'ಅಭಿರುಚಿ'ಯಲ್ಲಿರುವ ಇಪ್ಪತ್ತೆರಡು ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದವು. ಇವುಗಳನ್ನು ಸ. ರಘುನಾಥ ’ಓದ್ವಿಮರ್ಶೆ' ಎಂಬ ಹೊಸ ಹೆಸರಿನಿಂದ ಕರೆದಿದ್ದಾರೆ. ಹಾಗೆಂದರೇನೆಂಬುದಕ್ಕೆ ವಿವರಣೆಯನ್ನೂ ಕೊಟ್ಟಿದ್ದಾರೆ. 'ಅಭಿರುಚಿ'ಯ “ಓದ್ವಿಮರ್ಶೆ" ನಮೂನೆಯ ಲೇಖನಗಳಲ್ಲಿ ವಿಷಯ ವೈವಿಧ್ಯತೆಯಿದೆ. ಮೊದಲ ಭಾಗದಲ್ಲಿರುವ ಲೇಖನಗಳು ರಘುನಾಥರಿಗೆ ಇಷ್ಟವಾದ, ಓದಿದ ಮೇಲೂ ಬಹುಕಾಲ ಅವರ ಮನದಲ್ಲಿ ನಿಂತ ಅಥವಾ ಕಾಡಿದ ಕನ್ನಡದ ಬರಹಗಾರರ ಪುಸ್ತಕಗಳನ್ನು ವಿಮರ್ಶೆಗೊಳಪಡಿಸಿರುವಂಥವು. ಎರಡನೆಯ ಭಾಗದಲ್ಲಿರುವ ವಿಮರ್ಶಾ ಲೇಖನಗಳಿಗೆ ಮೂಲವಾದದ್ದು ರಘುನಾಥ ಕನ್ನಡದಷ್ಟೇ ಲೀಲಾಜಾಲವಾಗಿ ವಿಹರಿಸಬಲ್ಲ ಓದಬಲ್ಲ ಬರೆಯಬಲ್ಲ ತೆಲುಗು ಸಾಹಿತ್ಯ, ಭಾಷೆ, ಸಂಸ್ಕೃತಿ. ಈ ಭಾಗದಲ್ಲಿ ತೆಲುಗಿನ ಶ್ರೀನಾಥ ಕವಿ, ತ್ಯಾಗರಾಜರು, ಕೈವಾರ ನಾರೇಯಣರು, ತಿರುಮಲ ರಾಮಚಂದ್ರ ಇವರೊಂದಿಗೆ ಕನ್ನಡದ ವರಕವಿ ಬೇಂದ್ರೆಯವರ ಕವಿತೆಗೆ ಪೂಸಲ್ಪಟ್ಟ ತೆಲುಗು ನುಡಿಗಂಧವೂ ಇದೆ.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE