ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬೇಂದ್ರೆ ಭಾವಗೀತೆಗಳನ್ನು ವಿವಿಧ ಮನೋ ನೆಲೆಯಲ್ಲಿ ವಿಭಾಗಿಸಿ ವಿಶ್ಲೇಷಿಸಿದ ಕೃತಿ-ಭಾವಗೀತೆಗಳ ಸರದಾರ ವರಕವಿ ಬೇಂದ್ರೆ. ಆಧುನಿಕ ಕನ್ನಡ ಗೀತೆಗಳಲ್ಲಿ ಭಾವಗೀತೆಗಳ ಪ್ರಭಾವ, ಕನ್ನಡ ಸಾಹಿತ್ಯದಲ್ಲಿ ಬೇಂದ್ರೆ ಅವರ ಭಾವಗೀತೆಗಳ ಸ್ಥಾನಮಾನ, ಬೇಂದ್ರೆ ಅವರಅಧ್ಯಾತ್ಮಿಕ ನೆಲೆಯ ಭಾವಗೀತೆಗಳು, ನೋವಿನ ಸ್ಪಂದನೆಯ ಭಾವಗೀತೆಗಳು, ಪ್ರಣಯ ವಿಚಾರದ ಭಾವಗೀತೆಗಳು, ಮಾತೃಪ್ರೇಮ, ಪರಿಶುದ್ಧ ಹೃದಯದ ಭಾವಗೀತೆಗಳು, ಶಿಶುಕೇಂದ್ರೀತ ವಿಷಯದ ಭಾವಗೀತೆಗಳು ಹೀಗೆ ಒಟ್ಟು 9 ಅಧ್ಯಾಯಗಳಡಿ ಬೇಂದ್ರೆ ಭಾವಗೀತೆಗಳ ಮೇಲೆಯೇ ವಿಶ್ಲೇಷಣೆಗಳನ್ನು ಒಳಗೊಂಡಿದೆ. ಈ ಮೂಲಕ ಲೇಖಕರು ಬೇಂದ್ರೆ ಕಾವ್ಯದ ರಸಾನುಸಂದೇಶದ ಅವಲೋಕನ ಮಾಡಿದ್ದಾರೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MOREಬೇಂದ್ರೆಯವರ ಭಾವಗೀತೆಗಳು ಕೇಳುಗರ ಅಂತಃಕರಣವನ್ನು ಮಿಡಿಯುತ್ತದೆ. ಜೀವಾನಂದ, ಭಾವಾನಂದ, ಆತ್ಮಾನಂದಗಳ ಸಂಗಮದಂತೆ ಇವೆ. ನಮ್ಮ ಮನಸ್ಸು ಪ್ರಫುಲ್ಲವಾಗಿ ಅರಳಲು ಉತ್ತಮ ಸಂಗೀತವನ್ನು ನಾವು ನಿತ್ಯವೂ ಆಸ್ವಾದಿಸಬೇಕು. ಉತ್ತಮ ಗೀತೆಗಳನ್ನು ಹಾಡಬೇಕು. ಮನವನ್ನು ಆಕರ್ಷಿಸುವ ಹಾಡುಗಳು ಈ ಕೃತಿಯಲ್ಲಿವೆ.
(ಕೃತಿಯ ಬೆನ್ನುಡಿಯಲ್ಲಿ ಲೇಖಕರು ಅಭಿವ್ಯಕ್ತಪಡಿಸಿರುವ ಮಾತುಗಳು)