ಕುವೆಂಪು - ಬೇಂದ್ರೆ ಇವರೀರ್ವರೂ ಕಳೆದ ಶತಮಾನ ಕಂಡ ಕನ್ನಡದ ಮಹಾಕವಿಗಳು. ದಕ್ಷಿಣೋತ್ತರ ಧ್ರುವಗಳಂತೆ ನಾಡಿನ ಉದ್ದಗಲಕ್ಕೂ ಚುಂಬಕ ಶಕ್ತಿಯಾಗಿ ಬಾಳಿ ಬೆಳಕಾದವರು. ಒಬ್ಬೊರದು ಒಂದೊಂದು ದೃಷ್ಟಿ. ಅದರಂತೆ ಸೃಷ್ಟಿ . ಈ ಮಹಾಕವಿಗಳೀರ್ವರ ಪ್ರತಿಭಾನ್ವೇಷಣೆಗಾಗಿ ನಡೆದು ಬಂದಿರುವ ವಿಮರ್ಶಗೆ ಹಲವು ಹತ್ತು ಮುಖ, ಅಂತೆಯೇ ಈ ಮಹಾಕವಿಗಳನ್ನು ಕಂಡಂತೆ ಕೆಲವು ನಿಲುವುಗಳಿಂದ ತೂಗಿ ನೋಡಿದ ಪ್ರಯತ್ನವೇ ಈ ಕೃತಿ.
ಈ ಕೃತಿಯಲ್ಲಿ ಐದು ಲೇಖನಗಳಿದ್ದು ಅವು ಬೇರೆ ಬೇರೆ ವಿಚಾರ ಸಂಕೀರ್ಣಗಳಲ್ಲಿ, ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಸ್ತುತ ಪಡಿಸಿದವುಗಳು. ಅವುಗಳಲ್ಲಿ ಕುವೆಂಪು ಪ್ರಣಯ ಗೀತೆಗಳು ಹಾಗೂ ಭಾವಗೀತಕಾರರಾಗಿ ಕುವೆಂಪು-ಬೇಂದ್ರೆ ಈ ಎರಡು ಲೇಖನಗಳು ಕುವೆಂಪು ಅಧ್ಯಯನ ಕೇಂದ್ರದ ಕುವೆಂಪು ಸಾಹಿತ್ಯ ಲೋಕ-1 ಮತ್ತು 2ನೇ ಸಂಪುಟಗಳಲ್ಲಿ ಪ್ರಕಟವಾಗಿವೆ.
ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ ಅವರು 1940 ಫೆಬ್ರುವರಿ 14 ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -ಪ್ರೌಢಶಿಕ್ಷಣ ಪಡೆದ ನಂತರ ಅವರು ಧಾರವಾಡದಲ್ಲಿ ಶಿಕ್ಷಣ ಮುಂದುವರಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಭಾಷಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕರಾಗಿ, ತದನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಪಡೆದರು. ಗ್ರಂಥ ಸಂಪಾದನೆ, ಕಥೆ, ಕವನ, ವಿಮರ್ಶೆ ಇವರ ಆಸಕ್ತಿ ವಲಯವಾಗಿತ್ತು. ಕೆಲಕಾಲ ದಲಿತ ದ್ವೈ ಮಾಸಿಕ ಪತ್ರಿಕೆ ಸಂಪಾದಕರಾಗಿದ್ದರು. . ...
READ MORE