ಚಿಂತನೆಯ ಪಾಡು

Author : ರಹಮತ್ ತರೀಕೆರೆ

Pages 230

₹ 200.00




Year of Publication: 2015
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ರಹಮತ್ ತರೀಕೆರೆ ಕನ್ನಡದ ಪ್ರಮುಖ ವಿಮರ್ಶಕ - ಚಿಂತಕರು, ಒಂದು ಕೃತಿಯನ್ನು ಅರ್ಥಮಾಡಿಕೊಳ್ಳುವ ಬಗೆಯನ್ನು, ಅದರ ಒಳಹೂರಣವನ್ನು ಅರ್ಥಮಾಡಿಸುತ್ತಾ ಜೊತೆಗೆ ಕೃತಿಯ ಓರೆಕೋರೆಗಳನ್ನು ತಿಳಿಸುತ್ತಾ ಓದುಗರು ಮೂಲ ಕೃತಿಯನ್ನೂ ಓದಲೇಬೇಕೆನ್ನುವಂತೆ ಪ್ರೇರೇಪಿಸುತ್ತಾರೆ. ಯಾವುದೇ ಪಣರ್ವಾಗ್ರಹಗಳಿಲ್ಲದೆ ಕೃತಿಯೇ ಮುಖ್ಯ ಎಂದು ವಿಮರ್ಶಿಸುವ ತರೀಕೆರೆಯವರ ವಿಮರ್ಶನ ಶೈಲಿ ಅನನ್ಯವಾದುದು. ಕನ್ನಡದ ಪ್ರಮುಖ ಇಪ್ಪತ್ತು ಕೃತಿಗಳ ಪರಿಚಯ ಇಲ್ಲಿದೆ. 'ಪ್ರತಿ ಸಂಸ್ಕೃತಿ', 'ಮರದೊಳಗಣ ಕಿಚ್ಚು', 'ಕರ್ನಾಟಕದ ಸೂಫಿಗಳು', 'ಕನ್ನಡದ ಮಾತು ತಲೆಯೆತ್ತುವ ಬಗೆ', 'ಧರ್ಮ ಪರೀಕ್ಷೆ ಮೊದಲಾದ ಗಂಭೀರ ವೈಚಾರಿಕ ಕೃತಿಗಳ ಮೂಲಕ ವಿಮರ್ಶಕ ವಲಯದಲ್ಲಿ ಗುರುತಿಸಿಕೊಂಡಿರುವ ರಹಮತ್‌ ತರೀಕೆರೆಯವರ ಲಹರಿ ರೂಪದ ವಿಶ್ಲೇಷಣಾ ಬರಹ 'ಚಿಂತನೆಯ ಪಾಡು'

About the Author

ರಹಮತ್ ತರೀಕೆರೆ
(26 August 1959)

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...

READ MORE

Related Books