ಬಹುವಚನ ಭಾರತ

Author : ಜಿ.ರಾಜಶೇಖರ

Pages 300

₹ 250.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಇದ್ದದ್ದನ್ನು ಇದ್ದಂತೆ ಹೇಳಬಲ್ಲ ಕಾರಣಕ್ಕೇ ಚಿಂತಕ ಜಿ. ರಾಜಶೇಖರ ಅವರು ನಾಡಿನ ಸಾಕ್ಷಿಪ್ರಜ್ಞೆ ಎನಿಸಿಕೊಂಡವರು. ಅವರ ’ಬಹುವಚನ ಭಾರತ’ದ ವೈಚಾರಿಕ ಬರಹಗಳು ಬಹುತ್ವದ ಮಹತ್ವವನ್ನು ಬಹುವಾಗಿ ಹೇಳುತ್ತದೆ. ಜೀವಪರತೆ ಅವರ ಬರಹಗಳ ಬಹುಮುಖ್ಯ ಕಾಳಜಿ ಎಂಬುದನ್ನು ಈ ಕೃತಿಯೂ ಸಾರುತ್ತದೆ. ’ಅಧರಕ್ಕೆ ಕಹಿ ಉದರಕ್ಕೆ ಸಿಹಿ’ ಎನ್ನುವಂತಹ ಅವರ ಪ್ರಬುದ್ಧ ವಿಚಾರ ಲಹರಿ ಕೃತಿಯಲ್ಲಿ ಹರಡಿಕೊಂಡಿದೆ. 

About the Author

ಜಿ.ರಾಜಶೇಖರ
(03 April 1946 - 20 July 2022)

1946ರ ಏಪ್ರಿಲ್ 3ರಂದು ಉಡುಪಿ ಜಿಲ್ಲೆಯ ಗುಂಡ್ಮಿಯಲ್ಲಿ ಜನಿಸಿದ ಜಿ. ರಾಜಶೇಖರ ಅವರು ಪದವಿ ಪಡೆದದ್ದು ಉಡುಪಿಯಲ್ಲಿ. ಮೊದಲಿಗೆ ಕೆಲಕಾಲ ಶಿಕ್ಷಕರಾಗಿ ಕೆಲಸ ಮಾಡಿದ ಇವರು ಬಳಿಕ ಎಲ್‌ಐಸಿಯ ಉದ್ಯೋಗಿಯಾಗಿದ್ದರು. ಸಾಹಿತ್ಯ-ಸಮಾಜ- ರಾಜಕಾರನ ಕುರಿತಂತೆ ಹಾಗೂ ಕೋಮುವಾದವೂ ಸೇರಿದಂತೆ ಸಮಕಾಲೀನ ತುರ್ತಿನ ವಿದ್ಯಮಾನಗಳ ಬಗ್ಗೆ ಅವರು ಬಹುಸಂಖ್ಯೆಯ ಲೇಖನಗಳನ್ನು ಸತತವಾಗಿ ಪ್ರಕಟಿಸುತ್ತಲೇ ಬಂದಿದ್ದರೂ ಈ ಬರಹಗಳು ಸಂಕಲನಗೊಂಡು ಪ್ರಕಟಗೊಂಡಿದ್ದು ಕಡಿಮೆ. ಸಮಕಾಲೀನ ಕನ್ನಡದ ಪ್ರಮುಖ ವಿಮರ್ಶಕ- ಚಿಂತಕರೆಂದು ಮನ್ನಣೆ ಗಳಿಸಿರುವ ರಾಜಶೇಖರ ಅವರು ಎಡಪಂಥೀಯ ಧೋರಣೆಯನ್ನು ನಿಷ್ಠುರ ಆತ್ಮವಿಮರ್ಶೆಯೊಂದಿಗೆ ಕಸಿ ಮಾಡಿದವರು. ಕೃತಿಗಳು: ’ಕಾಗೋಡು ಸತ್ಯಾಗ್ರಹ’, ಪರಿಸರ ...

READ MORE

Awards & Recognitions

Related Books