ಗಾಂಧಿ ಒಂದು ಚೇತನರೂಪದ ಸಿದ್ಧಾಂತವಾಗಬೇಕೆ ವಿನಃ ಸಾಂಸ್ಥಿಕ ರೂಪ ಪಡೆದು ದೇವಾಲಯದಲ್ಲಿ ಭದ್ರವಾಗಬಾರದು ಎನ್ನುವ ಬಸವರಾಜ ಕಟ್ಟೀಮನಿ ಅವರ ನಿಲುವನ್ನು ಮರಿಗುದ್ದಿ ಅವರು ತುಂಬ ಮೆಚ್ಚಿಕೊಳ್ಳುತ್ತಾರೆ. ಆದರೆ ಅದೇ ಬಸವರಾಜ ಕಟ್ಟೀಮನಿ ತಮಗೆ ಮತ್ತೊಂದು ಸಲ ಎಮ್.ಎಲ್.ಸಿ.ಸ್ಥಾನ ಸಿಗಬೇಕೆಂದು ಎಲ್ಲಿಲ್ಲದ ಕಸರತ್ತು ಮಾಡಿದ್ದು ಸೋಜಿಗ ಎನ್ನುತ್ತಾರೆ ಮರಿಗುದ್ದಿ. ಕವಿಯಾಗಿ ನಾಡಿಗೆ ಹೆಚ್ಚಾಗಿ ಪರಿಚಿತರಾದ ದೇವೇಂದ್ರಕುಮಾರ ಹಕಾರಿಯವರು ಬರೆದ ಎರಡು ಕಾದಂಬರಿಗಳ (ಕೂಗುತಿವೆ ಕಲ್ಲು, ಚಲ್ವ ಕೋಗಿಲೆ) ಬಗ್ಗೆ ಇಲ್ಲಿ ಮರಿಗುದ್ದಿಯವರು ವಸ್ತುನಿಷ್ಠವಾಗಿ ಬರೆದಿದ್ದಾರೆ. ಈ ಎರಡು ಕಾದಂಬರಿಗಳ ವಿವರಣೆಯ ಮುಂಚೆ ಕನ್ನಡ ಕಾದಂಬರಿ ಹುಟ್ಟಿನ ವಿವರ ಮತ್ತು ಒಂದು ಸಾಹಿತ್ಯಪ್ರಕಾರವಾಗಿ: ಕಾದಂಬರಿ ಬೆಳೆದು ಬಂದ ಬಗೆಯನ್ನು ಮರಿಗುದ್ದಿಯವರು ಇಲ್ಲಿ ವಿಶ್ಲೇಷಿಸಿದ್ದಾರೆ.
“ಚೆನ್ನಮಲ್ಲಿಕಾರ್ಜುನಮಾಸ್ತರರ ವಿಮರ್ಶಾಪ್ರಜ್ಞೆ, ಚೆನ್ನಮಲ್ಲಿಕಾರ್ಜುನ ಮಾಸ್ತರರು ಹೆಚ್ಚೂ ಕಡಿಮೆ ಈಗ ಅಜ್ಜಾತ. ಕನ್ನಡ ಅಧ್ಯಯನದ ಬಹುಮುಖ್ಯವಾದ ಕೊಂಡಿಯಾಗಿದ್ದ ಆ ಕಾಲಘಟ್ಟದಲ್ಲೇ ವಿಮರ್ಶಾ ಸಾಹಿತ್ಯಕ್ಕೆ ಒಂದು ಆಸ್ತಿಭಾರ ಹಾಕಿದ ಮಾಸ್ತರರು ವಿಮರ್ಶೆಯನ್ನು ಸಾಂಪ್ರದಾಯಿಕ ಶೈಲಿಯಿಂದ ಶಾಸ್ತ್ರರೂಪದ ಶೈಲಿಗೆ ತಂದವರು. ಘ.ಗು.ಹಳಕಟ್ಟಿ,ಹರ್ಡೇಕರ ಮಂಜಪ್ಪ ಮತ್ತು ಮಧುರಚೆನ್ನರ ಸಾಲಿಗೆ ಸೇರಿದ ಚೆನ್ನಮಲ್ಲಿಕಾರ್ಜುನಮಾಸ್ತರರು ಬಹುಶಃ ನಾಡಿಗೆ ಅಪರಿಚಿತರಾಗಿ ಉಳಿದದ್ದು ಅವರು ಹೆಚ್ಚಾಗಿ ಸೀಮಿತ ಸಾಹಿತ್ಯದ ಪರಿಚಾರಿಕೆ ಮಾಡಿದ್ದು ಎಂದು ಕಾಣುತ್ತದೆ. ವೀರಶೈವ ಸಾಹಿತ್ಯದ ಶೋಧ, ಪರಿಷ್ಕರಣ, ಸಂಪಾದನೆ ಮತ್ತು ಪ್ರಕಟಣೆ ಹಾಗು ವಿಮರ್ಶನಕ್ಕೆ ಅವರು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರಿಂದ ಮುಖ್ಯವಾಹಿನಿಯ ಸಾಹಿತ್ಯದ ಓದುಗರಾದ ನಮಗೆ ಅವರು ಅಪರಿಚಿತರಾಗಿಯೇ ಉಳಿದರು. ಅವರನ್ನು ಪುನಃ ಪರಿಚಯಿಸಿದ ಲೇಖಕರಾದ ಮರಿಗುದ್ದಿ ಇಲ್ಲಿ ಅಭಿನಂದನಾರ್ಹರಾಗಿದ್ದಾರೆ. ಈ ಪುಸ್ತಕದಲ್ಲಿ ರಂ.ಶಾ ಲೋಕಾಪುರ, ಬುದ್ಧಣ್ಣ ಹಿಂಗಮಿರೆ, ಸತ್ಯಾನಂದ ಪಾತ್ರೋಟ ಮತ್ತು ಅನಕೃ ಅವರ ಬಗ್ಗೆ ಅಂದರೆ ಕಾಲದ ಮಿತಿದಾಟಿದ ಎರಡು ದ್ರುವಗಳ ಲೇಖಕರ ಬಗ್ಗೆ ವಿಸ್ತೃತವಾದ ಲೇಖನಗಳಿವೆ. “ರಂಶಾ' ಕೃತಿಯ ವಿಮರ್ಶೆಯಲ್ಲಿ ಲೇಖಕರ ಆಳವಾದ ಅಧ್ಯಯನ ಎದ್ದುಕಾಣುತ್ತದೆ. ಈ ಸಂಕಲನದಲ್ಲಿ ಇನ್ನೊಂದು ಮಹತ್ವದ ಲೇಖನ ನಿರುಪಾಧೀಶರು. ಬರೆದಮಹಾಕಾವ್ಯ "ಬಯಲೋಲ್ಲಾಸ'.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MORE