‘ಅನಂತಮೂರ್ತಿಯವರ ಸಾಹಿತ್ಯದ ಒಲವು - ನಿಲುವುಗಳು’ಮಾಧವ ಕುಲಕರ್ಣಿ ಅವರ ವಿಮರ್ಶತ್ಮಾಕ ಕೃತಿಯಾಗಿದೆ. ಅನಂತಮೂರ್ತಿಯವರ ಸಾಹಿತ್ಯದ ಒಲವುಗಳ ಅನೇಕ ಮಾಹಿತಿಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ.
ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...
READ MOREಹೊಸತು -ಮೇ-2002
ತಮ್ಮ ವಿಮರ್ಶೆಗಳಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನೇ ಆಯ್ಕೆ ಮಾಡಿಕೊಳ್ಳುವ ಶ್ರೀ ಮಾಧವಕುಲಕರ್ಣಿ ಕಾರಂತ-ಕಾರ್ನಾಡರ ಸಾಹಿತ್ಯವನ್ನು ಈಗಾಗಲೇ ವಿಮರ್ಶಿಸಿ ಮುಂದಿನದು ಬೇಂದ್ರೆ ಕಾವ್ಯವೆಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಉತ್ತಮ ವಿಮರ್ಶೆಗಳ ಮಹಾಪೂರವೇ ಓದುಗರೆಡೆಗೆ ಹರಿದು ಬಂದಿದೆಯೆಂದರೆ ಅತಿಶಯೋಕ್ತಿಯೇನಲ್ಲ. ತೂಕ-ಮೌಲ್ಯ-ಗುಣಮಟ್ಟ ಅಳೆಯುವಲ್ಲಿ ವಿಮರ್ಶಕರು ದಾಕ್ಷಿಣ ತೋರದ ನಿಖರತೆಯತ ಸಾಗಿದ್ದಾರೆ.