About the Author

ಕವಿ, ಬರಹಗಾರ ಪ್ರಕಾಶ್ ಕಡಮೆ ಅವರು ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದವರು. 1958ರಲ್ಲಿ ಜನಿಸಿದರು. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು.

ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ’ಪರಿಮಳದಂಗಳ ಮತ್ತು ದಾಂಪತ್ಯ ನಿಷ್ಠೆ -ಪರಿಕಲ್ಪನೆ ಬದಲಾಗುತ್ತಿದೆಯೇ? ಕೃತಿಗಳನ್ನು ಪತ್ನಿ ಸುನಂದಾ ಅವರೊಂದಿಗೆ ಸೇರಿ ಸಂಪಾದಿಸಿದ್ದಾರೆ. ಅಮ್ಮನಿಗೊಂದು ಕೃತಿಗೆ ಕವಿ ಡಿ.ಎಸ್.ಕರ್ಕಿ ಅವರ ಪ್ರತಿಷ್ಠಾನದ ಕರ್ಕಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಪ್ರಕಾಶ ಕಡಮೆ