‘ಗದ್ಯ ಸಂಗಾತಿ’ ಕೃತಿಯು ಅಶೋಕ ನರಾಡೆ ಅವರ ವಿಮರ್ಶಾ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ನವೋದಯ - ನವ್ಯ- ನವೋತ್ತರಗಳಲ್ಲೇ ಸಾಹಿತ್ಯದ ಸ್ವರೂಪ ಬೇರೆ ಬೇರೆಯಾಗಿತ್ತು. ವೈಚಾರಿಕ - ದಲಿತ ಪ್ರಗತಿಶೀಲ ಎಂದು ಕರೆಯಲಾದ ಸಾಹಿತ್ಯ ಇನ್ನೊಂದು ಜಾಡುಹಿಡಿದು ಜನರನ್ನೆಚ್ಚರಿಸುವ ಪ್ರಯತ್ನ ಮಾಡಿತು. ಇಂಥ ಕಾಲದಲ್ಲೇ ಪರಂಪರೆಯ, ಜಾತಿಮತದ ಸುಳಿಯಿಂದ ಹೊರಗೆ ಬಂದಂಥ ಅಂತರ್ಜಾತೀಯ - ಅಂತರ್ ಮತೀಯ - ಪ್ರೇಮವಿವಾಹಗಳ ಕಥಾವಸ್ತುವನ್ನೊಳಗೊಂಡ ವಿಪುಲ ಸಾಹಿತ್ಯ ರಚನೆಯಾಯಿತು. ಇದರಿಂದ ಒಂದು ಸಾಮಾಜಿಕ ಪಲ್ಲಟವಾದದ್ದೇನೋ ನಿಜವಾದರೂ ಜನರಿಗೆ ಇದರಿಂದ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಯ ಅಂತರ ತಿಳಿಯದಂಥ ಸ್ಥಿತಿ ನಿರ್ಮಾಣವಾಯಿತು. ಎಲ್ಲ ಕಾಲದ ಲೇಖಕರು ಇದನ್ನು ಗಮನಿಸಿ ತಮ್ಮ ಕೃತಿಗಳಲ್ಲಿ ಅದನ್ನು ಪ್ರತಿಫಲಿಸಿದ್ದಾರೆ. ಈ ಕಾಲದ ಸಾಹಿತ್ಯಕ್ಕೆ ಸಾಕಷ್ಟು ವಿಮರ್ಶೆಗಳೂ ಬಂದಿವೆ, ವಿಮರ್ಶೆಗಳಿಗೂ ವಿಮರ್ಶೆಗಳು ಬಂದು ಒಂದು ರೀತಿಯ ಚಿಂತನ-ಮಂಥನ ನಡೆದಿದೆ. ಇಲ್ಲಿನ ಬರಹಗಳಲ್ಲಿ ಡಾ| ಅಶೋಕ ನರೋಡೆ ತಮ್ಮ ಅನಿಸಿಕೆಗಳನ್ನು ಕೃತಿ ವಸ್ತು ವಿಶ್ಲೇಷಣೆಯೊಂದಿಗೆ ನೀಡಿದ್ದು, ಆಯಾ ಬರಹಗಾರರ ಬರವಣಿಗೆಗೆ ಪ್ರೇರಕ ಶಕ್ತಿ ಏನಿರಬಹುದೆಂಬ ಹುಡುಕಾಟವನ್ನೂ ಮಾಡಿದ್ದಾರೆ.
(ಹೊಸತು, ಫೆಬ್ರವರಿ 2011, ಪುಸ್ತಕದ ಪರಿಚಯ)
ಪ್ರಸಿದ್ಧ ಬರಹಗಾರರ ಕೆಲವು ಕೃತಿಗಳನ್ನಾಯ್ತು ವಿಮರ್ಶೆ ಮಾಡಿದ ಈ ಸಂಕಲನದಲ್ಲಿ ನಾಲ್ಕು ವಿಭಾಗಗಳಿದ್ದು ಕಾದಂಬರಿ - ಕಥೆ - ಜೀವನ ಚರಿತ್ರೆ - ಅನುವಾದಗಳೆಂದು ವರ್ಗಿಕರಿಸಲಾಗಿದೆ. ನವೋದಯ - ನವ್ಯ- ನವೋತ್ತರಗಳಲ್ಲೇ ಸಾಹಿತ್ಯದ ಸ್ವರೂಪ ಬೇರೆ ಬೇರೆಯಾಗಿತ್ತು. ವೈಚಾರಿಕ - ದಲಿತ ಪ್ರಗತಿಶೀಲ ಎಂದು ಕರೆಯಲಾದ ಸಾಹಿತ್ಯ ಇನ್ನೊಂದು ಜಾಡುಹಿಡಿದು ಜನರನ್ನೆಚ್ಚರಿಸುವ ಪ್ರಯತ್ನ ಮಾಡಿತು. ಇಂಥ ಕಾಲದಲ್ಲೇ ಪರಂಪರೆಯ, ಜಾತಿಮತದ ಸುಳಿಯಿಂದ ಹೊರಗೆ ಬಂದಂಥ ಅಂತರ್ಜಾತೀಯ - ಅಂತರ್ ಮತೀಯ - ಪ್ರೇಮವಿವಾಹಗಳ ಕಥಾವಸ್ತುವನ್ನೊಳಗೊಂಡ ವಿಪುಲ ಸಾಹಿತ್ಯ ರಚನೆಯಾಯಿತು. ಇದರಿಂದ ಒಂದು ಸಾಮಾಜಿಕ ಪಲ್ಲಟವಾದದ್ದೇನೋ ನಿಜವಾದರೂ ಜನರಿಗೆ ಇದರಿಂದ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಯ ಅಂತರ ತಿಳಿಯದಂಥ ಸ್ಥಿತಿ ನಿರ್ಮಾಣವಾಯಿತು. ಎಲ್ಲ ಕಾಲದ ಲೇಖಕರು ಇದನ್ನು ಗಮನಿಸಿ ತಮ್ಮ ಕೃತಿಗಳಲ್ಲಿ ಅದನ್ನು ಪ್ರತಿಫಲಿಸಿದ್ದಾರೆ. ಈ ಕಾಲದ ಸಾಹಿತ್ಯಕ್ಕೆ ಸಾಕಷ್ಟು ವಿಮರ್ಶೆಗಳೂ ಬಂದಿವೆ, ವಿಮರ್ಶೆಗಳಿಗೂ ವಿಮರ್ಶೆಗಳು ಬಂದು ಒಂದು ರೀತಿಯ ಚಿಂತನ-ಮಂಥನ ನಡೆದಿದೆ. ಇಲ್ಲಿನ ಬರಹಗಳಲ್ಲಿ ಡಾ| ಅಶೋಕ ನರೋಡೆ ತಮ್ಮ ಅನಿಸಿಕೆಗಳನ್ನು ಕೃತಿ ವಸ್ತು ವಿಶ್ಲೇಷಣೆಯೊಂದಿಗೆ ನೀಡಿದ್ದು, ಆಯಾ ಬರಹಗಾರರ ಬರವಣಿಗೆಗೆ ಪ್ರೇರಕ ಶಕ್ತಿ ಏನಿರಬಹುದೆಂಬ ಹುಡುಕಾಟವನ್ನೂ ಮಾಡಿದ್ದಾರೆ. ನಿರಂಜನರ ಚಿರಸ್ಮರಣೆ, ಎಚ್, ಎನ್. ಅವರ ತೆರೆದ ಮನ, ರು. ನಿಂ ಬೆಳಗಲಿ ಅವರ ಮರಾಠಿ ಅನುವಾದಗಳು, ಇಲ್ಲಿ ವಿಮರ್ಶೆಗೊಳಗಾದ ಕೆಲವು ಕೃತಿಗಳು
ನವೋದಯ - ನವ್ಯ- ನವೋತ್ತರಗಳಲ್ಲೇ ಸಾಹಿತ್ಯದ ಸ್ವರೂಪ ಬೇರೆ ಬೇರೆಯಾಗಿತ್ತು. ವೈಚಾರಿಕ - ದಲಿತ ಪ್ರಗತಿಶೀಲ ಎಂದು ಕರೆಯಲಾದ ಸಾಹಿತ್ಯ ಇನ್ನೊಂದು ಜಾಡುಹಿಡಿದು ಜನರನ್ನೆಚ್ಚರಿಸುವ ಪ್ರಯತ್ನ ಮಾಡಿತು. ಇಂಥ ಕಾಲದಲ್ಲೇ ಪರಂಪರೆಯ, ಜಾತಿಮತದ ಸುಳಿಯಿಂದ ಹೊರಗೆ ಬಂದಂಥ ಅಂತರ್ಜಾತೀಯ - ಅಂತರ್ ಮತೀಯ - ಪ್ರೇಮವಿವಾಹಗಳ ಕಥಾವಸ್ತುವನ್ನೊಳಗೊಂಡ ವಿಪುಲ ಸಾಹಿತ್ಯ ರಚನೆಯಾಯಿತು. ಇದರಿಂದ ಒಂದು ಸಾಮಾಜಿಕ ಪಲ್ಲಟವಾದದ್ದೇನೋ ನಿಜವಾದರೂ ಜನರಿಗೆ ಇದರಿಂದ ಸ್ವಾತಂತ್ರ್ಯ ಮತ್ತು ಸ್ಟೇಚ್ಛೆಯ ಅಂತರ ತಿಳಿಯದಂಥ ಸ್ಥಿತಿ ನಿರ್ಮಾಣವಾಯಿತು. ಎಲ್ಲ ಕಾಲದ ಲೇಖಕರು ಇದನ್ನು ಗಮನಿಸಿ ತಮ್ಮ ಕೃತಿಗಳಲ್ಲಿ ಅದನ್ನು ಪ್ರತಿಫಲಿಸಿದ್ದಾರೆ. ಈ ಕಾಲದ ಸಾಹಿತ್ಯಕ್ಕೆ ಸಾಕಷ್ಟು ವಿಮರ್ಶೆಗಳೂ ಬಂದಿವೆ, ವಿಮರ್ಶೆಗಳಿಗೂ ವಿಮರ್ಶೆಗಳು ಬಂದು ಒಂದು ರೀತಿಯ ಚಿಂತನ-ಮಂಥನ ನಡೆದಿದೆ. ಇಲ್ಲಿನ ಬರಹಗಳಲ್ಲಿ ಡಾ| ಅಶೋಕ ನರೋಡೆ ತಮ್ಮ ಅನಿಸಿಕೆಗಳನ್ನು ಕೃತಿ ವಸ್ತು ವಿಶ್ಲೇಷಣೆಯೊಂದಿಗೆ ನೀಡಿದ್ದು, ಆಯಾ ಬರಹಗಾರರ ಬರವಣಿಗೆಗೆ ಪ್ರೇರಕ ಶಕ್ತಿ ಏನಿರಬಹುದೆಂಬ ಹುಡುಕಾಟವನ್ನೂ ಮಾಡಿದ್ದಾರೆ.
©2024 Book Brahma Private Limited.