ವಿಮರ್ಶೆ ಅಂದರೆ ಏನು? ವಿಮರ್ಶೆಯು ಯಾವೆಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಒಂದು ಕೃತಿಯನ್ನು ವಿಮರ್ಶೆ ಮಾಡುವುದು ಹೇಗೆ? ಇಂತಹ ಹಲವಾರು ಸಂದೇಹಗಳಿಗೆ ಟಿ.ಪಿ. ಅಶೋಕ್ ಅವರು ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ಸಾಹಿತ್ಯದಿಂದ ಸಮಾಜಕ್ಕೆ, ಸಮಾಜದಿಂದ ಸಂಸ್ಕೃತಿಯ ವಿಶಾಲ ನೆಲೆಗಳಿಗೆ ಹಬ್ಬಿಕೊಳುವ ವಿಮರ್ಶೆ ಕೃತಿಯನ್ನು ಹೇಗೆ ವಿಶ್ಲೇಷಿಸುತ್ತದೆ ಎಂಬುದನ್ನು ತಿಳಿಯಬಹುದು. ಕೃತಿಯ ಮೂಲಕ ಲೋಕವನ್ನೂ, ಲೋಕದ ಮೂಲಕ ಕೃತಿಯನ್ನೂ ಗ್ರಹಿಸುತ್ತ ಎರಡರ ಒಳಗೂ ನಮ್ಮನ್ನು ಆಪ್ತವಾಗಿ ಕರೆದೊಯ್ಯುವ ಅಶೋಕರ ವಿಮರ್ಶೆಯು ಸಾಹಿತ್ಯವನ್ನು ಹಿಂಡಿ ಅರ್ಥದ ಎಣ್ಣೆ ತೆಗೆಯುವ ಪ್ರಯಾಸವಲ್ಲ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE