ಡಾ. ದೇವಿಪ್ರಸಾದ್ ಚಟ್ಟೋಪಾಧ್ಯಾಯ ಅವರು ಯುರೋಪಿನ ಪ್ರಮುಖ ತತ್ವಶಾಸ್ತ್ರ ಚಿಂತನೆಗಳನ್ನು ಸಾರವತ್ತಾಗಿ ಮತ್ತು ಸರಳವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮೊದಲ ಅಧ್ಯಾಯ ಆ ಕಾಲ ಘಟ್ಟದ ಸರಳ ಪರಿಚಯವನ್ನು ಕೊಡುತ್ತದೆ. ಮಧ್ಯಯುಗದ ಕಾಲಘಟ್ಟದಲ್ಲಿ ತತ್ವಶಾಸ್ತ್ರ ಮತ್ತು ಪುರೋಹಿತ ಶಾಹಿಗಳ ನಡುವಿನ ತಿಕ್ಕಾಟವನ್ನು ಈ ಅಧ್ಯಾಯ ಹೇಳುತ್ತದೆ. ಹಲವು ತತ್ವಶಾಸ್ತ್ರಜ್ಞರು ಕ್ರೂರ ಶಿಕ್ಷೆಗಳಿಗೂ ಎದೆಯೊಡ್ಡಬೇಕಾಯಿತು. ಚರ್ಚುಗಳು, ರಾಜರ ನಡುವೆ ತತ್ವಶಾಸ್ತ್ರ ಒಂದು ಬಂಡಾಯವೇ ಆಗಿತ್ತು. ಚರ್ಚುಗಳ ಅಧಿಕಾರ ಕುಂಠಿತಗೊಂಡಂತೆ ತತ್ವಶಾಸ್ತ್ರ ಮತ್ತು ಅದರ ಜೊತೆಗೇ ವಿಜ್ಞಾನ ಮುನ್ನೆಲೆಗೆ ಬರತೊಡಗಿತು. ಆಧುನಿಕ ವಿಜ್ಞಾನದ ಪ್ರವಾದಿಗಳು ಎಂದೇ ಕರೆಯಲ್ಪಡುವ ಫ್ರಾನ್ಸಿಸ್ ಬೇಕನ್, ರೇನೆ ಡೆಕಾರ್ಟ್ 16-17ನೆ ಶತಮಾನದ ಪ್ರಮುಖ ತತ್ವಶಾಸ್ತ್ರಜ್ಞರು. ಈ ಅಧ್ಯಾಯದಲ್ಲಿ ಈ ಕುರಿತಂತೆ ಸಣ್ಣ ಪರಿಚಯವು ಈ ಕೃತಿಯಲ್ಲಿದೆ. ಫ್ರಾನ್ಸಿಸ್ ಬೇಕನ್, ಡೆಕಾರ್ಟ್, ಸ್ಪಿನೋಜಾ, ಲೈಬ್ರಿಜ್, ಲಾಕ್, ಬಾರ್ಕ್ಸಿ, ಹ್ಯಮ್, ಕಾಂಟ್, ಹೆಗೆಲ್‌ರಿಂದ ಮಾರ್ಕ್ಸ್‌ನ ವರೆಗೂ ಈ ಕೃತಿಯಲ್ಲಿ ಅವರ ಬದುಕು ಮತ್ತು ಚಿಂತನೆಗಳನ್ನು ಇಲ್ಲಿ ನೀಡಲಾಗಿದೆ. ಹಾಗೆಯೇ ಫ್ರಾನ್ಸಿನ ಮೇಲೆ ಇವರು ಬೀರಿದ ಪರಿಣಾಮಗಳನ್ನೂ ಈ ಕೃತಿಯು ಚರ್ಚಿಸುತ್ತದೆ.