ಹಳಗನ್ನಡ ವಿರಳವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬಾಳಿಗೆ ಬೆಳಕನ್ನೀಯುವ, ಸಾರ್ವಕಾಲಿಕ ಸತ್ಯವಾಗಬಲ್ಲ ಕನ್ನಡ ಕಾವ್ಯದ ಪದ್ಯಗಳಿನ್ನಾರಿಸಿ ಚಿಂತನೆಗೆ ತೊಡಗುವ ಕ್ರಮ ಸ್ವಾಗತಾರ್ಹವಾಗಿದೆ.
ಚಿಂತನಸಾಹಿತ್ಯ ಇಂದು ಒಂದು ವಿಶಿಷ್ಟರೂಪವಾಗಿ ಬೆಳಯತ್ತಿದೆ .ಪ್ರಸ್ತುತ ʼಕನ್ನಡ ಕಾವ್ಯದೀಷ್ತಿʼ ಆ ಕ್ಷೇತ್ರಕ್ಕೆ ಹೊಸ ಸೇರ್ಪಡೆ ಎನ್ನಬೇಕು. ಇಲ್ಲಿ ನಮ್ಮ ಕವಿಗಳ ಸೃಜನಶೀಲ ಮನಸ್ಸು, ಗಾಢವಾದ ಲೋಕಾನುಭವ, ಚಿಕಿತ್ಸಕ ದೃಷ್ಟಿ, ಆಳವಾದ ಚಂತನೆ, ಅಪೂರ್ವ ವಿಚಾರಧಾರೆ ಎಲ್ಲ ಮೇಳೈಸಿವೆ. ಇಲ್ಲಿ ಅಸ್ವಸ್ಥ ಬದುಕಿನ ಹತ್ತು ಹಲವು ಸಮಸ್ಯೆಗಳಿಗೆ ಪ್ರಿಯೆಯ ಹಿಕೋಕ್ತಿಯ ತೆರನಲ್ಲಿ ಪರಿಹಾರೋಪಾಯ ಸೂಚಿಸಲಾಗಿದೆ.
ಇಲ್ಲಿನ ಐವತ್ತು ದೀಪ್ತಿಗಳು ಜೀವನವನ್ನು ಸಂಪನ್ನಗೊಳಿಸಿಕೊಳ್ಳಲು ದಿಗ್ದರ್ಶನ ನೀಡುವುದರೊಂದಿಗೆ ವೈಚಾರಿಕ ಹೊಳಹನ್ನು ಒದಗಿಸುತ್ತವೆ. ಜೀವನ ಪ್ರೀತಿ ಮತ್ತು . ವೈಚಾರಿಕತೆ ಇಲ್ಲಿನ ಮುಖ್ಯ ಆ ಶಯವಾಗಿರುವುದರಿಂದ ಸಮಾಜದ ಒಳತಿಗಾಗಿರುವ ರಚನಾತ್ಮಕ ದೃಷ್ಟಿ ಇಲ್ಲಿದೆ. ಇಲ್ಲಿನ ಪ್ರತಿಯೊಂದು ಮಾತುಗಳೂ ನಮ್ಮನ್ನು ಚಿಂತನೆಗೆ ತೊಡಗಿಸುತ್ತವೆ. ಕನ್ನಡ ಅಭಿಜಾತ ಸಾಹಿತ್ಯದ. ಪದ್ಯಗಳನ್ನಾಧರಿಸಿ, ಅಲ್ಲಿಯ ವಿಚಾರ ಸರಣಿಯನ್ನು ಓದುಗರಿಗೆ ಅರ್ಥವಾಗುವ ಹಾಗೆ ಅಭಿವ್ಯಕ್ತಪಡಿಸುವುದು ಸುಲಭವಾದ ಕೆಲಸವೇನಲ್ಲ. ಸೂತ್ರರೂಪದ ಪದ್ಯಗಳಿಗೆ ವಿವರಣೆ ನೀಡುವಾಗ ಇಲ್ಲಿಯ ಭಾಷೆ ಎಲ್ಲಿಯೂ ಸಂಯಮ ಕಳಿದುಕೊಳ್ಳುವುದಿಲ್ಲ. ಅದು ವಿಚಾರ, ವಿಮರ್ಶೆಯಪ್ರಖರತೆಯನ್ನು ಉಳಿಸಿಕೊಳ್ಳುತ್ತದೆ.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MORE