ಲೇಖಕಿ ಅಖ್ತರ್ ಎಸ್ ಅವರ ಮೊದಲ ಕೃತಿ ’ಮೋಡದೊಳಗಿನ ಗುಡುಗು: ವಿಮರ್ಶಾ ಲೇಖನಗಳ ಸಂಕಲನ'. ಓದುವಿಕೆ, ಪಠ್ಯ ಪುಸ್ತಕಗಳ ಸ್ವರೂಪ ಮತ್ತು ಸಾಧ್ಯತೆಯ ಮರುಚಿಂತನೆ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಆಧುನಿಕ ಪೂರ್ವ ಸಾಹಿತ್ಯಾಧ್ಯಯನ, ವಚನ ಸಾಹಿತ್ಯದಲ್ಲಿನ ಅನುಭಾವ ಸೇರಿದಂತೆ ಈ ಕೃತಿಯಲ್ಲಿ ಒಟ್ಟು 13 ಲೇಖನಗಳು ಸಂಕಲನಗೊಂಡಿವೆ.
ಕೃತಿಗೆ ಮುನ್ನುಡಿ ಬರೆದ ಬರಗೂರು ರಾಮಚಂದ್ರಪ್ಪ ’ಅಖ್ತರ್ ಅವರ ಪ್ರತಿಲೇಖನದ ಹಿನ್ನೆಲೆಯಲ್ಲಿ ಸಾಮಾಜಿಕ - ಕಾಳಜಿಯ ಸದ್ದು ಉದ್ದಕ್ಕೂ ಹರಿಯುವ ಅಯಾಮವಾಗಿ ಅಂತರ್ಗತವಾಗಿದೆ. ಹೀಗಾಗಿ, ಸಾಹಿತ್ಯ ಕ್ಷೇತ್ರದ ಸಾಮಾಜಿಕ ವಿಮರ್ಶೆಯ ಸಾಧ್ಯತೆಗಳನ್ನು ಒಳಗೊಂಡಿವೆ. ಒಟ್ಟಾರೆ ಹೇಳುವುದಾದರೆ ಅಖ್ತರ್ ಅವರು ಭರವಸೆಯ ಆಸೆ ಹುಟ್ಟಿಸಿರುವ ಹೊಸ ಪೀಳಿಗೆಯ ಲೇಖಕಿ’ ಎಂದು ಪ್ರಶಂಸಿದ್ದಾರೆ.
ಲೇಖಕಿಯಾದ ಅಖ್ತರ್ ಎಸ್ ಮೂಲತಃ ( ಜನನ: 08-05-1981) ಕೋಲಾರದವರು. ತಂದೆ : ಸುಭಾನ್ ಕೆ ಐ. ತಾಯಿ : ಸಾಹೇರಾ ಬೇಗಂ. ಪ್ರಾಥಮಿಕ ಹಾಗೂ ಪದವಿಯವರೆಗಿನ ಶಿಕ್ಷಣ ಹುಟ್ಟೂರು ಕೋಲಾರದಲ್ಲಿ.ಎಂ.ಎ ಕನ್ನಡ ಬೆಂಗಳೂರು ವಿಶ್ವವಿದ್ಯಾಲಯದಿಂದ, ಪಿ.ಹೆಚ್‌ಡಿ.,ಪದವಿಯನ್ನು ಡಾ.ರಾಜಪ್ಪ ದಳವಾಯಿ ಅವರ ಮಾಗ೯ದಶ೯ನದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಯಿಂದ ಪಡೆದಿದ್ದಾರೆ.ಪ್ರಸ್ತುತ ಕನಾ೯ಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದಶ೯ಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರಿನಲ್ಲಿ "ಕನ್ನಡ ರಂಗಭೂಮಿಗೆ ಮುಸ್ಲಿಂ ಕಲಾವಿದೆಯರ ಕೊಡುಗೆ" ಎಂಬ ವಿಷಯವನ್ನು ಕುರಿತು ಡಿ.ಲಿಟ್ ಪದವಿಗಾಗಿ ಸಂಶೋಧನೆಯನ್ನು ಕೈಗೊಂಡಿದ್ದಾರೆ. ಕೃತಿಗಳು: ಮೋಡದೊಳಗಿನ ಗುಡುಗು (ವಿಮರ್ಶಾ ...
READ MORE