ಅಭಿನವ ಪ್ರಕಾಶನದ ಸರಸ್ವತಿ ನೆನಪು ಮಾಲಿಕೆಯಲ್ಲಿ ಪ್ರಕಟವಾದ ’ಬೇಂದ್ರೆಯವರ ಕಾವ್ಯ’ ಈ ಕೃತಿಯನ್ನು ಕವಿ ಗೋಪಾಲಕೃಷ್ಣ ಅಡಿಗರ ಲೇಖನಗಳ ಸಂಗ್ರಹದಲ್ಲಿ ಹೊರತರಲಾಗಿದೆ.
ಕನ್ನಡದ ಕವಿಗಳಲ್ಲಿ ಪಂಪ ನಾರಣಪ್ಪರ ತರುವಾಯ ಕನ್ನಡದ ಜೀವಾಳವನ್ನೇ ಹಿಡಿದು ನಮ್ಮ ಭಾಷೆಯ ಜೀವನಾಡಿಯನ್ನೇ ಮಿಡಿದು ಕಾವ್ಯ ರಚನೆ ಮಾಡಿದ ಕವಿ ಬೇಂದ್ರೆ. ತಮ್ಮ ವೈಯಕ್ತಿಕ ಜೀವನದ ನೋವು ನಲಿವುಗಳನ್ನೂ, ಪ್ರೀತಿ ವಿರಹಗಳ ಕುರಿತು ಈ ಕವಿಯಷ್ಟು ಭಾವಪೂರ್ವ, ಹೃದಯಸ್ಪರ್ಶಿ ಗೀತೆಗಳನ್ನು ರಚಿಸಿದವರು.
ಈ ಶತಮಾನದ ಬಹು ಮುಖ್ಯ ಜನಕ ಕವಿ ಬೇಂದ್ರೆಯವರು. ಈಗ ಬರೆಯುತ್ತಿರುವ ಕವಿಗಳೆಲ್ಲರೂ ಬೇಂದ್ರೆಕಾವ್ಯದ ಮಕ್ಕಳು, ಮೊಮ್ಮಕ್ಕಳು, ಅಥವಾ ಮರಿ ಮಕ್ಕಳು. ಶ್ರೀಯುತರ ಕಾವ್ಯವನ್ನು ವಿಮರ್ಶಿಸುವಾಗಲೂ, ಟೀಕಿಸುವಾಗಲೂ, ಅದರ ವಿರುದ್ಧ ಪ್ರತಿಭಟಿಸುವಾಗಲೂ, ಅವರ ದಾರಿ ಬಿಟ್ಟು ಬೇರೆ ದಾರಿ ಹಿಡಿಯುವಾಗಲೂ, ಅದನ್ನು ನಿರಾಕರಿಸುವ, ಸೋಗು ಹಾಕುವಾಗ, ಹಾಕಲೇಬೇಕಾಗಿ ಬಂದಾಗಲೂ ಈ ಮಾತನ್ನು ಮರೆಯಲಾಗದು. ಬೇಂದ್ರೆಯವರ ಕಾವ್ಯ ನಮ್ಮ ಸತ್ವದಲ್ಲಿ ಒಂದಾಗಿದೆ. ಅದನ್ನು ನಿರಾಕರಿಸಿ ಉಪಯೋಗವಿಲ್ಲ. ಅದನ್ನು ಧಿಕ್ಕರಿಸುವುದೆಂದರೆ ನಮ್ಮನ್ನು ನಾವೇ ಧಿಕ್ಕರಿಸಿಕೊಂಡಂತೆ.ಎನ್ನುವಂತಹ ವಿಶ್ಲೇಷಣಾತ್ಮಕ ಬರಹವನ್ನು ಒಳಗೊಂಡ, ಮಹಾಕವಿಯ ಕುರಿತಾದ ಲೇಖನಗಳ ಸಂಕಲನ ಕೃತಿ ’ಬೇಂದ್ರೆಯವರ ಕಾವ್ಯ’.
ಕನ್ನಡದಲ್ಲಿ ನವ್ಯಕಾವ್ಯಕ್ಕೆ ನಾಂದಿ ಹಾಡಿದ ಮೊಗೇರಿ ಗೋಪಾಲಕೃಷ್ಣ ಅಡಿಗ ಅವರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಗುರುತಿಸಲಾಗುತ್ತಿತ್ತು. ಅಡಿಗರು 1918ರ ಫೆಬ್ರುವರಿ 18ರಂದು ಜನಿಸಿದರು. ತಂದೆ ರಾಮಪ್ಪ ಮತ್ತು ತಾಯಿ ಗೌರಮ್ಮ. ಬೈಂದೂರಿನಲ್ಲಿ ಶಾಲಾ ಶಿಕ್ಷಣ, ಮೈಸೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಆಯಿತು. ಬಿ.ಎ. ಆನರ್ಸ್ ಪದವಿ (1942) ಗಳಿಸಿದ ನಂತರ ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ಕೆಲಸಮಾಡಿದ್ದರು. ಆಮೇಲೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದಿ ಎಂ.ಎ. ಪದವಿ (1947) ಗಳಿಸಿದರು. ಮೈಸೂರಿನ ಶಾರದಾವಿಲಾಸ್ ಕಾಲೇಜಿನಲ್ಲಿ ಉಪನ್ಯಾಸಕ (1948-52), ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ (1952-54) ...
READ MORE