‘ನುಡಿಯ ನೆರಳು’ ಯುವ ಬರಹಗಾರ್ತಿ ಮಂಜುಳಾ ಗೋನಾಳ ಅವರ ವಿಮರ್ಶಾ ಲೇಖನಗಳ ಸಂಕಲನ. ಈ ಕೃತಿಗೆ ಬರಗೂರು ರಾಮಚಂದ್ರಪ್ಪ ಅವರು ಬೆನ್ನುಡಿ ಬರೆದಿದ್ದಾರೆ. ಮಂಜುಳಾ ಗೋನಾಳ ಅವರ ಮೊದಲ ಪ್ರಕಟಿತ ಕೃತಿಯಾಗಿರುವ ನುಡಿಯ ನೆರಳು ಕೃತಿ ವಿಶ್ಲೇಷಣೆ. ತಾತ್ವಿಕ ಚಿಂತನೆ, ಸಾಹಿತ್ಯ ಕೇಂದ್ರಿತ ಪರಿಶೀಲನಾ ಲೇಖನಗಳಿಂದ ಗಮನ ಸೆಳೆಯುತ್ತದೆ ಎನ್ನುತ್ತಾರೆ ಬರಗೂರು. ತಾವು ಅಧ್ಯಯನ ಮಾಡಿದ ಕೆಲವು ಕೃತಿಗಳನ್ನು ವಿಶ್ಲೇಷಿಸುತ್ತ ತಾತ್ವಿಕತೆಗೆ ಹೊರಳುವ ದೃಷ್ಟಿಕೋನದ ಲೇಖನಗಳು ಲೇಖಕಿಯ ಕಣ್ಣೋಟದ ಫಲವಾಗಿದೆ. ಇನ್ನೂ ಕೆಲವು ತಾತ್ವಿಕ ಚಿಂತನೆಗೆ ತೊಡಗುತ್ತ, ಸಾಹಿತ್ಯಿದ ಆಕರಗಳನ್ನು ಒಳಗೊಂಡು, ಆಳಕ್ಕೆ ಇಳಿದ ಒಳನೋಟವನ್ನು ನೀಡುತ್ತವೆ. ಇದಕ್ಕೆ ನಿದರ್ಶನವಾಗಿ ಬದುಕು, ಪ್ರೀತಿ, ಎಂಬ ಲೇಖನಗಳನ್ನು ಪ್ರಾತಿನಿಧಿಕವಾಗಿ ಪರಿಗಣಿಸಬಹುದು, ಹೊಸ ತಂತ್ರಜ್ಞಾನದ ಫಲವಾದ ಅಂತರ್ಜಾಲದಲ್ಲಿ ಬರುತ್ತಿರುವ ಬರಹಗಳನ್ನು ಸಾಹಿತ್ಯ ಕೇಂದ್ರೀತ ಪರಿಶೀಲನೆಗೆ ಒಡ್ಡುವ ರೀತಿ ಗಮನೀಯವಾಗಿರುವುದನ್ನು ಕಾಣಬಹುದು.
ಯಾವುದೇ ವಿಷಯವನ್ನು ತೆಗೆದುಕೊಂಡರ ತಮ್ಮ ಓದಿನ ಫಲಿತಗಳನ್ನು ಹೊಂದಿಸುತ್ತ ಬರಹವನ್ನು ಬೆಳೆಸುವ ಕ್ರಮದಿಂದ ಪ್ರತಿ ಬರಹಕ್ಕೂ ಸಾಹಿತ್ಯ ಕೇಂದ್ರಿತ ಪರಿಶೀಲನಾ ಸ್ವರೂಪವೊಂದು ಲಭ್ಯವಾಗುವುದು, ಮಂಜುಳಾ ಗೋನಾಳ ಅವರ ರಚನೆಗಳ ವಿಶಿಷ್ಠತೆಯಾಗಿದೆ ಎಂಬುದು ಬರಗೂರು ರಾಮಚಂದ್ರಪ್ಪ ಅವರ ಅಭಿಪ್ರಾಯ. ಯಾವುದೇ ವಿಷಯವನ್ನು ತೆಗೆದುಕೊಂಡರೂ ತಮ್ಮ ಓದಿನ ಫಲಿತಗಳನ್ನು ಹೊಂದಿಸುತ್ತ ಬರಹಗಳನ್ನು ಬೆಳೆಸುವ ಕ್ರಮದಿಂದ ಪ್ರತಿ ಬರಹಕ್ಕೂ ಸಾಹಿತ್ಯ ಕೇಂದ್ರಿತ ಪರಿಶೀಲನಾ ಸ್ವರೂಪವೊಂದು ಲಭ್ಯವಾಗುವುದು, ಮಂಜುಳ ಗೋನಾಳ ಅವರ ರಚನೆಗಳ ವಿಶಿಷ್ಠತೆಯಾಗಿದೆ. ಯಾವುದೇ ವಿಷಯವನ್ನು ಮೇಲ್ನೋಟದ ವಸ್ತುವಾಗಿಸದೆ, ಒಳಗಿಳಿದು ಹೋರಬಂದು, ಭಾಷಿಕ ರೂಪ ಕೊಡುವ ಮಂಜುಳ ಗೋನಾಳ ಅವರು ಮೊದಲ ಕೃತಿಯಲ್ಲೆ ಬೆಳೆಯುವ ಭರವಸೆ ಮೂಡಿಸಿದ್ದಾರೆ. ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ.
