ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು

Author : ವಿ.ಕೃ. ಗೋಕಾಕ (ವಿನಾಯಕ)

Pages 168

₹ 150.00




Year of Publication: 2018
Published by: ಅಭಿನವ ಪ್ರಕಾಶನ
Address: #17, 18-2, 1ನೇ ಮುಖ್ಯರಸ್ತೆ, 2ನೇ ಬ್ಲಾಕ್, ಮಾರೇನಹಳ್ಳಿ, ಬಿಡಿಎ ಬಡಾವಣೆ, ವಿಜಯನಗರ, ಬೆಂಗಳೂರು-560040

Synopsys

ಇಂದಿನ ಕನ್ನಡ ಕಾವ್ಯದ ಗೊತ್ತು ಗುರಿಗಳು-ವಿಮರ್ಶಾ ಲೇಖನಗಳ ಸಂಗ್ರಹ ಕೃತಿಯನ್ನು ವಿ.ಕೃ. ಗೋಕಾಕರು ರಚಿಸಿದ್ದು, ಲೇಖಕ ಎಸ್. ವೆಂಕಟೇಶ ಅವರು ಸಂಪಾದಿಸಿದ್ದರು. 

ಸಾಹಿತ್ಯಕ್ಕೆ ಸಂಸ್ಕೃತಿಯ ಒರೆಗಲ್ಲು, ಸಾಹಿತ್ಯ-ಕಾವ್ಯ, ಕಾವ್ಯದಲ್ಲಿ ವ್ಯಕ್ತಿತ್ವ ನಿರೂಪಣೆ, ಕಾವ್ಯದಲ್ಲಿ ಸ್ಫೂರ್ತಿ -ಸಾಧನೆಗಳು, ಕಾವ್ಯದಲ್ಲಿ ಹಾಸ್ಯ ವಿಡಂಬನೆ, ಗದ್ಯ-ಪದ್ಯ, ಸರಳ-ರಗಳೆ, ಸ್ವಚ್ಛಂಧ-ಛಂದ, ವಿಮರ್ಶೆಯ ರೀತಿ, ಶ್ರೀಯವರು, ಬೇಂದ್ರೆಯವರ ಕಾವ್ಯದಲ್ಲಿ ಪ್ರೀತಿ-ರೂಪರೇಷೆಗಳು, ತಳಿರು, ಪುಟ್ಟಪ್ಪನವರ ಕೊಳಲು ಹೀಗೆ ವಿವಿಧ ಅಧ್ಯಾಯಗಳಲ್ಲಿ ಅರ್ಥಪೂರ್ಣ ವಿಮರ್ಶಾ ಲೇಖನಗಳಿವೆ.

