ಇತರೆ ಸಂದರ್ಭಗಳಲ್ಲಿ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಹಿನ್ನೆಲೆ ಕೃತಿಗಳ ಕುರಿತು ಟಿ. ಪಿ. ಅಶೋಕರು ಬರೆದ 30 ಲೇಖನಗಳ ಸಂಗ್ರಹ ‘ಸಾಹಿತ್ಯ ಸಮೃದ್ಧಿ’. ಇಲ್ಲಿಯ ಬಹುತೇಕ ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಲೇಖಕರ ಶೈಲಿ, ಸೂಕ್ಷ್ಮ ಸಂವೇದನೆ ಹಾಗೂ ವಿವಿಧ ಆಯಾಮಗಳ ವಿಮರ್ಶಾ ನೋಟಗಳು ಓದುಗರನ್ನು ಸೆಳೆಯುತ್ತವೆ. ಸಣ್ಣ ಕತೆಗಳ ಸರದಾರ ಮಾಸ್ತಿ ಅವರಿಂದ ಆರಂಭವಾಗಿ ಲಂಕೇಶ್, ತೇಜಸ್ವಿ ಅವರ ಒಂದೊಂದು ಕೃತಿಗಳ ಕುರಿತು ವಿಮರ್ಶಿಸಿದ್ದಾರೆ. ಕಾಫ್ಕಾ, ಇಟಾಲೋ, ಕಾಲ್ವಿನೋ, ಓಲೆ ಕುಲೆಟ್, ಯಸುನಾರಿ ಕವಬಾಟ, ಹೆಮಿಂಗ್ವೆ ಮುಂತಾದ ಲೇಖಕರ ಕೃತಿಗಳ ಕುರಿತ ವಿಮರ್ಶಾ ನೋಟ ಹಾಗೂ ಅನುವಾದ ಕೃತಿಗಳ ಬಗ್ಗೆಯೂ ಇಲ್ಲಿ ನೇರ ದೃಷ್ಟಿಯನ್ನು ಬೀರಿದ್ದಾರೆ ಲೇಖಕರು.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE