ಕನ್ನಡದ ಹಿರಿಯ ವಿಮರ್ಶಕರ ಜಿ.ಎಸ್. ಆಮೂರ ಅವರು ಗಿರೀಶ ಕಾರ್ನಾಡರ ಬಾನುಲಿ ನಾಟಕ 'ಮಾನಿಷಾದ'ವೂ ಸೇರಿದಂತೆ ಎಲ್ಲ ಹನ್ನೆರಡು ನಾಟಕಗಳ ಕೂಲಂಕಷ ಅಧ್ಯಯನ ಕೈಗೊಂಡು ಈ ಕೃತಿ.
ಕಾರ್ನಾಡರ ನಾಟಕಗಳ ಮೇಲೆ ಇತಿಹಾಸ, ಪುರಾಣ, ವೇದ, ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ರಂಗಭೂಮಿಗಳ ನಾಟಕಕಾರರ, ಸಮಕಾಲೀನ ಸಂದರ್ಭದ ಪ್ರೇರಣೆ-ಪ್ರಭಾವಗಳನ್ನು ಪರಿಶೀಲಿಸಿದ್ಈದಾರೆ. ಗಿರೀಶರ ನಾಟಕಗಳ ಸಾಧ್ಯತೆ ಹಾಗೂ ಮಿತಿಗಳು ಇತ್ಯಾದಿಗಳನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ವಿಮರ್ಶಿಸಿದ್ದಾರೆ. ಕಾರ್ನಾಡರ ನಾಟಕಗಳ ಓದುಗರಿಗೆ, ವಿಶೇಷ ಅಧ್ಯಯನ ಮಾಡುವ ಅಭ್ಯಾಸಿಗಳಿಗೆ ದಿಕ್ಕೂಚಿಯಾಗಬಲ್ಲ ಅಪರೂಪದ ವಿಮರ್ಶಾ ಕೃತಿ.
ಕನ್ನಡ ಸಾಹಿತ್ಯವನ್ನು ಇಂಗ್ಲಿಷ್ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ಕನ್ನಡ-ಇಂಗ್ಲಿಷ್ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ. ಶಿಕ್ಷಕರಾಗಿ ದೊರೆತ ಹುಚ್ಚೂರಾವ್ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್.ಜಿ. ಗುತ್ತಲ ಮಾಸ್ತರು ಇಂಗ್ಲಿಷ್ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ...
READ MORE