ಕೃತಿಯ ಕುರಿತು ಸ್ವತಃ ಲೇಖಕ ವಿ.ಕೃ.ಗೋಕಾಕ ಅವರು ‘ಅಥಣಿಯಲ್ಲಿ(1932) ಹಾಗೂ ರಾಯಚೂರಿನಲ್ಲಿ (1934) ನಡೆದ ಕವಿಗೋಷ್ಠಿಯಲ್ಲಿ ಮಾಡಿದ ಭಾಷಣಗಳು, ‘ಜಯಕರ್ನಾಟಕ’ ದಲ್ಲಿ ಪ್ರಕಟಿತ ಲೇಖನಗಳು ಹಾಗೂ ಇತರೆ ಲೇಖನಗಳಿವೆ. ಆಧುನಿಕ ಸಾಹಿತ್ಯದ ಚರ್ಚೆಯ ಮುಖಾಂತರವಾಗಿ ಸಾಹಿತ್ಯ ತತ್ವಗಳ ನಿರೂಪಣೆಯ ಪದ್ಧತಿಯು ಅಷ್ಟರಮಟ್ಟಿಗೆ ಪ್ರಚಲಿತವಾಗಿರಲಿಲ್ಲ. ಪದ್ಯ ಕಾವ್ಯವನ್ನು ಕುರಿತ ಇಂತಹ ವಿಮರ್ಶೆಗಳನ್ನು ಇಲ್ಲಿ ಸಂಗ್ರಹಿಸಿದ್ದೇನೆ. ವಿಮರ್ಶೆಯೂ ಶಾಸ್ತ್ರವಿದ್ದಂತೆ ಕಲೆಯೂ ಹೌದು. ಸಾಹಿತ್ಯ ಕೃತಿಯನ್ನು ತೂಗಿ ನೋಡುವಾಗ ಬೇಕಾಗುವ ನ್ಯಾಯ ಬುದ್ದಿಯ ಜೊತೆಗೆ ಕಲ್ಪಕತೆಯೂ, ಸಹಾನುಭೂತಿಯೂ ಬೆರೆತುಕೊಂಡಿರದಿದ್ದರೆ ವಿಮರ್ಶೆಯು ಅಭಿಪ್ರಾಯದ ಸಂತೆಯಾಗುತ್ತದೆ. ಕಲ್ಪತೆಗೆ ಮೀಮಾಂಸೆಯ ತಾಳ ಮೇಳವಿಲ್ಲದಿದ್ದರೆ ವಿಮರ್ಶೆಯು ಅರ್ಧಾಂಗ ವಾಯು ಹಿಡಿದ ದೇಹದಂತೆ ಅಸಮರ್ಥವಾಗುತ್ತದೆ. ಈ ಸಮನ್ವಯವನ್ನು ಸಾಧಿಸಿದ್ದ ವಿಮರ್ಶಕರು ಕವಿಗಳಾಗಬಲ್ಲರು. ಕವಿಗಳು ವಿಮರ್ಶಕರಾಗಬಲ್ಲರು. ಇಂದಿನ ಉತ್ತಮ ಸಾಹಿತ್ಯದಲ್ಲಿ ಕಂಡುಬರುವ ಈ ಕವಿ ವಿಮರ್ಶಕ ಸಿದ್ಧಿಯ ಪರಂಪರೆ ಕನ್ನಡದಲ್ಲಿ ಹೆಚ್ಚಾಗಿ ಬೆಳಗಬೇಕಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಕೆ.ಎನ್. ಆಚಾರ್ಯ ಅವರು ಕೃತಿಗೆ ಮುನ್ನುಡಿ ಬರೆದು ‘ಅಸಾಧಾರಣ ಪಾಂಡಿತ್ಯ, ನಿಸರ್ಗ ಜೀವನ, ಕ್ರಾಂತಿಕಾರಕ ಕಾಂತಿ, ಕೆಚ್ಚೆದೆಯ ತೀಕ್ಷ್ಣತೆ, ಸತ್ಯವಾದಿಯ ಕಟುವಾಕ್ಯ ಇವೆಲ್ಲದರಲ್ಲೂ  ಹಾಸುಹೊಕ್ಕಾಗಿರುವ ಮಾನವತೆ ಇಂತಹ ಅಂಶಗಳನ್ನು ಈ ಗ್ರಂಥವು ಪ್ರತಿಬಿಂಬಿಸುತ್ತದೆ. ಇಲ್ಲಿಯ ಪ್ರಬಂಧಗಳು ಸರ್ವ ಸಾಹಿತ್ಯ ಪ್ರಪಂಚಕ್ಕೆ ಹೊಂದಿಕೊಂಡಿದ್ದು, ಒಂದು ವಿಶಿಷ್ಟತೆಯಿಂದ, ಒಂದು ಐಕ್ಯತೆಯಿಂದ ಸೇರಿಕೊಂಡಿರುವವು. ಸಾಹಿತ್ಯ, ಸಂಸ್ಕೃತಿ ಹಾಗೂ ಇವುಗಳ ನಿರೂಪಣೆ, ವೈವಿಧ್ಯ ಇವೇ ಮೊದಲಾದ ವಿಷಯಗಳನ್ನು ವಿಮರ್ಶೆಗೆ ಒಳಪಡಿಸಿದ ಒರೆಗಲ್ಲು. ಈ ಒರೆಗಲ್ಲಿನಲ್ಲಿ, ಯಾವುದೇ ಕವಿ, ಸಾಹಿತಿ ತನ್ನ ಕಲೋಪಾಸನೆಯ ನೈಜತೆಯನ್ನು, ಯೋಗ್ಯತೆಯನ್ನು ಕಂಡುಕೊಳ್ಳಬಹುದು. ಈ ಪ್ರಬಂಧಗಳನ್ನು ಓದುವಾಗ ‘ಗೋಕಾಕರು, ಕರ್ನಾಟಕ ವಾಙ್ಮಯದ ದಶದಿಕ್ಕುಗಳನ್ನು, ಅಷ್ಟದಿಕ್ಪಾಲಕರನ್ನು ಕಂಡುಹಿಡಿದ ಸುಸಂಸ್ಕೃತರು’ ಎಂದು ನಮಗೆ ಗೋಚರಿಸದೇ ಇರಲಾರದು. ಕೊನೆಯ ನಾಲ್ಕು ಪ್ರಬಂಧಗಳು ವೈಯಕ್ತಿಕವಾದುವು. ಜೀವಂತವಿರುವ ಕವಿಗಳ ವಿಮರ್ಶೆಯು ಅನೇಕ ದೃಷ್ಟಿಯಿಂದ ಒಳಿತಲ್ಲದಿರಬಹುದು. ಆದರೂ, ವಿಮರ್ಶಕರು ತಮ್ಮ ವಿಮರ್ಶಾ ಕರ್ತವ್ಯವನ್ನು ಬದಿಗಿರಿಸಲಾರರು. ಪುಟ್ಟಪ್ಪನವರ ವಿಷಯವಾಗಿ ಗೋಕಾಕರು ಹಲವೆಡೆ ತೀಕ್ಷ್ಣವಾಗಿ, ಕಟುವಾಗಿ ಟೀಕಿಸಿದರೂ, ಈ ಟೀಕೆಯು ಕೆಲಮಟ್ಟಿಗಾದರೂ ಸರಿ ಎಂದು ಒಪ್ಪಲೇಬೇಕು. ಇಲ್ಲಿಯ ಲೇಖನಗಳು ಬೇರೆ ಬೇರೆ ಸನ್ನಿವೇಶಗಳಲ್ಲಿ, ಭಾವಗಳಲ್ಲಿ ಬರೆದಿರುವುದರಿಂದ ಅವುಗಳಲ್ಲಿ ಒಂದು ವಿಧವಾದ ಶಿಥಿಲತೆಯು ಕಂಡು ಬರಬಹುದು. ಆದರೂ, ಈ ಗ್ರಂಥವು ತನ್ನದೇ ಆದ ವಿಚಾರ ತತ್ವ ಹಾಗೂ ನವಚೇತನ ಇವುಗಳಿಂದೊಡಗೂಡಿ ಒಂದು ಸ್ವತಂತ್ರ ವಿಮರ್ಶಾ ಗುಣಾಯುಕ್ತವಾಗಿರುವುದರಿಂದ ರಸಾರಸನಿರಸ ಸಾಹಿತಿಗಳಿಗೆ ಮಾರ್ಗದರ್ಶಿ ಯಾಗುವುದೆಂಬ ನಂಬಿಕೆ ನನಗಿದೆ’ ಎಂದು ಪ್ರಶಂಸಿಸಿದ್ದಾರೆ.

