‘ಹೊಸಗನ್ನಡ ಸಾಹಿತ್ಯ ಶೈಲಿ’ ಕೃತಿಯು ಬಿ.ಎಚ್. ಶ್ರೀಧರ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ವಿಮರ್ಶೆಯೆಂದರೆ ಬುದ್ಧಿಯನ್ನು ಬಳಸಿ ವಸ್ತುಗಳ ಬೆಲೆಯನ್ನು ನಿಸ್ಕರ್ಷಿಸುವುದು; ಅದೊಂದು ಸಂಪೂರ್ಣವಾಗಿ ಅನುಭವವನ್ನು ಆಧರಿಸಿ ನಿಂತ ಕಲೆ; ಉತ್ತಮಾಂಶಗಳನ್ನು ಕಂಡು ಅವುಗಳನ್ನು ಯುಕ್ತರೀತಿಯಿಂದ ಅಳೆದು ಅದದರ ಬೆಲೆಯನ್ನು ಕಟ್ಟುವುದು; ಅದು ವಿಚಾರದ ಮಗು ಹಾಗೂ ಸಹೋದ್ಯೋಗಿ. ವಿಮರ್ಶಕರೆಂದರೆ ಇನ್ನೊಬ್ಬರ ಬಟ್ಟಿ ಯನ್ನು ಬ್ರಹ್ಷಿನಿಂದ ಚೊಕ್ಕ ಮಾಡುವವರು; ಸಾಹಿತ್ಯಕೃತಿಗಳೆಂಬ ಗಂಭೀರ ಸೈನ್ಯವನ್ನು ಕಾಯಲು ನಿಂತ ಯೋಧರು ಎಂಬೀ ನುಡಿಗಳು ದಿಗ್ಗರ್ಶಕಗಳು. ವಿಮರ್ಶಕ ವಸ್ತುಗಳ ಬೆಲೆಯ ನಿರ್ಣಾಯಕ; ಅನೇಕ ದೇಶ-ಕಾಲಗಳಲ್ಲಿ ಹುಟ್ಟದ ಅನೇಕ ಬಗೆಯ ಸಾಹಿತಿಗಳ ವಿವಿಧ ಸಾಹಿತ್ಯಕೃತಿಗಳನ್ನು ಓದಿ ತಿಳಿದು ಗುಣಗ್ರಹಣ ಮಾಡಿದ ಸಂಸ್ಕಾರವುಳ್ಳವನು. ಇಂಥ ಸುಸಂಸ್ಕೃತ ಮನದ ಆಡುಂಬೊಲ ಸಾಹಿತ್ಯರಾಜ್ಯ. ರಾಜ್ಯಗಳಲ್ಲಿ ಹೇಗೆ ನಿರಂಕುಶ ಪ್ರಭುತ್ರ, ಸಾಂಕುಶಪ್ರಭುತ್ತ, ರಾಜಪ್ರಭುತ್ವ, ಪ್ರಜಾಪ್ರಭುತ್ವ, ಸಾಮ್ಯಪ್ರಭುತ್ವ, ಗಣಪ್ರಭುತ್ವ, ಬಂಡವಾಳ ಪ್ರಭುತ್ವ ಎಂದು ಮುಂತಾಗಿ ನಾನಾ ವಿಧದ ಸಂವಿಧಾನಗಳಿಂದ ರಚಿತವಾದ ರಾಜ್ಯಸದ್ದತಿಗಳಿವೆಯೋ ಹಾಗೇ ಸಾಹಿತ್ಯರಾಜ್ಯ ದಲ್ಲೂ ಗದ್ಯ, ಪದ್ಯ, ಮಿಶ್ರ, ದೃಶ್ಯ, ಶ್ರವ್ಯ ಹಾಗೂ ಕತೆ ವರ್ಣನೆ, ವಿವರಣೆ ವಿಚಾರ ಮುಂತಾದ ಬಗೆಬಗೆಯ ರಚನೆಗಳಿವೆ. ಈ ಸ್ವರೂಪ ಭೇದಗಳಾದ ಬಳಿಕ ವಸ್ತುಭೇದ ಬರುತ್ತದೆ. ಒಂದೊಂದು ಜಾತಿಯ ಕೃತಿಗಳ ಬಳಗದಲ್ಲಿ ಅನೇಕ ರೀತಿಯ ವಸ್ತುಗಳಿರಬಹುದು. ಒಂದೇ ಕೃತಿಯಲ್ಲಿ ಅನೇಕ ಲಕ್ಷಣಗಳುಳ್ಳ ವಿವಿಧ ವಸ್ತುಗಳೂ ವಸ್ತುನಿಭಾಗಗಳೂ ಇರಬಹುದು; ಭಿನ್ನಭಿನ್ನ ಸನ್ನಿವೇಶ, ಪಾತ್ರ, ರಸ-ರುಚ್ಕಿ, ಅಭಿಪ್ರಾಯ, ಭಾವ-ಭಾವನೆಗಳ ಬೆಳೆಯಿರಬಹುದು. ಹಿಂದಿನ, ಇಂದಿನ ಹಾಗೂ ಮುಂದಿನ ಐತಿಹಾಸಿಕ, ವಾಸ್ತವಿಕ, ಕಾಲ್ಪನಿಕ ಭಾವಚಿತ್ರಗಳನ್ನು ಈ ಕೃತಿಯು ವಿವರಿಸುತ್ತದೆ.
ಕವಿ, ಅನುವಾದಕ, ಪ್ರಬಂಧಕಾರ ಶ್ರೀಧರರು ಹುಟ್ಟಿದ್ದು ದ. ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ. ತಂದೆ ಸೀತಾರಾಮ ಹೆಬ್ಬಾರರು, ತಾಯಿ ನಾಗಮ್ಮ. ಬಾರ್ಕೂರಿನಿಂದ ಬವಲಾಡಿಗೆ ಬಂದು ನೆಲೆಸಿದ ವಂಶಸ್ಥರು. ಪ್ರಾಥಮಿಕದಿಂದ ಹೈಸ್ಕೂಲು ವರೆಗೆ ಸೊರಬ, ಸಾಗರದಲ್ಲಿ ವಿದ್ಯಾಭ್ಯಾಸ, ಇಂಟರ್ ಮೀಡಿಯೆಟ್‌ಗೆ ಸೇರಿದ್ದು ಮೈಸೂರು. ಊಟಕ್ಕೆ ವಾರಾನ್ನ, ಪುಸ್ತಕಗಳಿಗೆ ಗ್ರಂಥಾಲಯ, ಫೀಸಿಗೆ ಸ್ಕಾಲರ್‌ಶಿಪ್, ಇಂಟರ್ ಮೀಡಿಯೆಟ್ ಮುಗಿಸಿದರು. ದೊರೆತ ಶಿಷ್ಯ ವೇತನ, ಮನೆ ಪಾಠ ಹೇಳಿ ತಂದೆಗೂ ಹಣ ಸಹಾಯ. ಬಿ.ಎ. ಆನರ್ಸ್ ಪಾಸು. ಹಲವಾರು ಪದಕ ಬಹುಮಾನ ಗಳಿಕೆ ಸಂತಸ. ಆದರೆ ಎಂ.ಎ. ಓದಲು ಹಣದ ಅಡಚಣೆಯಿಂದ ಬೆಂಗಳೂರಿನ ಪ್ರೆಸ್ ...
READ MORE