿನಾಥ ದೇಸಾಯಿ ಅವರ 'ಸೃಷ್ಟಿ', ಎಂ. ಎಂ. ಕಲಬುರ್ಗಿ ಅವರ 'ಕೆಟ್ಟಿತ್ತು ಕಲ್ಯಾಣ’, ಪಂಚಾಕ್ಷರಿ ಹಿರೇಮಠ ಅವರ 'ಮಗ್ಗ ಚೆಲ್ಲಿದ ಬೆಳಕು' ಪುಸ್ತಕಗಳನ್ನು ಕುರಿತ ವಿಮರ್ಶಾತ್ಮಕ ಟಿಪ್ಪಣೆಗಳಿವೆ. ಕವಿತೆಯ ಲಯದ ಗದ್ಯದ ಬರವಣಿಗೆ ಈ ಬರಹಗಳ ವಿಶೇಷ.
ಎರಡನೆಯ ಭಾಗದಲ್ಲಿ ’ಕಬೀರ್‌ದಾಸನ ಕಾವ್ಯದಲ್ಲಿ ಅನುಭಾವದ ಅಭಿವ್ಯಕ್ತಿ’ ಹಾಗೂ ಆಯ್ದಕ್ಕಿ ಲಕ್ಕಮ್ಮನ ಒಂದು ವಚನ : ವಿಶ್ಲೇಷಣೆ’ ಎಂಬ ಟಿಪ್ಪಣಿಗಳು ವಿಶೇಷ ಗಮನ ಸೆಳೆಯುತ್ತವೆ.
ಮೂರನೆಯ ಭಾಗದಲ್ಲಿ ಕುವೆಂಪು ಕಾವ್ಯದಲ್ಲಿ ಮಳೆಗಾಲ, ವಿ. ಕೃ. ಗೋಕಾಕರ ಕಾವ್ಯದಲ್ಲಿ ಮಳೆಗಾಲ, ಸಿದ್ದಯ್ಯ ಪುರಾಣಿಕರ ಕಾವ್ಯದಲ್ಲಿ ಮಳೆಗಾಲ, ಜಿ. ಎಸ್. ಶಿವರುದ್ರಪ್ಪನವರ ಕಾವ್ಯದಲ್ಲಿ ಮಳೆಗಾಲ ಎಂಬ ಲೇಖನಗಳಿವೆ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE