‘ಶಾಸ್ತ್ರ ಸಂಕಲ್ಪ’ ಡಾ. ಶ್ರೀಧರ ಎಚ್.ಜಿ. ಅವರ ವಿಮರ್ಶಾ ಲೇಖನಗಳ ಸಂಕಲನ. ದಕ್ಷಿಣ ಕನ್ನಡವು ಪ್ರಾಚೀನ ಸಾಹಿತ್ಯ ಮತ್ತು ಶಾಸ್ತ್ರ ಸಾಹಿತ್ಯವನ್ನು ಪ್ರಮುಖವಾಗಿ ನಂಬಿಕೊಂಡಿದೆ. ಇಲ್ಲಿಯ ವಿದ್ವಾಂಸರು ಪಾಂಡಿತ್ಯಕ್ಷೇತ್ರವನ್ನೇ ಆರಿಸಿಕೊಂಡಿದ್ದಾರೆ. ಅವರೆಲ್ಲರ ಮುಂದುವರಿಕೆಯ ಕೊಂಡಿಯೊಂದನ್ನು ಡಾ. ಶ್ರೀಧರ ಎಚ್. ಜಿ. ಅವರಲ್ಲಿ ನಾನು ಕಾಣುತ್ತಿದ್ದೇನೆ ಎನ್ನುತ್ತಾರೆ ಹಿರಿಯ ಲೇಖಕ ಮಲ್ಲೇಪುರಂ ಜಿ. ವೆಂಕಟೇಶ.
'ಶಾಸ್ತ್ರಸಂಕಲ್ಪ' ಕೃತಿಯ ಮೊದಲ ಮೂರು ಲೇಖನಗಳು ಪಂಪನನ್ನು ಕುರಿತಿವೆ. ಮತ್ತೊಂದು ಲೇಖನ ಲಕ್ಷ್ಮೀಶನ ಜೈಮಿನಿಭಾರತದಲ್ಲಿ ಬರುವ ಶೃಂಗಾರ ಪ್ರಸಂಗವನ್ನು ವಿಶ್ಲೇಷಿಸಿದೆ. ’ಸೀಮೆಯ ಪರಿಕಲ್ಪನೆ' ಲೇಖನ ಬಹಳ ವಿಶಿಷ್ಟವಾಗಿದೆ. 'ಗ್ರಂಥ ಸಂಪಾದನೆಗೆ ದಕ್ಷಿಣ ಕನ್ನಡದ ಕೊಡುಗೆ' ಲೇಖನ ಹಲವು ಕಾರಣಗಳಿಂದ ಗಮನ ಸೆಳೆಯುತ್ತದೆ. ಸೀಚಿಂತನೆಯ ಕುರಿತ ಮತ್ತೆರಡು ಲೇಖನಗಳಲ್ಲಿ ಲೇಖಕಿ 'ಸದ್ಗುಣಿ ಕೃಷ್ಣಾಬಾಯಿ' ಹಾಗೂ ಅವರ ಕೃತಿಯನ್ನೂ ಪರಿಶೀಲಿಸಿರುವುದು ಗಮನಾರ್ಹ ಸಂಗತಿ.
ತೆರೆಮರೆಗೆ ಸಂದುಹೋದಂಥ ಅನೇಕ ಲೇಖಕಿಯರ ಪೈಕಿ ಯಮುನಾ ಲಿಂಗಪ್ಪ ಒಬ್ಬರು. ಅವರ ಬಗೆಗಿನ ಲೇಖನ ತುಂಬಾ ವಿಶಿಷ್ಟವಾಗಿದೆ. ಪುಸ್ತಕದ ಕೊನೆಯಲ್ಲಿ, ಲೇಖನ ಡಾ. ನಿರಂಜನ ವಾನಳ್ಳಿ ಅವರ ಪ್ರಬಂಧಗಳನ್ನು ಕುರಿತಾಗಿದೆ. ತಮ್ಮ ಸೂಕ್ಷ್ಮ ಗ್ರಹಿಕೆಯ ಮೂಲಕ ಆಯಾ ವಸ್ತುವಿನ ಚರ್ಚೆಗೆ ಲೇಖಕರು ವೇಗ ನೀಡುತ್ತಾರೆ.
ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ. ಎಚ್.ಜಿ. ಶ್ರೀಧರ ಅವರು ಕನ್ನಡ ವಿಭಾಗ ಮುಖ್ಯಸ್ಥರು ಕೂಡ. ಹೆಸರಾಂತ ವಿಮರ್ಶಕ, ಸಂಶೋಧಕರಾಗಿರುವ ಅವರು ಶಿವಮೊಗ್ಗ ಜಿಲ್ಲೆಯ ಸಾಗರದ ಮುಂಡಿಗೆಹಳ್ಳದವರು. ಸಾಗರದ ಲಾಲ್ಬಹಾದೂರ್ ಶಾಸ್ತಿ ಕಾಲೇಜಿನಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಪಡೆದಿದ್ದಾರೆ. ’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧಕಲೆ' ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿ, ಪದವಿ ತರಗತಿ ಪಠ್ಯಪುಸ್ತಕಗಳ ರಚನಾ ಸಮಿತಿ; ಕ್ಯಾಲಿಕತ್ ವಿಶ್ವವಿದ್ಯಾಲಯದ ಪದವಿ ಪರೀಕ್ಷಾ ಮಂಡಳಿಯ ಸದಸ್ಯರಾಗಿರುವ ಅವರು ...
READ MORE