ನುಡಿಯ ನೆರಳು ಕೃತಿಯ ವಿಮರ್ಶೆ
ಹಲವಾರು ಪ್ರಕಟಿತ ಪುಸ್ತಕಗಳನ್ನೋದಿ ಲೇಖಕಿ ವಿಮರ್ಶಾ ಕೃತಿಯೊಂದನ್ನು ಹೊರತಂದಿದ್ದಾರೆ. ಇಲ್ಲಿ ಅಪಾರವಾದ ಓದಿನ ಅನುಭವ ಇದೆ. ಬೆಳೆವ ಸಿರಿ ಮೊಳಕೆಯಲ್ಲೆಂಬಂತೆ ಸಂಶೋಧನ ವಿದ್ಯಾರ್ಥಿನಿ ಮಂಜುಳ ಗೋನಾಳ ಮುಂದೆ ಅತ್ಯುತ್ತಮ ವಿಮರ್ಶಕಿಯಾಗುವ ಲಕ್ಷಣಗಳು ಈ ಕೃತಿಯಲ್ಲಿ ಕಾಣುತ್ತವೆ. ಕೃತಿಗಳ ಆಳಕ್ಕಿಳಿದು ಅರ್ಥೈಸಿದ ಓದಿನ ಫಲಿತ ತನ್ನದೇ ರೀತಿಯಲ್ಲಿ ಇಲ್ಲಿ ಅನಾವರಣಗೊಂಡಿದೆ. ಯಾವುದೇ ಒಂದು ಬಗೆಯ ಸಾಹಿತ್ಯ ಪ್ರಕಾರವನ್ನಷ್ಟೇ ಆಯ್ದುಕೊಳ್ಳದೆ ವಿವಿಧ ಲೇಖಕರ ವೈವಿಧ್ಯಮಯ ಬರಹಗಳನ್ನು ಈಕೆ ಒರೆಗೆ ಹಚ್ಚಿದಂತಿದೆ. ಇದರಿಂದ ಓದಿನ ವಿಸ್ತಾರ ಮತ್ತು ಅನುಭವ ಲೇಖಕಿಗೆ ಮಾತ್ರವಲ್ಲದೆ ವಿಮರ್ಶೆಯನ್ನೋದುವ ನಮಗೂ ಆಗುತ್ತದೆ. ಗ್ರಾಮ ಸಮುದಾಯದ ಬದುಕಿನಿಂದ ಆಧುನಿಕ ಕಾಲದ ನಗರಗಳ ಬದುಕಿನ ಚಿತ್ರಣಗಳು ಇಲ್ಲಿ ಅನಾವರಣಗೊಂಡು ಅದರ ಬಗೆಗಿನ ವಿಸ್ತಾರವಾದ ವಿಮರ್ಶಾತ್ಮಕ ಅನಿಸಿಕೆಗಳೂ ಮುಖ್ಯವಾಗುತ್ತವೆ. ಟೀಕೆಗಳೇನೂ ಹೆಚ್ಚಾಗಿಲ್ಲದ ಈ ವಿಮರ್ಶೆಗಳು ಲೇಖಕಿಯ ನಿಲುವನ್ನು ಮಾತ್ರ ಸ್ಪಷ್ಟಪಡಿಸುತ್ತವೆ.
(ಕೃಪೆ; ಓದುಬರಹ)
©2024 Book Brahma Private Limited.