( ಪ್ರಕಾಶನ: ಪದ್ಮ ಪ್ರಕಟನಾಲಯ, ನಿ.ಕ.ವಿ. ಸೇವಾ ಸಂಘ, ಹೈದ್ರಾಬಾದ್ (ದಕ್ಷಿಣ) ಪ್ರಕಟಣಾ ವರ್ಷ-1946, ಪುಟ: 200, ಬೆಲೆ: 2 ರೂ.) 

About the Author

ವಿ.ಕೃ. ಗೋಕಾಕ (ವಿನಾಯಕ)
(09 August 1909 - 28 April 1992)

‘ವಿನಾಯಕ’ ಕಾವ್ಯನಾಮದಿಂದ ಕೃತಿಗಳ ರಚನೆ ಮಾಡಿರುವ ವಿನಾಯಕ ಕೃಷ್ಣ ಗೋಕಾಕ್ ಅವರು ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಹೆಸರು. ಕರ್ನಾಟಕದಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ವ್ಯಕ್ತಿ ಗೋಕಾಕ್ ಅವರು. ಭಾರತದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೇಖಕ-ಸಾಹಿತಿ ಅವರಾಗಿದ್ದರು. ಧಾರವಾಡ ಜಿಲ್ಲೆಯ (ಈಗಿನ ಹಾವೇರಿ) ಸವಣೂರಿನಲ್ಲಿ 1909ರ ಆಗಸ್ಟ್ 9ರಂದು ಜನಿಸಿದರು. ತಂದೆ ಕೃಷ್ಣರಾಯ ತಾಯಿ ಸುಂದರಮ್ಮ. ಸವಣೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು. ಪುಣೆಯ ಫರ್ಗ್ಯೂಸನ್  ಕಾಲೇಜಿನಲ್ಲಿ ಅನಂತರ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಉನ್ನತ ...

READ MORE

Related Books