ಪ್ರೊ. ಎಂ. ಶಿವನಂಜಯ್ಯ ಅವರ ವಿಮರ್ಶೆ ಕೃತಿ- ಕುವೆಂಪು: ದೃಷ್ಟಿ ಮತ್ತು ಸೃಷ್ಟಿ. ಮೈಸೂರಿನ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಎಂ. ಶಿವನಂಜಯ್ಯ ಅವರು ತಮ್ಮ ಸಂಶೋಧನೆ ಹಿನ್ನೆಲೆಯಲ್ಲಿ ಕುವೆಂಪು ಅವರೊಂದಿಗೆ ಮಾತನಾಡಿ ಸಲಹೆಗಳನ್ನು ಪಡೆದವರು. ಆದ್ದರಿಂದ, ಕುವೆಂಪು ಅವರನ್ನು ಸಾಹಿತ್ಯ ಮಾತ್ರದಿಂದಷ್ಟೇ ಅಲ್ಲ; ವ್ಯಕ್ತಿತ್ವದಿಂದಲೂ ಅವರ ಸಾಹಿತ್ಯಕ ವಿಭಿನ್ನತೆಗಳನ್ನು ಸಮಗ್ರವಾಗಿ ಕಟ್ಟಿಕೊಡಲು ಸಾಧ್ಯವಾಗಿದೆ. ಕೃತಿಯಲ್ಲಿ ಒಟ್ಟು 14 ಲೇಖನಗಳಿವೆ. ಕಥೆ-ಕಾದಂಬರಿ-ಕಾವ್ಯ-ನಾಟಕ-ಮಹಾಕಾವ್ಯಗಳನ್ನು ಮಾನವೀಯತೆ, ವಿಶ್ವಮಾನವತೆ ಹೀಗೆ ಭಿನ್ನ ನೆಲೆಯಲ್ಲಿ ಲೇಖಕರು ಇಲ್ಲಿ ಚರ್ಚೆಗೆ ಎತ್ತಿಕೊಂಡಿದ್ದಾರೆ.
ಪ್ರೊ. ಎಂ.ಶಿವನಂಜಯ್ಯ ಅವರು ರಾಮನಗರ ಜಿಲ್ಲೆಯ ರಾಮನಗರ ತಾಲೂಕಿನ ಕೂಟಗಲ್ಲು ಗ್ರಾ,ಮದವರು. ತಮ್ಮ ಹಳ್ಳಿ ಸೇರಿದಂತೆ ಬೆಸಗರಹಳ್ಳಿ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಕೈಗೊಂಡಿದ್ದು, ರಾಜ್ಯದ ವಿವಿಧೆಡೆ ಉಪನ್ಯಾಸರಾಗಿ, ಪ್ರಾಧ್ಯಾಪಕರಾಗಿ ಹಾಗೂ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ. ಕವನ ಸಂಕಲನ,ವಿಮರ್ಶೆ,ನಾಟಕ,ಕಾದಂಬರಿಗಳನ್ನು ಬರೆದಿದ್ದು, ಸಾಮಾಜಿಕ ಸಾಂಸ್ಕ್ರತಿಕ ಹಾಗೂ ಪರಿಸರವಾದಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಜಾನಪದ ಲೋಕದ ಆಡಳಿತಾಧಿಕಾರಿಯೂ ಆಗಿದ್ದಾರೆ. ...
READ MORE