ಅನಕೃ ಮತ್ತು ಸಾಮಾಜಿಕ ಪ್ರಜ್ಞೆ

Author : ವೆಂಕೋಬರಾವ್ ಎಂ.ಹೊಸಕೋಟೆ

Pages 176

₹ 190.00




Year of Publication: 2021
Published by: ಆರೆಂಜ್ ಬುಕ್ಸ್
Address: 176, 12ನೇ ಕ್ರಾಸ್, 2ನೇ ಮಹಡಿ, ಅಗ್ರಹಾರದಾಸರಹಳ್ಳಿ, ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560079

Synopsys

‘ಅನಕೃ ಮತ್ತು ಸಾಮಾಜಿಕ ಪ್ರಜ್ಞೆ’ ಲೇಖಕ ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರ ವಿಮರ್ಶಾ ಕೃತಿ. ಕೃತಿಯ ಕುರಿತು ತಿಳಿಸುತ್ತಾ ಕಾದಂಬರಿ, ಸಣ್ಣಕಥೆ, ಪಾಶ್ಚಾತ್ಯ ಸಾಹಿತ್ಯದಿಂದ ನಮಗೆ ಕನ್ನಡಕ್ಕೆ ಬಂದವು ಎಂದು ಹೇಳಬಹುದಾದಷ್ಟು ಮಟ್ಟಿಗೆ ಪ್ರಭಾವಿತವಾದವು. ಇಂಗ್ಲೀಷ್ ಸಾಹಿತ್ಯದ ಪ್ರಭಾವ ಬೀಳುವ ಮೊದಲೇ ಕಾದಂಬರಿ ಎನ್ನಬಹುದಾದ ಮೂರು ಕೃತಿಗಳು ರಚಿತವಾದವು ಎಂದು ಸಾಹಿತ್ಯದ ಚರಿತ್ರಕಾರರು ಹೇಳುತ್ತಾರೆ. ಯಾದವನ ಕಲಾವತೀ ಪರಿಣಯ ಸು(1815), ಮುಮ್ಮಡಿ ರಮ್ಯ ಕಥೆಗಳು, 1842 ರಲ್ಲಿ ಜಾನ್ ಬನ್ ಯನ್ ನ ದಿ ಪಿಲ್ ಗ್ರೀಮ್ಸ್ ಪ್ರೋಗ್ರೆಸ್ 1895 ಗೆ ಬರೆದ ಇಂಗ್ಲೀಷ್ ಪೀಠಿಕೆಯಲ್ಲಿ ವೆಂಕಟಾಚಾರ್ಯರು ನಾವೆಲ್ ಪದವನ್ನು ಬಳಸಿದರು. ಕಾದಂಬರಿ ಸಮಾಜದ ಹಾಗೂ ಸಮಾಜದ ಅಂಗ ಭೂತನಾದ ಮನುಷ್ಯನ ಚರಿತ್ರೆ ನಡವಳಿಕೆಗಳಲ್ಲಿ ಕಂಡುಬರುವ ದುರ್ನಡತೆ ಮುಂತಾದವುಗಳನ್ನು ಉದಾಹರಣೆಗಳೊಡನೆ ಚಿತ್ರಿಸಿ ಪ್ರತಿಯೊಬ್ಬನೂ ಸದ್ಭಾವದಿಂದ ನಡೆದುಕೊಳ್ಳುವುದನ್ನು ತೋರ್ಪಡಿಸ ತಕ್ಕದಾಗಿದೆ ಎಂದರು. 1892ರಲ್ಲಿ ಪ್ರಕಟವಾದ ಲಕ್ಷ್ಮಣರಾವ್ ಗದಗಕರ ಸೂರ್ಯಕಾಂತ ಕನ್ನಡದ ಮೊದಲನೆಯ ಸ್ವತಂತ್ರ ಕಾದಂಬರಿ ಎನ್ನಬಹುದು. ಇದು ಐತಿಹಾಸಿಕ ಕಾದಂಬರಿ, ನಂತರ ಬಂದ ಗುಲ್ಜಾಡಿ ವೆಂಕಟರಾಯರ ಇಂದಿರಾಬಾಯಿ ಗಮನಸಿಬೇಕಾದ ಕಾದಂಬರಿ ಇದರ ಇನ್ನೊಂದು ಶೀರ್ಷಿಕೆ ಸದ್ಧರ್ಮವಿಜಯವು ಇದೇ ಕೃತಿಯು ನೀತಿ ಪ್ರಧಾನ ಎಂಬುದನ್ನು ತೋರಿಸುತ್ತದೆ. ಪರಂಪರಾಗತ ನಂಬಿಕೆ ಕಟ್ಟಲೆಗಳು ಇವುಗಳ ಕೋಟೆಯಂತಿರುವ ಧಾರ್ಮಿಕ ಮಠಗಳು ಇವನ್ನು ಬಯಲಿಗೆಳೆದು ಸುಧಾರಣೆಯ ಅಗತ್ಯವನ್ನು ಬೆರಳಿಟ್ಟು ತೋರಿಸುತ್ತದೆ ಕಾದಂಬರಿ. ಕಾಮುಕನಾದ ಗಂಡನ ಕೈ ಹಿಡಿದು, ವಿಧವೆಯಾಗಿ ಹಲವು ಕಷ್ಟಗಳನ್ನನುಭವಿಸಿ ಮತ್ತೆ ಮದುವೆಯಾಗಿ ಸಮಾಜದಲ್ಲಿ ಕೋಲಾಹಲವೆಬ್ಬಿಸಿದ ಇಂದಿರಾ ಈ ಕಾದಂಬರಿಗೆ ಹೆಸರು ಕೊಟ್ಟಿದ್ದಾಳೆ ಇಂದಿರಾಬಾಯಿ ಮೊದಲನೆಯ ಸ್ವತಂತ್ರ ಸಾಮಾಜಿಕ ಕಾದಂಬರಿ. ಈ ನಿಟ್ಟಿನಲ್ಲಿ ಅನಕೃರವರ ಈ ಸಾಮಾಜಿಕ ಕಾದಂಬರಿಯು ಸಹೃದಯ ಓದುಗರಿಗೆ ಖುಷಿ ತರುವುದು ಎಂದಿದ್ದಾರೆ ಡಾ.ವೆಂಕೋಬರಾವ್ ಎಂ.ಹೊಸಕೋಟೆ.

