ಹಟ್ಟಿ ತುಂಬಾ ಅಂಗಳ- ಈ ಕೃತಿಯು ದೇವನೂರು ಮಹಾದೇವ ಅವರ ಸಾಹಿತ್ಯ ಕುರಿತ ವಿಮರ್ಶಾ ಲೇಖನಗಳ ಸಂಗ್ರಹವಾಗಿದೆ. ದೇವನೂರು ಮಹಾದೇವರ ಸಾಹಿತ್ಯ ಕುರಿತಂತೆ 13 ಲೇಖನಗಳಿವೆ. ದೇವನೂರು ಮಹಾದೇವ ಅವರ ಸಾಹಿತ್ಯದಲ್ಲಿ ಕಂಡು ಬರುವ ಪ್ರಮುಖ ಅಂಶಗಳನ್ನು ಚರ್ಚಿಸಲಾಗಿದೆ.ನ್ಯಾಯ ಪಂಚಾಯಿತಿಗಳು , ಸ್ತ್ರೀ ಸಂವೇದನೆಗಳು,ಮಾನವೀಯ ಮೌಲ್ಯಗಳು, ಆರ್ಥಿಕ ಅಸಮಾನತೆ, ದಲಿತ ಸಂಸ್ಕೃತಿ, ವೈಚಾರಿಕ ಚಿಂತನೆಗಳು, ಅಂತರ್ ಜಾತಿ ವಿವಾಹ ಮತ್ತು ಸವಾಲುಗಳು, ದಲಿತ ಚಳುವಳಿ,ಭ್ರಷ್ಟಾಚಾರ ವಿರೋಧಿ ಚಳುವಳಿ, ವರ್ಗ ಸಂಘರ್ಷ,ದಲಿತ ಸಮಾಜ, ಆಧುನಿಕತೆ ಮತ್ತು ಗ್ರಾಮೀಣ ಪ್ರಜ್ಞೆ, ಹೀಗೆ ವಿವಿಧ ಮುಖಗಳನ್ನು ಚರ್ಚಿಸಲಾಗಿದೆ.
ಡಾ. ವಾಸಯ್ಯ ಎನ್ ಅವರು ವಿಮರ್ಶಕರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ (2017) ಬಹುಮಾನ ದೊರೆತಿದೆ. ಕೃತಿಗಳು: ತುಂತುರು ಹನಿ, ವಸುಧೇಂದ್ರ ಅವರ ಸಣ್ಣ ಕತೆಗಳಲ್ಲಿ ಆಧುನೀಕರಣ, ವಸುಧೇಂದ್ರ ಅವರ ಪ್ರಬಂಧ ಸಾಹಿತ್ಯ ಅಧ್ಯಯನ, ಆರ್ತ ಧ್ವನಿ, ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ, ಹೊಸಗನ್ನಡ ಕಾವ್ಯದಲ್ಲಿ ಮಳೆ, ಕವಿಯ ಮನದಲ್ಲಿ ಬುದ್ಧ,, ಸಂಶೋಧನಾ ಸಿರಿ. ...
READ MORE