ಡಾ. ಟಿ.ಡಿ. ರಾಜಣ್ಣ ತಗ್ಗಿ ಅವರ ಸಂಶೋಧನೆ ಮತ್ತು ವಿಮರ್ಶಾ ಲೇಖನಗಳ ಸಂಕಲನ ‘ಅಪ್ರಸ್ತುತ’. ಕೃತಿಯ ಕುರಿತು ಬರೆಯುತ್ತಾ ‘ಅಪ್ರಸ್ತುತ’ ಎಂದರೆ ಪ್ರಸ್ತುತವಲ್ಲದವು ಎಂದರ್ಥ. ಈ ಸಂಕಲನಕ್ಕೆ ಅಪ್ರಸ್ತುತ ಎಂದು ಹೆಸರಿಟ್ಟಿರುವುದು ಇದರಲ್ಲಿನ ಬಹುಪಾಲು ಲೇಖನಗಳು ಶಾಸನಕ್ಷೇತ್ರಕ್ಕೆ ಮತ್ತು ಹಳಗನ್ನಡ ಕ್ಷೇತ್ರಕ್ಕೆ ಸಂಬಂಧಿಸಿದವುಗಳು ಅನ್ನುವ ಕಾರಣಕ್ಕೆ.. ಈ ಕೃತಿಯ ಶೀರ್ಷಿಕೆ ಅಪ್ರಸ್ತುತ ಎಂದಿದ್ದರೂ ಶಾಸನ ಮತ್ತು ಹಳಗನ್ನಡ ಕ್ಷೇತ್ರಗಳು ಪ್ರತಿಕಾಲದ ಸಾಂಸ್ಕೃತಿಕ ಮತ್ತು ಭಾಷಿಕ ಇತಿಹಾಸ ನಿರ್ಮಾಣಕ್ಕೆ ಪ್ರೇರಕಶಕ್ತಿಗಳಾದ್ದರಿಂದ ಅವು ಎಲ್ಲ ಕಾಲಕ್ಕೂ ಪ್ರಸ್ತುತ ಎಂದೇ ಭಾವಿಸಬೇಕು ಎಂದಿದ್ದಾರೆ ಲೇಖಕ ಡಾ.ಟಿ.ಡಿ.ರಾಜಣ್ಣ ತಗ್ಗಿ. ಇದು ರಾಜಣ್ಣ ತಗ್ಗಿ ಅವರ ನಾಲ್ಕನೆಯ ವಿಮರ್ಶಾ ಸಂಕಲನ ಕೃತಿಯಾಗಿದ್ದು, ಇದರಲ್ಲಿ ಸಂಶೋಧನೆ ಮತ್ತು ವಿಮರ್ಶೆಗೆ ಸಂಬಂಧಿಸಿದ ಒಟ್ಟು ಹತ್ತೊಂಬತ್ತು ಲೇಖನಗಳಿವೆ. ಇವುಗಳಲ್ಲಿ ಕೆಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಪ್ರಬಂಧಗಳ ಪರಿಷ್ಕೃತ ರೂಪಗಳಾದರೆ ಮತ್ತೆ ಕೆಲವು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಲೇಖನಗಳಾಗಿವೆ. ಇನ್ನೂ ಕೆಲವು ಪ್ರಮುಖ ಅಭಿನಂದನಾ ಗ್ರಂಥಗಳಿಗೆ ಬರೆದ ಲೇಖನಗಳೂ ಇದರಲ್ಲಿ ಸೇರಿವೆ. ಇದರಲ್ಲಿ ಅಡಕಗೊಂಡಿರುವ ಲೇಖನಗಳು ಒಂದು ಕಾಲಘಟ್ಟಕ್ಕೆ ಅಥವಾ ಒಂದು ಸಾಹಿತ್ಯ ಪ್ರಕಾರಕ್ಕೆ ಸೇರಿದವುಗಳಲ್ಲ. ಇದರಲ್ಲಿ ಶಾಸನ, ಹಳಗನ್ನಡ, ಭಾಷೆ, ಲಿಪಿ, ವ್ಯಾಕರಣ, ಸಂಸ್ಕೃತಿ, ಹೊಸಗನ್ನಡ ಕಾವ್ಯ, ಕತೆ- ಹೀಗೆ ಅನೇಕ ಸಾಹಿತ್ಯ ಪ್ರಕಾರ ಮತ್ತು ಹಲವು ಕ್ಷೇತ್ರಗಳಲ್ಲಿ ಕೈ ಆಡಿಸಿದ ಬರಹಗಳಿವೆ. ಹಾಗಾಗಿ ಇದೊಂದು ಬಹುಶಿಸ್ತೀಯ ಅಧ್ಯಯನದ ಕೃತಿ ಎಂದರೆ ತಪ್ಪಾಗಲಾರದು.
ಕನ್ನಡದ ಯುವ ಸಂಶೋಧಕ, ಅನುವಾದಕ ಟಿ.ಡಿ. ರಾಜಣ್ಣ ತಗ್ಗಿ ಅವರು ಮೂಲತಃ ತುಮಕೂರು ಜಿಲ್ಲೆ, ಮಧುಗಿರಿ ತಾಲೂಕಿನ ತಗ್ಗಿಹಳ್ಳಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ, ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಮದರಾಸು ವಿಶ್ವವಿದ್ಯಾಲಯ ಹಾಗೂ ಜೈನ್ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಮಂಡಿಸಿರುವ ರಾಜಣ್ಣ ತಗ್ಗಿ ಅವರು ಮದರಾಸು , ಬೆಂಗಳೂರು ಮತ್ತು ಗುಲಬರ್ಗಾ ಆಕಾಶವಾಣಿ ಕೇಂದ್ರಗಳಲ್ಲಿಯೂ ಹಲವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಭಾಷೆ ಬಲ್ಲವರಾಗಿದ್ದು, ...
READ MORE