ಕವಯತ್ರಿ ಹೇಮಾ ಪಟ್ಟಣಶೆಟ್ಟಿ ಅವರು ಹನ್ನೆರಡು ಗದ್ಯ ಬರಹಗಳನ್ನು ಒಳಗೊಂಡ ಕೃತಿ ಆಕಲನ. ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ಸಂಕಲಿಸಲಾಗಿದೆ. ಎಲ್ಲ ಬರೆಹಗಳೂ ಸಾಹಿತ್ಯ ಮತ್ತು ಕೃತಿಯನ್ನು ಕುರಿತಾದವುಗಲು. ಹಿರಿಯ ಕವಿ ಕಣವಿಯವರ ಸಂದರ್ಶನವೂ ’ಆಕಲನ’ದಲ್ಲಿದೆ. ಲೇಖನಗಳ ಪಟ್ಟಿ ಹೀಗಿದೆ- ಲೇಖಕಿಯರು ರಚಿಸಿದ ನಾಟಕಗಳು, ಆಧುನಿಕ ಗದ್ಯ ಸಾಹಿತ್ಯದಲ್ಲಿ ಸ್ತ್ರೀ ಸ್ವಾತಂತ್ರ್ಯ ಪರಿಕಲ್ಪನೆ, ಎಂ. ಎಂ. ಕಲಬುರ್ಗಿಯವರ ಸೃಜನ ಸಾಹಿತ್ಯ, ಸತ್ಯಾನಂದ ಪಾತ್ರೋಟರ ಕಾವ್ಯದಲ್ಲಿ ಪ್ರೀತಿ ಮತ್ತು ನಿಸರ್ಗ, ತೋಂಟದಾರ್ಯ ಮಠದ ಅನುವಾದ ಸಾಹಿತ್ಯ ರತ್ನಮಾಲೆ, ಸಂತ ಸೇವಾಲಾಲ- ಕೃತಿ ಪರಿಚಯ, ಕಾಂತಾ ದತ್ತಾತ್ರೇಯ ಅವರ ’ಸ್ಪೂರ್ತಿ’, ವಿಜಯಕಾಂತ ಪಾಟೀಲರ ’ಮಾಸದ ಕಲೆಗಳು', ವೀ. ಪ. ಬಳಿಗಾರ್ ಅವರ ’ಮೌನದ ಮೋಡಿ', ಗದಿಗೆಯ್ಯ ಹೊನ್ನಾಪುರಮಠ, ಶಾಂತಾದೇವಿ ಮಾಳವಾಡ, ಕಣವಿ ಸಂದರ್ಶನ.
ಕವಯತ್ರಿ, ಬರಹಗಾರ್ತಿ ಹೇಮಾ ಪಟ್ಟಣಶೆಟ್ಟಿ ಅವರು ಮನೋವಿಜ್ಞಾನ ಹಾಗೂ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ವಿರಹೋತ್ಸವ, ಹೊಸಹಾಡು, ಕಣ್ಣುಗಳಲಿ ಕನಸು ತುಂಬಿ, ಮುಸುಕಿದೀ ಮಬ್ಬಿನಲಿ, ಬಗಾಟ ಬಗರಿ, ತುಂಟ ಮಕ್ಕಳ ತಂಟೆ, ಹೆಣ್ಣು. ವಿಮರ್ಶೆ/ವಿಚಾರ ಸಾಹಿತ್ಯ : ಮರ್ಯಾದೆಯ ಮುಸುಕಿನಲ್ಲಿ, ಅನುಲೇಖ ಮುಂತಾದವು. ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿರುವ ಕೊಡುಗೆಗೆ ಅಂತರರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ, ಮಲ್ಲಿಕಾ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸಂದಿವೆ. ಅನನ್ಯ ಪ್ರಕಾಶನ ಸ್ಥಾಪಿಸಿ 90ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸಂಕಲನ ...
READ MORE