About the Author

ವೆಂಕೋಬರಾವ್ ಎಂ.ಹೊಸಕೋಟೆ

ಲೇಖಕ ಡಾ.ವೆಂಕೋಬರಾವ್ ಎಂ.ಹೊಸಕೋಟೆ ಅವರು ಕನ್ನಡದಲ್ಲಿ ಎಂ.ಎ, ತತ್ವಶಾಸ್ತ್ರದಲ್ಲಿ ಎಂ.ಎ, ಎಂ.ಎಡ್. ಎಂ.ಫಿಲ್ ಶಿಕ್ಷಣ ಸೇರಿದಂತೆ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿಯನ್ನು ಪಡೆದಿದ್ದಾರೆ. ಸದ್ಯ  ರಾಜಾಜಿನಗರದ ಎಂ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ತಂದೆ- ಮುನಿದೇವರಾವ್ ಸಿ, ತಾಯಿ- ಅನುಸೂಯಬಾಯಿ ಎ. ವೃತ್ತಿಯೊಂದಿಗೆ ಸಾಹಿತ್ಯಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ತಲ್ಲಣ, ಒಡಲು, ಮತ್ತೆ ಆಮೇಲೆ ಇನ್ನೇನೂ, ಲಾಕ್ ಡೌನ್ ಋತುಮಾನ, ದಯವಿಟ್ಟು ನಂತರ ಪ್ರಯತ್ನಿಸಿ ಎಂಬ ಕಾದಂಬರಿಗಳು. ಮಿಂಚುಳ್ಳಿ, ಬೆಸುಗೆ, ಕಾಣದ ಕಡಲು, ಆಕಾಶದ ನೀಲಿಯಲ್ಲಿ, ಪ್ರೀತಿ ನೀನಿಲ್ಲದ ಮೇಲೆ ಎಂಬ ಕವನ ಸಂಕಲನಗಳು. ಅಂಚು, ಕಪ್ಪುನೆಲ, ಅಸ್ಮಿತೆಯ ...

READ MORE

Related Books